ರೇವಂತ್ ರೆಡ್ಡಿ ಭೇಟಿಯಾಗಿ ಹೂಗುಚ್ಛ ನೀಡಿದ ಡಿಜಿಪಿಯನ್ನು ಅಮಾನತು ಮಾಡಿದ ಚುನಾವಣಾ ಆಯೋಗ!
ಚುನಾವಣೆಯ ಮತಎಣಿಕೆ ಮುಕ್ತಾಯಕ್ಕೂ ಮುನ್ನವೇ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿದ್ದ ತೆಲಂಗಾಣದ ಡಿಜಿಪಿ ಅಂಜನಿ ಕುಮಾರ್ ಅವರನ್ನು ಕೇಂದ್ರ ಚುನಾವಣಾ ಆಯೋಗ ತಕ್ಷಣದಿಂದಲೇ ಅಮಾನತು ಮಾಡಿದೆ.
ನವದೆಹಲಿ (ಡಿ.3): ಮಾದರಿ ನೀತಿ ಸಂಹಿತೆ ಮತ್ತು ಸಂಬಂಧಿತ ನೀತಿ ನಿಯಮಗಳ ಉಲ್ಲಂಘನೆಗಾಗಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ತೆಲಂಗಾಣದ ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ಮಹೇಶ್ ಭಾಗವತ್ ಅವರೊಂದಿಗೆ ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ತೆಲಂಗಾಣ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಅನುಮುಲಾ ರೇವಂತ್ ರೆಡ್ಡಿ ಅವರನ್ನು ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದರು. ಸ್ಪರ್ಧಾಕಾಂಕ್ಷಿಯ ನಿವಾಸದಲ್ಲಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದು ಮಾತ್ರವಲ್ಲದೆ, ಅವರ ನಿವಾಸಕ್ಕೆ ನೀಡಿರುವ ಭದ್ರತೆಯಲ್ಲಿ ಹೆಚ್ಚಿಸುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲಿಯೇ ಇಸಿಐ ಅವರನ್ನು ಅಮಾನತು ಮಾಡಿದೆ. ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಮುಗಿದು, ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನುವ ಪ್ರಮಾಣಪತ್ರ ಸಿಕ್ಕಿದ ಬಳಿಕವೇ ಅವರು ಶಾಸಕರು ಎನಿಸಿಕೊಳ್ಳುತ್ತಾರೆ. ಆದರೆ, ಮುಂದಿನ ಸಿಎಂ ಆಗುವ ಹಾದಿಯಲ್ಲಿರುವ ರೇವಂತ್ ರೆಡ್ಡಿ ಅವರು ಪ್ರತಿನಿಧಿಸುವ ಕೊಡಂಗಲ ಹಾಗೂ ಕಾಮರೆಡ್ಡಿ ಕ್ಷೇತ್ರದಲ್ಲಿ ಮತಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದಾಗಲೇ ಇವರು ಭೇಟಿ ಮಾಡಿ ಹೂಗುಚ್ಛ ನೀಡಿರುವುದು ನೀತಿ ಸಂಹಿತೆ ಉಲ್ಲಂಘನೆ ಎನಿಸಿದೆ.
ತೆಲಂಗಾಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮತ್ತು ಬಡವರಿಗೆ ನೆರವಾಗಲು ಸರ್ಕಾರ ಶ್ರಮಿಸಲಿದೆ ಎಂದು ಸಿಎಂ ಸ್ಥಾನದ ಮುಂಚೂಣಿಯಲ್ಲಿರುವ ರೇವಂತ್ ರೆಡ್ಡಿ ಭರವಸೆ ನೀಡಿದ್ದಾರೆ. ಬಿಆರ್‌ಎಸ್ ಸರ್ಕಾರದಿಂದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ, ಕಾಂಗ್ರೆಸ್ ಅದನ್ನು ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತದೆ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು.
'ಈಗ ಹೇಳಿ ಪನೌತಿ ಯಾರು?..' ಕಾಂಗ್ರೆಸ್ ಸೋಲಿನ ಸೂಚನೆ ಬೆನ್ನಲ್ಲಿಯೇ ಪಾಕ್ ಕ್ರಿಕೆಟಿಗನ ಟ್ವೀಟ್ ವೈರಲ್!
2009 ರ ಡಿಸೆಂಬರ್ 3 ರಂದು ತೆಲಂಗಾಣಕ್ಕಾಗಿ ಶ್ರೀಕಾಂತಾ ಚಾರಿ ಅವರು ತಮ್ಮ ಪ್ರಾಣವನ್ನು ಅರ್ಪಿಸಿದರು ಎಂದು ಸ್ಮರಿಸಿದ ಅವರು, 2023 ರ ಡಿಸೆಂಬರ್ 3 ರಂದು ರಾಜ್ಯದ ಜನರು ನೀಡಿದ ಜನಾದೇಶವು ಅವರಿಗೆ ಸೂಕ್ತವಾದ ಗೌರವವಾಗಿದೆ ಎಂದಿದ್ದಾರೆ.. ರೇವಂತ್ ರೆಡ್ಡಿ ಅವರು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಕಾಂಗ್ರೆಸ್ ಚುನಾವಣಾ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ಪಕ್ಷವು ವಿರೋಧ ಪಕ್ಷಗಳನ್ನು ಗೌರವಿಸುತ್ತದೆ ಮತ್ತು ಸರ್ಕಾರವನ್ನು ನಡೆಸುವಲ್ಲಿ ಅವರಿಗೆ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು. ಮುಂದೆಯೂ ಬಿಆರ್ ಎಸ್ ಇದೇ ಮನೋಭಾವ ತೋರಲಿ ಎಂದು ಹಾರೈಸಿದರು.
ತೆಲಂಗಾಣದಲ್ಲಿ ನಮ್ಮ ಗ್ಯಾರಂಟಿ ಫಲ ನೀಡಿದೆ: ಸಚಿವ ಪ್ರಿಯಾಂಕ್ ಖರ್ಗೆ