Asianet Suvarna News Asianet Suvarna News

Eid-ul-Fitr 2022 moon sighting : ಸೌದಿ ಅರೇಬಿಯಾ, ಯುಎಇಯಲ್ಲಿ ಮೇ 2 ರಂದು ಈದ್!

ರಂಜಾನ್ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಅಧಾರಿತ ಕ್ಯಾಲೆಂಡರ್ ಆಗಿರುವುದರಿಂದ, ಹೊಸ ತಿಂಗಳ ಪ್ರಾರಂಭವನ್ನು ಗುರುತಿಸಲು ಚಂದ್ರನನ್ನು ನೋಡಲಾಗುತ್ತದೆ.
 

Eid ul Fitr will be celebrated in Saudi Arabia and UAE on May 2nd as the moon was not sited on Saturday san
Author
Bengaluru, First Published May 1, 2022, 3:07 PM IST | Last Updated May 1, 2022, 3:15 PM IST

ನವದೆಹಲಿ (ಮೇ.1): ಶನಿವಾರ ಚಂದ್ರದರ್ಶನವಾಗದ (moon sighting) ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ (Saudi Arabia ) ಮತ್ತು ಯುಎಇಯಲ್ಲಿ (UAE) ಮೇ 2 ರಂದು ಈದ್-ಉಲ್-ಫಿತರ್ (Eid-ul-Fitr ) ಅನ್ನು ಆಚರಿಸಲಾಗುತ್ತದೆ. ಯುಎಇ, ಕತಾರ್, ಇರಾಕ್, ಕುವೈತ್, ಬಹ್ರೇನ್, ಪ್ಯಾಲೆಸ್ತೀನ್, ಸಿರಿಯಾ, ಯೆಮೆನ್, ಲೆಬನಾನ್, ಈಜಿಪ್ಟ್, ಸುಡಾನ್ ಮತ್ತು ಟರ್ಕಿ ಕೂಡ ಈದ್ ಅಲ್-ಫಿತರ್‌ನ ಮೊದಲ ದಿನವನ್ನು ಮೇ 2 ಎಂದು ಘೋಷಿಸಿತ್ತು ಎಂದು ಅಂತರರಾಷ್ಟ್ರೀಯ ಖಗೋಳ ಕೇಂದ್ರವು ಟ್ವಿಟರ್‌ನಲ್ಲಿ ತಿಳಿಸಿದೆ. ಏಪ್ರಿಲ್ 2 ರಂದು ರಂಜಾನ್ ಆರಂಭವನ್ನು ಗುರುತಿಸಿದ ಈ ದೇಶಗಳು 30 ದಿನಗಳ ಕಾಲ ಉಪವಾಸ ಮಾಡುತ್ತವೆ.

ಶವ್ವಾಲ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳ ಮೊದಲ ದಿನದಂದು ಈದ್-ಉಲ್-ಫಿತರ್ ಬರುತ್ತದೆ, ಇದನ್ನು 'ಉಪವಾಸ ಮುರಿಯುವ ಹಬ್ಬ' ಎಂದು ಹೇಳಲಾಗುತ್ತದೆ. ರಂಜಾನ್ ತಿಂಗಳು ಶವ್ವಾಲ್‌ಗಿಂತ ಮೊದಲು ಬರುತ್ತದೆ ಹಾಗೂ ಈ ಕ್ಯಾಲೆಂಡರ್ ಇಸ್ಲಾಮಿಕ್‌ನಲ್ಲಿ ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರಿಗೆ ಪವಿತ್ರ ಕುರಾನ್ ಕಂಡ ತಿಂಗಳು ಕೂಡ ಇದೂ ಎಂದು ಹೇಳಲಾಗುತ್ತದೆ. ರಂಜಾನ್ ಸಮಯದಲ್ಲಿ, ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಇಡೀ ತಿಂಗಳು ಉಪವಾಸ ಮಾಡುತ್ತಾರೆ. ಅವರು ತಮ್ಮ ಪ್ರಾರ್ಥನೆಯನ್ನು ಇನ್ನಷ್ಟು ವಿನಮ್ರವಾಗಿ ಮಾಡುವುದರೊಂದಿಗೆ, ಬಡವರಿಗೆ ಮತ್ತು ನಿರ್ಗತಿಕರಿಗೆ ದಾನವನ್ನು ನೀಡುತ್ತಾರೆ.

ರಂಜಾನ್ ನಂತರ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಆಧಾರಿತ ಕ್ಯಾಲೆಂಡರ್ ಆಗಿರುವುದರಿಂದ, ಹೊಸ ತಿಂಗಳ ಪ್ರಾರಂಭವನ್ನು ಗುರುತಿಸಲು ಚಂದ್ರನನ್ನು ನೋಡಲಾಗುತ್ತದೆ. ಈದ್ ಉಲ್ ಫಿತರ್ ಅನ್ನು ಅರೇಬಿಕ್ ಭಾಷೆಯಲ್ಲಿ ಸಲಾತ್ ಅಲ್ ಈದ್ ಎಂದು ಕರೆಯಲಾಗುತ್ತದೆ. ಮುಸ್ಲಿಮರು ಮಸೀದಿಗಳಲ್ಲಿ ಹಾಗೂ ತೆರೆದ ಸ್ಥಳದಲ್ಲಿ ಎರಡು ರಕಾತ್ ಪ್ರಾರ್ಥನೆಯನ್ನು ಸಲ್ಲಿಸಲು ಒಟ್ಟುಗೂಡುತ್ತಾರೆ. ಪ್ರಾರ್ಥನೆಯ ನಂತರ ಇಮಾಮ್ ಭಾಷಣವನ್ನೂ ಮಾಡಲಿದ್ದು, ಈ ವೇಳೆ ಜಗತ್ತಿನ ಎಲ್ಲೆಡೆ ಕ್ಷಮೆ, ಕರುಣೆ ಮತ್ತು ಶಾಂತಿಗಾಗಿ ಪ್ರಾರ್ಥನೆಯನ್ನೂ ಮಾಡುತ್ತಾರೆ. ಹೊಸ ಹಾಗೂ ಶುದ್ಧಬಟ್ಟೆಗಳನ್ನು ಧರಿಸಿ ಮುಸ್ಲಿಮರು ಹಬ್ಬವನ್ನು ಆಚರಿಸಿಲಿದ್ದು, ಖರ್ಜೂರ, ಸಿಹಿ ತಿನಿಸನ್ನು ಅಕ್ಕಪಕ್ಕದವರೊಂದಿಗೆ ಹಂಚಿಕೊಂಡು ಹಬ್ಬದ ಸೊಗಸನ್ನು ಏರಿಸುತ್ತಾರೆ.

Ramadan Leave ರಂಜಾನ್ ಹಬ್ಬದ ರಜೆ ಬದಲಾವಣೆ, ಮೇ 3ರ ಬದಲು ಮೇ 2ಕ್ಕೆ ಸಾರ್ವತ್ರಿಕ ರಜೆ ಘೋಷಣೆ!

ಭಾರತವು ಭಾನುವಾರ ಚಂದ್ರದರ್ಶನ ನೋಡಲು ಪ್ರಯತ್ನಿಸಲಾಗುತ್ತದೆ ಅರ್ಧಚಂದ್ರ ಕಾಣಿಸಿಕೊಂಡರೆ, ದೇಶವು ಸೌದಿ ಅರೇಬಿಯಾ, ಯುಎ ಮತ್ತು ಇತರರೊಂದಿಗೆ ಸೋಮವಾರ ಈದ್ ಅನ್ನು ಆಚರಿಸುತ್ತದೆ. ಹಾಗಿದ್ದರೂ ಭಾರತದಲ್ಲಿ ಸೋಮವಾರದಂದು ಈದ್ ಆಚರಿಸುವುದು ಅನುಮಾನವಾಗಿದೆ. ಭಾರದಲ್ಲಿ ಸಾಮಾನ್ಯವಾಗಿ ಸೌದಿ ಅರೇಬಿಯಾದಲ್ಲಿ ರಂಜಾನ್ ಆಚರಿಸಿದ ಒಂದು ದಿನದ ಬಳಿಕ ರಂಜಾನ್ ಹಾಗೂ ಈಸ್ ಅನ್ನು ಆಚರಣೆ ಮಾಡುತ್ತಾರೆ.

ರಂಜಾನ್‌ ಸಮಯದಲ್ಲಿ ಆಯೋಜಿಸುವ ಇಫ್ತಾರ್ ಕೂಟ ಎಂದರೇನು?

ವಿಶ್ವವೇ ರಂಜಾನ್ ಹಬ್ಬದ ಆಚರಣೆಗೆ ಸಕಲ ತಯಾರಿಯಲ್ಲಿದೆ. ಮುಸ್ಲಿಮರ ಪವಿತ್ರ ಹಬ್ಬದ ಆಚರಣೆಗೆ ಇದೀಗ ಕರ್ನಾಟಕ ಸರ್ಕಾರ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಿದೆ. ಮೇ.03ರ ಬದಲು ಮೇ 02ರಂದೆ ರಂಜಾಬ್ ಹಬ್ಬ ಆಚರಿಸುತ್ತಿರುವ ಕಾರಣ ಸಾರ್ವತ್ರಿಕ ರಜೆಯನ್ನು ಮೇ02ಕ್ಕೆ ನೀಡಲಾಗಿದೆ.  ಈ ಮೊದಲು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ರಂಜಾನ್ ಹಬ್ಬಕ್ಕೆ ಮೇ 3ರಂದು ರಜೆ ನೀಡಲಾಗಿತ್ತು. ಆದ್ರೆ, ಇದೀಗ ಮೂನ್ ಕಮಿಟಿ ಮೇ 2ರಂದು ರಂಜಾನ್ ಆಚರಿಸಲು ತೀರ್ಮಾನಿಸಿದ್ದರಿಂದ ರಾಜ್ಯ ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಮೇ3ರ ಬದಲಿಗೆ ಮೇ 2ರಂದು ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಸರ್ಕಾರ ರಂಜಾನ್ ಹಬ್ಬದ ಸಾರ್ವತ್ರಿಕ ರಜೆ ಬದಲಾವಣೆ ಮಾಡಿರುವುದಾಗಿ ಹೇಳಿದೆ

Latest Videos
Follow Us:
Download App:
  • android
  • ios