ಭೋಪಾಲ್[ಜ.05]: ವ್ಯಕ್ತಿಯೊಬ್ಬ ಎಣ್ಣೆ ಏಟಲ್ಲಿ ಚಿತ್ರ ವಿಚಿತ್ರವಾಗಿ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕುಡುಕ ಮದ್ಯದ ನಶೆಯಲ್ಲಿ ನಾಗರ ಹಾವಿನೊಂದಿಗೇ ಸರಸಕ್ಕಿಳಿದಿದ್ದಾನೆ. ಸದ್ಯ ಈ ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದ್ದು, ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ನಾಗರ ಹಾವನ್ನು ಕಂಡರೇ ಭಯಬಿದ್ದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಈ ಕುಡುಕ ಮಾತ್ರ ವಿಷಯುಕ್ತ ಹಾವಿಗೇ ಚಾಲೆಂಜ್ ಕೊಟ್ಟಿದ್ದಾನೆ.

ಹೌದು ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿನೊಂದಿಗೆ ಆಡಿದ್ದಾನೆ. ಅಲ್ಲದೇ ಹಾವನ್ನು ಹಿಡಿದು ಗಿರ ಗಿರನೇ ತಿರುಗಿಸಿದ್ದಾನೆ. ಸುಮಾರು ಅರ್ಧ ಗಂಟೆ ಈ ಕುಡುಕ ಹಾವನ್ನು ಹಿಡಿದುಕೊಂಡು ಸತಾಯಿಸಿದ್ದಾನೆನ್ನಲಾಗಿದೆ. ಈ ವೇಳೆ ಹಾವು ಆತನ ದೇಹಕ್ಕೆ ಹಲವಾರು ಬಾರಿ ಕಚ್ಚಿದೆ.

ಗದ್ದೆಯೊಂದರಲ್ಲಿ ಹರಿದಾಡಿಕೊಂಡು ಹೋಗುತ್ತಿದ್ದ ನಾಗರ ಹಾವಿನ ದಾರಿಯನ್ನು ತಡೆಯುವ ವ್ಯಕ್ತಿ. ಕೆಲ ಸಮಯದ ಬಳಿಕ ಅದನ್ನು ಹಿಡಿದು ಗಿರ ಗಿರನೇ ತಿರುಗಿಸಿದ್ದಾನೆ. ಮುಂದೆ ಹಾವನ್ನು ತನ್ನ ಕೊರಳಿಗೆ ಧರಿಸಿಕೊಳ್ಳುವ ಆತ, ಬಳಿಕ ಅದರ ಆಶೀರ್ವಾದ ಪಡೆಯುತ್ತಾನೆ. ಬಹಳಷ್ಟು ಹೊತ್ತು ಆತ ಹೊಲದಲ್ಲಿ ಈ ಡ್ರಾಮಾ ಮುಂದುವರೆಸಿದ್ದಾನೆ.

ನಾಗರ ಹಾವು ಕಚ್ಚಿದ ಪರಿಣಾಮ ಆ ವ್ಯಕ್ತಿಯ ಶರೀರ ನೀಲಿ ಬಣ್ಣಕ್ಕೆ ತಿರುಗಿದೆ. ಮಾಹಿತಿ ಪಡೆದ ಸ್ಥಳೀಯರು ಕೂಡಲೇ ಸ್ಥಳಕ್ಕಾಮಿಸಿ, ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಆತನ ಆರೋಗ್ಯ ಸ್ಥಿತಿ ಹೇಗಿದೆ ಎಂಬುವುದು ಸ್ಪಷ್ಟವಿಲ್ಲ.