ಭಾರತದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ವಹಿಸಿಕೊಂಡು ಮಂಗಳವಾರಕ್ಕೆ 1 ವರ್ಷ ಸಂಪೂರ್ಣವಾಗಿದೆ
ನವದೆಹಲಿ: ಭಾರತದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ವಹಿಸಿಕೊಂಡು ಮಂಗಳವಾರಕ್ಕೆ 1 ವರ್ಷ ಸಂಪೂರ್ಣವಾಗಿದೆ. ತಾವು ರಾಷ್ಟ್ರಪತಿಯಾದಾಗಿನಿಂದ ಈವರೆಗೆ ಮುರ್ಮು ತಮ್ಮ ವಿವಿಧ ಭೇಟಿಗಳಲ್ಲಿ ವಿವಿಧ ಬುಡಕಟ್ಟು ಸಮುದಾಯದ 1,750 ಜನರು ಸೇರಿದಂತೆ ಸುಮಾರು 16,000 ಜನರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ 20 ಮತ್ತು ವಿವಿಧ ರಾಜ್ಯ ಸರ್ಕಾರಗಳ ಒಟ್ಟು 23 ಮಸೂದೆಗಳಿಗೆ ತಮ್ಮ ಅಂಕಿತದ ಮೂಲಕ ಸಮ್ಮತಿ ನೀಡಿದ್ದಾರೆ ಎಂದು ರಾಷ್ಟ್ರಪತಿಗಳ ಕಚೇರಿ ತಿಳಿಸಿದೆ.
ಅಲ್ಲದೇ ಒಟ್ಟು 8 ಈಶಾನ್ಯ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಸೇರಿದಂತೆ ರಾಷ್ಟ್ರಪತಿಗಳು 6 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಮೂರು ಪಡೆಗಳ ಮುಖಸ್ಥರಾಗಿರುವ ರಾಷ್ಟ್ರಪತಿ ಮುರ್ಮು ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿದ್ದಲ್ಲದೇ ತೇಜ್‌ಪುರ್ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ 30 ಎಂಕೈ ಫೈಟರ್ ಜೆಟ್‌ನಲ್ಲಿ ವಿಹಾರ ನಡೆಸಿದ್ದಾರೆ. ಅಲ್ಲದೇ ಸರ್ಬಿಯಾ ದೇಶಕ್ಕೆ ತೆರಳಿದ ಮೊದಲ ಭಾರತೀಯ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ನಮ್ಮ ಗುರುಕುಲ ಪದ್ಧತಿ ವಿಶ್ವಕ್ಕೇ ಮಾದರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಬಿಜೆಪಿ ಆಡಳಿತ ರಾಜ್ಯಗಳ ಮೇಲೇಕೆ ಕೇಂದ್ರ ಇಲ್ಲ?
ಕೇಂದ್ರ ಸರ್ಕಾರ ಬಿಜೆಪಿ ಆಡಳಿತದ ರಾಜ್ಯಗಳಿಗೆ ಒಂದು ನೀತಿ ಹಾಗೂ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಿಗೆ ಒಂದು ನೀತಿ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ. ನಾಗಾಲ್ಯಾಂಡ್‌ನಲ್ಲಿ ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠ, ‘ಕೇಂದ್ರ ಸರ್ಕಾರ ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ತನ್ನ ಪಕ್ಷದ ಆಡಳಿತ ಇರುವ ರಾಜ್ಯಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದರೂ ಸ್ಥಳೀಯ ಚುನಾವಣೆಯಲ್ಲಿ ಮಹಿಳೆಯರ ಶೇ.33ರಷ್ಟು ಮೀಸಲಿಗೆ ತಡ ಮಾಡುತ್ತಿರುವುದೇಕೆ? ಎಂದು ಉಭಯ ಸರ್ಕಾರ ವಿರುದ್ಧ ಚಾಟಿ ಬೀಸಿತು. ಮೀಸಲು ಜಾರಿಗೆ ಸಮಯಾವಕಾಶ ಕೋರಿದ ನಾಗಾಲ್ಯಾಂಡ್ ಸರ್ಕಾರಕ್ಕೆ ಉತ್ತರಿಸಿದ ಪೀಠ, ಅದೆಷ್ಟು ಬಾರಿ ರಾಜ್ಯಕ್ಕೆ ಸಮಯಾವಕಾಶ ನೀಡಿದ್ದೇವೋ ಲೆಕ್ಕವಿಲ್ಲ. ಪ್ರತಿ ಬಾರಿಯೂ ಇದೇ ಹೇಳುತ್ತೀರ. ಇದು ಕೊನೆ ಬಾರಿ ಸಮಯಾವಕಾಶ ನೀಡುತ್ತಿದ್ದೇವೆ ಎಂದಿತು.
ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್
