Asianet Suvarna News Asianet Suvarna News

ಡಬಲ್‌ ರೂಪಾಂತರಿ ವೈರಸ್‌ ಆತಂಕ: 18 ರಾಜ್ಯಗಳಿಗೆ ಈಗಾಗಲೇ ಪ್ರವೇಶ!

ಡಬಲ್‌ ರೂಪಾಂತರಿ ವೈರಸ್‌ ಆತಂಕ| ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ರೂಪಾಂತರಿ ವೈರಸ್‌ ನಂತರ ಈಗ ದೇಶದಲ್ಲಿ ಹರಡುತ್ತಿದೆ ಡಬಲ್‌ ಮ್ಯೂಟೆಂಟ್‌ ಕೊರೋನಾ ವೈರಸ್‌| 18 ರಾಜ್ಯಗಳಿಗೆ ಈಗಾಗಲೇ ಪ್ರವೇಶ| 10 ಸಾವಿರಕ್ಕೂ ಹೆಚ್ಚು ಸ್ಯಾಂಪಲ್‌ಗಳ ಜೆನೆಟಿಕ್‌ ಸೀಕ್ವೆನ್ಸಿಂಗ್‌ ಅಧ್ಯಯನದಿಂದ ಪತ್ತೆ| ಕೊರೋನಾ ವಿರುದ್ಧ ರೋಗನಿರೋಧಕ ಶಕ್ತಿ ಹೊಂದಿರುವವರಿಗೂ ಇದು ಹರಡುವ ಅಪಾಯ

Double mutant among 771 variants found in 18 states of India pod
Author
Bangalore, First Published Mar 25, 2021, 7:10 AM IST

ನವದೆಹಲಿ(ಮಾ.25): ಈಗಾಗಲೇ ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮಾದರಿಯ ರೂಪಾಂತರಗೊಂಡ ಕೊರೋನಾ ವೈರಸ್‌ಗಳು ಭಾರತ ಪ್ರವೇಶಿಸಿರುವುದನ್ನು ಖಚಿತಪಡಿಸಿದ್ದ ವಿಜ್ಞಾನಿಗಳು ಇದೀಗ ಎರಡು ರೂಪಾಂತರಿ ವೈರಸ್‌ನ ಸಂಗಮವಾಗಿರುವ ‘ಡಬಲ್‌ ಕೊರೋನಾ ವೈರಸ್‌’ ಎಂಬ ಹೊಸ ತಳಿಯನ್ನು ಪತ್ತೆ ಮಾಡಿದ್ದಾರೆ. ಅಷ್ಟುಮಾತ್ರವಲ್ಲ ಈ ಡಬಲ್‌ ರೂಪಾಂತರಿ ಕೊರೋನಾ ವೈರಸ್‌ ದೇಶದ 18 ರಾಜ್ಯಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ 10787 ಕೊರೋನಾ ಪಾಸಿಟಿವ್‌ ಮಾದರಿಗಳನ್ನು ಸಂಗ್ರಹಿಸಿ ಅವುಗಳ ಜೀನ್‌ (ವಂಶವಾಹಿಗಳು)ಗಳನ್ನು ಅಧ್ಯಯನ ಮಾಡಿದ್ದ ಇನ್‌ಸಾಕೋಗ್‌ (10 ರಾಷ್ಟ್ರೀಯ ಪ್ರಯೋಗಾಲಯಗಳನ್ನು ಒಂದುಗೂಡಿಸಿ ಕೊರೋನಾ ವೈರಸ್‌ನ ಜೀನ್‌ ಅಧ್ಯಯನಕ್ಕೆ ಸ್ಥಾಪಿಸಲಾಗಿರುವ ಸಂಸ್ಥೆ), ದೇಶದ 18 ರಾಜ್ಯಗಳಲ್ಲಿ ಹೊಸ ಮಾದರಿಯ ಡಬಲ್‌ ರೂಪಾಂತರಿ (ಡಬಲ್‌ ಮ್ಯೂಟೆಂಟ್‌) ಕೊರೋನಾ ವೈರಸ್‌ನ ಮಾದರಿಯನ್ನು ಪತ್ತೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಮಾಹಿತಿ ನೀಡಿದೆ. ಆದರೆ ಸದ್ಯ ಪತ್ತೆಹಚ್ಚಲಾಗಿರುವ ಹೊಸ ಡಬಲ್‌ ರೂಪಾಂತರಿ ವೈರಸ್‌ನ ಪ್ರಮಾಣವನ್ನು ಆಧಾರವಾಗಿಟ್ಟುಕೊಂಡು ಈಗ ದೇಶದಲ್ಲಿ ದಿಢೀರನೆ ಸೋಂಕು ಹೆಚ್ಚಳವಾಗಿರುವುದಕ್ಕೆ ಅದೇ ಕಾರಣ ಎಂದು ಹೇಳಲಾಗದು ಎಂದು ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದಿಂದ 2020ರ ಡಿಸೆಂಬರ್‌ನಲ್ಲಿ ಸಂಗ್ರಹಿಸಿದ್ದ ಕೊರೋನಾ ಮಾದರಿಗೂ, ಈಗಿನ ಮಾದರಿಗೂ ವ್ಯತ್ಯಾಸವಿದೆ. ತಪಾಸಣೆ ವೇಳೆ ಇವು ಡಬಲ್‌ ರೂಪಾಂತರಿ ಕೊರೋನಾ ವೈರಸ್‌ ಮಾದರಿ ಎಂದು ಖಚಿತಪಟ್ಟಿದೆ. ಈ ಮಾದರಿಯ ವೈರಸ್‌ ಜೀವರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಮತ್ತು ಹೆಚ್ಚು ಸೋಂಕು ಹರಡುವ ತೀಕ್ಷ$್ಣತೆ ಹೊಂದಿರುತ್ತವೆ ಎಂದು ತಿಳಿಸಿದೆ.

ಏನಿದು ಡಬಲ್‌ ಮ್ಯೂಟೆಂಟ್‌?

ಇದು ರೂಪಾಂತರಗೊಂಡಿರುವ ಎರಡು ವೈರಸ್‌ನ ಸಂಗಮ. ಇತರೆ ಮಾದರಿಗಿಂತ ಈ ವೈರಸ್‌ನ ಹರಡುವಿಕೆಯ ವೇಗ ಹೆಚ್ಚು. ಇವುಗಳ ಮೇಲೆ ಕೊರೋನಾ ಲಸಿಕೆ ಪರಿಣಾಮಕಾರಿ ಆಗದೇ ಇರಬಹುದು. ಹೀಗಾಗಿ ಲಸಿಕೆ ಪಡೆದವರಲ್ಲೂ ಈ ವೈರಸ್‌ ರೋಗನಿರೋಧಕ ಶಕ್ತಿಯನ್ನು ಭೇದಿಸಿ ಸೋಂಕು ಉಂಟುಮಾಡಬಹುದು.

Follow Us:
Download App:
  • android
  • ios