Asianet Suvarna News Asianet Suvarna News

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಹೊಟ್ಟೆನೋವೆಂದು ಹೋದ ಪುರುಷರಿಗೆ ಪ್ರೆಗ್ನೆನ್ಸಿ ಟೆಸ್ಟ್‌ !

ಅಯ್ಯಯ್ಯೋ ಇದೆಂಥಾ ಅಚ್ಚರಿ ! ಹೊಟ್ಟೆನೋವೆಂದು ಹೋದ ವ್ಯಕ್ತಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿ ಎಂದ ವೈದ್ಯರು! | ಪುರುಷರಿಗೂ ಪ್ರಗ್ನೆನ್ಸಿ ಟೆಸ್ಟಾ? ಬಂದಿದೆ ಹೊಸ ವಿಧಾನ 

Doctor Prescribes Pregnancy test for men stomach ache in Jharkhand
Author
Bengaluru, First Published Oct 15, 2019, 1:02 PM IST

ಹೊಟ್ಟೆನೋವೆಂದು ಹೋದ ಇಬ್ಬರು ಪುರುಷರಿಗೆ ವೈದ್ಯರೊಬ್ಬರು ಗರ್ಭಧಾರಣೆ ಪರೀಕ್ಷೆಗೆ ಒಳಗಾಗಲು ಸಲಹೆ ನೀಡಿದ ಅಚ್ಚರಿಯ ಘಟನೆ ರಾಂಚಿಯ ಛಾತ್ರಾದಲ್ಲಿ ಸೋಮವಾರ ನಡೆದಿದೆ. ವೈದ್ಯರ ಈ ಸಲಹೆ ಕೇಳಿ ಬೆಚ್ಚಿಬಿದ್ದ ಪುರುಷರು ಜಿಲ್ಲಾ ಸರ್ಜನ್‌ಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ಗೋಪಾಲ್‌ ಗಂಝು, ಕಾಮೇಶ್ವರ್‌ ಗಂಝು ಎಂಬುವವರು ರಾಂಚಿಯ ಛಾತ್ರಾದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ತಪಾಸಣೆ ಬಳಿಕ ವೈದ್ಯರು ಪುರುಷರಿಬ್ಬರಿಗೆ ಗರ್ಭಧಾರಣೆ ಪರೀಕ್ಷೆಗೆ ಒಳಗಾಗಲು ಚೀಟಿ ಬರೆದುಕೊಟ್ಟಿದ್ದಾರೆ. ಆಸ್ಪತ್ರೆಯ ಪ್ರಯೋಗಾಲಯಕ್ಕೆ ತೆರಳಿದ ಬಳಿಕ ಈ ವಿಷಯ ಗೊತ್ತಾಗಿದೆ. ಅಲ್ಲದೇ ಎಚ್‌ಐವಿ, ಹಿಮೋಗ್ಲೋಬಿನ್‌ ಪರೀಕ್ಷೆಗೂ ತಿಳಿಸಿದ್ದರಂತೆ. ಶಾಕ್‌ ಆದ ಇಬ್ಬರೂ ಜಿಲ್ಲಾ ಸರ್ಜನ್‌ಗೆ ದೂರು ನೀಡಿದ್ದಾರೆ. ಆದರೆ, ಈ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದಾರೆ.

Follow Us:
Download App:
  • android
  • ios