Asianet Suvarna News Asianet Suvarna News

ಪ್ರತ್ಯೇಕತಾವಾದಿ ನಾಯಕ ಜೈಲಿನಲ್ಲೇ ನಿಧನ, ವರ್ಷದಿಂದ ಬಂಧನದಲ್ಲಿದ್ದರು!

ಜಮ್ಮು ಕಾಶ್ಮೀರ ಪ್ರತ್ಯೇಕತಾ ಹೋರಾಟ/ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಪ್ರತ್ಯೇಕವಾದಿ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್(77) ನಿಧನ/ ಒಂದು ವರ್ಷದಿಂದ ಜೈಲಿನಲ್ಲಿಯೇ ಇದ್ದರು

Detained separatist leader Ashraf Sehrai dies aged 77 in Jammu hospital mah
Author
Bengaluru, First Published May 5, 2021, 11:26 PM IST

ಜಮ್ಮು (ಮೇ 05) ಕಳೆದ  ವರ್ಷದ ಜುಲೈ ತಿಂಗಳಿನಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಪ್ರತ್ಯೇಕವಾದಿ ನಾಯಕ ಮೊಹಮ್ಮದ್ ಅಶ್ರಫ್ ಸೆಹ್ರಾಯ್(77)  ಬುಧವಾರ  ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಮಂಗಳವಾರ ಸಂಜೆ ಸೆಹ್ರಾಯ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣವೇ ಉಧಂಪುರ ಜೈಲಿನಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು.  ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಕೊರೋನಾ ರೋಗ ಲ್ಷಣಗಳು ಇದ್ದರೂ ವರದಿ ನೆಗೆಟಿವ್   ಇತ್ತು ಎದು ವೈದ್ಯರು ತಿಳಿಸಿದ್ದಾರೆ.

ಭದ್ರತೆ ಕಾರಣಕ್ಕೆ ಶಿಕ್ಷಕ ಅಮಾನತು

ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳೂವುದನ್ನು ವಿರೋಧಿಸಿದ್ದರು. ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮುನ್ನ ಲಾಕ್‌ಡೌನ್ ಸಮಯದಲ್ಲಿ ಇವರನ್ನು ಬಂಧನ ಮಾಡಲಾಗಿತ್ತು.

ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಸಚಿವ ಸಾಜಾದ್ ಲೋನ್  ಸೆಹ್ರಾಯ್  ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಅವರು  ರಾಜಕೀಯ ನಾಯಕರಾಗಿದ್ದರು, ಭಯೋತ್ಪಾದಕರಲ್ಲ ಎಂದು  ಎಂದು ಹೇಳಿದರು. ಸರಣಿಯ ಟ್ವೀಟ್‌ಗಳಲ್ಲಿ, ಲೋನ್ ಅವರು ನಾಯಕನೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು ಮತ್ತು "ಮತ್ತು ಅವರು ಯಾಕೆ ಸೆರೆವಾಸದಲ್ಲಿ ಸಾಯಬೇಕಾಗಿತ್ತು? ಅವರು ಮಾಡಿದ್ದ ಅಪರಾಧವಾದರೂ ಏನು? ಪ್ರತಿಯೊಬ್ಬರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದು ಎಂದು ಹೇಳಿದ್ದಾರೆ. 

Follow Us:
Download App:
  • android
  • ios