ಕಾಂಗ್ರೆಸ್‌, ಸಿಪಿಎಂ ವಿರೋಧವಿದ್ದರೂ ಕೇರಳ ಸ್ಟೋರಿ ಚಿತ್ರ ಪ್ರದರ್ಶನ

ಲೋಕಸಭಾ ಚುನಾವಣೆಯ ಹೊತ್ತಿನಲ್ಲೇ ಏ.5ರಂದು ದೂರದರ್ಶನವು ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ಕಾಂಗ್ರೆಸ್‌ ಮತ್ತು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿವೆ. ಅಲ್ಲದೆ ಅವು ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. 
 

Despite the opposition of Congress and CPM The Kerala Story film screening gvd

ತಿರುವನಂತಪುರ (ಏ.06): ಲೋಕಸಭಾ ಚುನಾವಣೆಯ ಹೊತ್ತಿನಲ್ಲೇ ಏ.5ರಂದು ದೂರದರ್ಶನವು ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ಕಾಂಗ್ರೆಸ್‌ ಮತ್ತು ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿವೆ. ಅಲ್ಲದೆ ಅವು ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಬಿಜೆಪಿಯು ಚುನಾವಣಾ ಭವಿಷ್ಯವನ್ನು ಹೆಚ್ಚಿಸಿಕೊಳ್ಳಲು ಧರ್ಮದ ಆಧಾರದ ಮೇಲೆ ಸಮಾಜ ವಿಭಜಿಸುವ ಪ್ರಯತ್ನ ಮಾಡುತ್ತಿದೆ ಎಂದು ಅವು ಆರೋಪಿಸಿವೆ. ಕೇರಳದ 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡಿದ ಅಂಶಗಳನ್ನು ಒಳಗೊಂಡಿರುವ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ದೇಶವ್ಯಾಪಿ ಭಾರೀ ಸುದ್ದಿಯಾಗಿತ್ತು.

ಒಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ: ಇಸ್ಲಾಂ ಯುವತಿಯನ್ನು ತನ್ನ ರೂಮ್​ಮೇಟ್ಸ್​ಗಳನ್ನು ಹೇಗೆ ಮತಾಂತರದ ಕುರಿತು ಬ್ರೇನ್​ವಾಷ್​ ಮಾಡಿ ಅವರ ಮನಸ್ಸನ್ನು ಪರಿವರ್ತನೆ ಮಾಡುತ್ತಾಳೆ ಎನ್ನುವ ನೈಜ ಘಟನೆಯುಳ್ಳ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಎಲ್ಲರಿಗೂ ತಿಳಿದದ್ದೇ. ಆಸೀಫಾ  ಎಂಬ ಯುವತಿ ರೂಮ್​ಮೇಟ್ಸ್​ ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿರೋ  ಶಾಲಿನಿ ಉನ್ನಿಕೃಷ್ಣನ್, ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್. ಆಸೀಫಾ  ಈ  ಮೂವರು ಹುಡುಗಿಯರ ಬ್ರೇನ್ ವಾಷ್ ಮಾಡುತ್ತಾಳೆ.  

ಈ ಮೂವರೂ ಆಕೆಯ ರೂಮ್ ​ಮೇಟ್ಸ್​. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು  ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ...  ಈ ಸತ್ಯ ಘಟನೆಯನ್ನು ಹೊಂದಿರುವ ದಿ ಕೇರಳ ಸ್ಟೋರಿ ಸಿನಿಮಾ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ.  ಈ ನೈಜ ಘಟನೆಯ ಸಿನಿಮಾವನ್ನು ನೋಡಿ ಸಹಿಸಿಕೊಳ್ಳಲು ಆಗದ ಒಂದು ವರ್ಗ ಭಾರಿ ಪ್ರತಿರೋಧ ಮಾಡಿದ ನಡುವೆಯೇ ಚಿತ್ರ ಇದಾಗಲೇ ಬ್ಲಾಕ್​ಬಸ್ಟರ್​ ಎನಿಸಿಕೊಂಡಿದೆ. ಹಲವಾರು ದಾಖಲೆಗಳನ್ನು ಉಡೀಸ್​ ಮಾಡಿದೆ. 

ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

ಭಾರತದ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಬರೋಬ್ಬರಿ 242 ಕೋಟಿ ರೂಪಾಯಿ. ವಿದೇಶದ ಕಲೆಕ್ಷನ್ ಸೇರಿದರೆ ಅಂದಾಜು 303 ಕೋಟಿ ರೂಪಾಯಿ ಆಗಲಿದೆ.   2023ರ ಮೇ 5ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಮೂರು ದಿನಗಳ ಹಿಂದೆ  ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ.‘ಜೀ5’  ಒಟಿಟಿ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.  ಚಿತ್ರಮಂದಿರಗಳಲ್ಲಿ  ಅಬ್ಬರಿಸಿದ ರೀತಿಯೇ ಒಟಿಟಿಯಲ್ಲೂ  ಸಿನಿಮಾ ಧೂಳೆಬ್ಬಿಸುತ್ತಿದೆ.   ಒಟಿಟಿಯಲ್ಲೂ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಜನರು ಮುಗಿಬಿದ್ದಿದ್ದು ಹೊಸದೊಂದು ದಾಖಲೆ ಸೃಷ್ಟಿಸಿದೆ. ಮೂರೇ ದಿನಗಳಲ್ಲಿ  150 ಮಿಲಿಯನ್​ ನಿಮಿಷಗಳ ವೀಕ್ಷಣೆ ಕಂಡಿದೆ. ಇದು ಇಲ್ಲಿಯವರೆಗೆ ದಾಖಲೆ ಎನ್ನಲಾಗಿದೆ. 

Latest Videos
Follow Us:
Download App:
  • android
  • ios