ನವದೆಹಲಿ(ಮಾ.03): ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿಗೀಡು ಮಾಡುವ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇಲ್ಲಿ ಹನನ್ನೆರಡಣೆ ಮಹಡಿಯಿಂದ ಎರಡು ವರ್ಷದ ಮಗುವನ್ನು ಡೆಲಿವರಿ ಬಾಯ್ ದೇವರಂತೆ ಬಂದು ರಕ್ಷಿಸಿದ್ದಾರೆ. ಈ ವಿಡಿಯೋ ಬಳಿಕ ಜನರು ಡೆಲಿವರಿ ಬಾಯ್‌ಯನ್ನು ಸೂಪರ್ ಮ್ಯಾನ್ ಎಂದು ಕರೆಯಲಾರಂಭಿಸಿದ್ದಾರೆ.

ಡೆಲಿವರಿ ಬಾಯ್‌ ಟ್ರಕ್‌ನಲ್ಲಿ ಕುಳಿತು ತಾನು ತಂದಿದ್ದ ಪಾರ್ಸೆಲ್ ಡೆಲಿವರಿ ಮಾಡಲು ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಹೀಗೆ ಟ್ರಕ್‌ನಲ್ಲಿ ಕುಳಿತಿದ್ದ ಯುವಕ ಮಗುವೊಂದು ಬಾಲಗ್ಕನಿಯಲ್ಲಿ ನೆತಾಡುತ್ತಿರುವುದನ್ನು ಕಂಡಿದ್ದಾರೆ. ಕೂಡಲೇ ಗಾಡಿಯಿಂದ ಇಳಿದು ಕಟ್ಟಡದತ್ತ ದೌಡಾಯಿಸಿದ್ದಾರೆ. ಅತ್ತ ಮಗು ಮೇಲಿಂದ ಕೆಳಗೆ ಬೀಳುತ್ತಿದ್ದಂತೆಯೇ ಇತ್ತ ಡೆಲಿವರಿ ಬಾಯ್ ಓಡಿ ಹೋಗಿ ಆ ಕಂದನನ್ನು ಕಾಪಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಯುವಕ, ಅದೃಷ್ಟವಶಾತ್ ಆ ಕಂದ ನನ್ನ ಮಡಿಲಿಗೆ ಬಿತ್ತು ಎಂದಿದ್ದಾರೆ. ಇನ್ನು ಮಗುವಿನ ಮೂಗಿನಿಂದ ರಕ್ತ ಸುರಿದಿದ್ದು, ಕೂಡಲೇ ಆ ಕಂದನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಮಗು ಬಿದ್ದ ಕಟ್ಟಡ 164 ಸಡಿ ಎತ್ತರವಿತ್ತು. ಒಂದು ವೇಳೆ ಆ ಯುವಕ ಸ್ಥಳಕ್ಕರೆ ಸೂಕ್ತ ಸಮಯಕ್ಕೆ ತಲುಪಿರದಿದ್ದರೆ, ಮಗು ಬದುಕುಳಿಯುತ್ತಿರಲಿಲ್ಲ.