ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಆರ್ಟಿಫೀಶಿಯಲ್ ಮಳೆ ಪ್ರಸ್ತಾವನೆ ಮುಂದಿಟ್ಟ ಐಐಟಿ ಕಾನ್ಪುರ!
ದೆಹಲಿ ಮಾಲಿನ್ಯ ಮಿತಿ ಮೀರಿದೆ. ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಉಸಿರಾಟ ಸೇರಿದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ.ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಾಲಿನ್ಯ ತಗ್ಗುತ್ತಿಲ್ಲ. ಇದೀಗ ಐಐಟಿ ಕಾನ್ಪುರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಆರ್ಟಿಫಿಶಿಯಲ್ ಮಳೆ ಮೂಲಕ ಮಾಲಿನ್ಯ ನಿಯಂತ್ರಣ ಮಾಡಲು ಸರ್ಕಾರದ ಅನುಮತಿ ಕೋರಿದೆ.

ದೆಹಲಿ(ನ.06) ದೆಹಲಿಯಲ್ಲಿ ವಾಯು ಗುಣಮತ್ತ ಪಾತಾಳಕ್ಕೆ ಕುಸಿದಿದೆ. ಸಂಪೂರ್ಣ ದೆಹಲಿ ದಟ್ಟ ಹೊಗೆ ಹಾಗೂ ಧೂಳಿನಿಂದ ಆವೃತವಾಗಿದೆ. ವಿಪರೀತ ವಾಯು ಮಾಲಿನ್ಯದಿಂದ ಉಸಿರಾಟ, ವಾಂತಿ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಸರ್ಕಾರ ಮಾಲಿನ್ಯ ನಿಯಂತ್ರಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಐಐಟಿ ಕಾನ್ಪುರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಆರ್ಟಿಫಿಶಿಯಲ್ ಮಳೆ ಮೂಲಕ ದೆಹಲಿಯಲ್ಲಿ ಆವರಿಸಿಕೊಂಡಿರುವ ದಟ್ಟ ಹೊಗೆ ಹಾಗೂ ಧೂಳಿನ್ನು ತಕ್ಕಮಟ್ಟಿಗೆ ಸರಿಸಲು ಸಾಧ್ಯ. ಇಷ್ಟೇ ಅಲ್ಲ ವಾಯುಗುಣಮಟ್ಟವನ್ನೂ ಸುಧಾರಿಸಬಹುದು ಎಂದು ಐಐಟಿ ಕಾನ್ಪುರ ಹೇಳಿದೆ.
ಐಐಟಿ ಕಾನ್ಪುರ ಕಳೆದ 5 ವರ್ಷಗಳಿಂದ ಕೃತಕ ಮಳೆ ಕುರಿತು ಸಂಶೋಧನೆ ನಡಸುತ್ತಿದೆ. ಈ ಬಾರಿ ಜುಲೈ ತಿಂಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಹೊಸ ಮಾದರಿ ಮೂಲಕ ಮೋಡ ಬಿತ್ತನೆ ಮಾಡಿ ಮಳೆ ತರಿಸಲಾಗತ್ತದೆ. ಮಳೆಯಿಂದ ದೆಹಲಿ ವಾತಾವರಣದಲ್ಲಿ ತುಂಬಿಕೊಂಡ ಹೊಗೆ ಹಾಗೂ ಧೂಳು ಸರಿಯಲಿದೆ. ಇದರಿಂದ ವಾಯುಗುಣಮಟ್ಟ ಸುಧಾರಿಸಲಿದೆ ಎಂದು ಕಾನ್ಪುರ ಐಐಟಿ ಕಂಪ್ಯೂಟರ್ ಹಾಗೂ ಎಂಜಿನಿಯರ್ ಪ್ರೊಫೆಸರ್ ಮನೀಂದ್ರ ಅಗರ್ವಾಲ್ ಹೇಳಿದ್ದಾರೆ.
ದೆಹಲಿ ವಿಶ್ವದಲ್ಲೇ ನಂ.1 ಮಲಿನ ನಗರ, ತೀರಾ ವಿಷಮ ಸ್ಥಿತಿ, ಟ್ರಕ್‌ಗಳು ಬ್ಯಾನ್!
ನಾಗರೀಕ ವಿಮಾನಯಾನ ಸಚಿವಾಲಯದಿಂದ ಮೋಡ ಬಿತ್ತನೆಗೆ ಅನುಮತಿ ಪಡೆದಿರುವ ಐಐಟಿ ಕಾನ್ಪುರ ಇದೀಗ ದೆಹಲಿ ಹಾಗೂ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಮೋಡ ಬಿತ್ತನೆಗೆ ವಿಮಾನವನ್ನು ಮೋಡದ ಮೇಲೆ ಹಾರಾಟ ನಡೆಸಬೇಕು. ಬಳಿಕ ಮೋಡ ಬಿತ್ತನೆ ಮಾಡಬೇಕು. ಹೀಗಾಗಿ ನಾಗರೀಕ ವಿಮಾನಯಾನ ಸಚಿವಾಲಯದ ಅನುಮತಿ ಅತ್ಯಗತ್ಯ. ಈ ಪ್ರಮಾಣಪತ್ರವನ್ನು ಐಐಟಿ ಕಾನ್ಪುರ ಪಡೆದುಕೊಂಡಿದೆ.
ಮೋಡ ಬಿತ್ತನೆ ಮಾಡಿ ಕೃತಕ ಮಳೆ ತರಿಸಲು ಹಲವು ಇಲಾಖೆಯ ಅನುಮತಿ ಕಡ್ಡಾಯ. ಪರಿಸರ ಇಲಾಖೆ ಸೇರಿದಂತೆ ಹಲವು ಇಲಾಖೆ ಅನುಮತಿ ನೀಡಿದರೆ ಮಾತ್ರ ಸಾಧ್ಯ. ಸದ್ಯ ಐಐಟಿ ಕಾನ್ಪುರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.
ದಿಲ್ಲಿ ಗಾಳಿ ಮಲಿನ ಮಟ್ಟ 100 ಪಟ್ಟು ಹೆಚ್ಚಳ :ವಿಶ್ವ ಆರೋಗ್ಯ ಸಂಸ್ಥೆ ಕಳವಳ
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ತೀರಾ ವಿಷಮ ಸ್ಥಿತಿಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಡೀಸೆಲ್ ಟ್ರಕ್‌ಗಳು ದೆಹಲಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. 5ನೇ ತರಗತಿವರೆಗಿನ ಶಾಲೆಗಳಿಗೆ ನ.10ರವರೆಗೆ ರಜೆ ವಿಸ್ತರಿಸಲಾಗಿದೆ. 6-12ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸಲು ಸೂಚಿಸಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರಷ್ಟು ಸಿಬ್ಬಂದಿ ಮಾತ್ರ ಬರಬೇಕು. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು ಎಂದು ತಾಕೀತು ಮಾಡಲಾಗಿದೆ.