Asianet Suvarna News Asianet Suvarna News

ಗ್ಯಾರಂಟಿ ಯೋಜನೆ ತಂದ ಹಿಮಾಚಲಪ್ರದೇಶದಲ್ಲಿ ನೌಕರರ ವೇತನಕ್ಕೂ ದುಡ್ಡು ಇಲ್ಲ..!

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿಯ ಸಂಕಷ್ಟ ಬಿಚ್ಚಿಟ್ಟಿದ್ದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು, ತಾವೂ, ತಮ್ಮ ಸಚಿವ ಸಂಪುಟದ ಸದಸ್ಯರು, ನಿಗಮ ಮಂಡಳಿ ಸದಸ್ಯರು ತಮ್ಮ ವೇತನವನ್ನು 2 ತಿಂಗಳು ವಿಳಂಬವಾಗಿ ಸ್ವೀಕರಿಸುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಆರ್ಥಿಕ ಸಂಕಷ್ಟದ ಬಿಸಿ ಅಧಿಕಾರಿಗಳಿಗೂ ತಟ್ಟಿದೆ.

Delay in Salary of government employees in Himachal Pradesh grg
Author
First Published Sep 4, 2024, 7:41 AM IST | Last Updated Sep 4, 2024, 7:41 AM IST

ಶಿಮ್ಲಾ(ಸೆ. 04): ಅನೇಕ ಉಚಿತ ಕೊಡುಗೆಗಳ ಘೋಷಣೆಯ ಕಾರಣ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಬಿದ್ದಿರುವ ಹಿಮಾಚಲಪ್ರದೇಶದಲ್ಲಿ ಇದೀಗ ಸರ್ಕಾರಿ ನೌಕರರ ವೇತನ ಪಾವತಿಯಲ್ಲೂ ವಿಳಂಬ ಕಂಡುಬಂದಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗುತ್ತಿತ್ತು. ಆದರೆ ಆಗಸ್ಟ್‌ ತಿಂಗಳ ವೇತನ ಇನ್ನೂ ಅಧಿಕಾರಿಗಳ ಕೈ ಸೇರಿಲ್ಲ.

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿನ ಆರ್ಥಿಕ ಪರಿಸ್ಥಿತಿಯ ಸಂಕಷ್ಟ ಬಿಚ್ಚಿಟ್ಟಿದ್ದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು, ತಾವೂ, ತಮ್ಮ ಸಚಿವ ಸಂಪುಟದ ಸದಸ್ಯರು, ನಿಗಮ ಮಂಡಳಿ ಸದಸ್ಯರು ತಮ್ಮ ವೇತನವನ್ನು 2 ತಿಂಗಳು ವಿಳಂಬವಾಗಿ ಸ್ವೀಕರಿಸುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಆರ್ಥಿಕ ಸಂಕಷ್ಟದ ಬಿಸಿ ಅಧಿಕಾರಿಗಳಿಗೂ ತಟ್ಟಿದೆ.

ಗ್ಯಾರಂಟಿಗಳ ಜಾರಿ ಮಾಡಿದ್ದ ಹಿಮಾಚಲಕ್ಕೆ ಆರ್ಥಿಕ ಸಂಕಷ್ಟ: ಸಂಬಳ ಪಡೆಯದಿರಲು ಸಿಎಂ, ಸಚಿವರ ನಿರ್ಧಾರ

ಭಾನುವಾರವಷ್ಟೇ ಮಾತನಾಡಿದ್ದ ಸುಖು, ಹಣಕಾಸಿನ ಕೊರತೆಗೆ ಬಿಜೆಪಿ ಅಧಿಕಾರದಲ್ಲಿ ಆರಂಭಿಸಿದ ಉಚಿತ ಯೋಚನೆಗಳೇ ಕಾರಣ’ ಎಂದಿದ್ದರು.

Latest Videos
Follow Us:
Download App:
  • android
  • ios