Asianet Suvarna News Asianet Suvarna News

ಸಿಲಿಂಡರ್‌ ಸ್ಪೋಟ, ಎರಡಂತಸ್ತಿನ ಕಟ್ಟಡ ನೆಲಸಮ: 4 ಮಕ್ಕಳು ಸೇರಿ 8 ಸಾವು!

* ಉತ್ತರ ಪ್ರದೇಶದಲ್ಲಿ ಸಿಲಿಂಡರ್‌ ಸ್ಫೋಟ, ಎಂಟು ಮಂದಿ ಸಾವು

* ಸ್ಪೋಟ ಸಂಭವಿಸಿದ ಕಟ್ಟಡದಲ್ಲಿ ಪಟಾಕಿಗಳ ತಯಾರಿ

* ನಾಲ್ವರು ಮಕ್ಕಳು ಸೇರಿ ಎಂಟು ಸಾವು

Cylinder blast kills 8 injures 7 others in Uttar Pradesh Gonda district pod
Author
Bangalore, First Published Jun 2, 2021, 2:17 PM IST

ಲಕ್ನೋ(ಜೂ.02): ಉತ್ತರ ಪ್ರದೇಶದ ಗೊಂಡಾದಲ್ಲಿ ಮಂಗಳವಾರ ರಾತ್ರಿ ಸಿಲಿಂಡರ್‌ ಸ್ಪೋಟಗೊಂಡ ಪರಿಣಾಮ ನಾಲ್ವರು ಪುಟ್ಟ ಮಕ್ಕಳು ಸೇರಿ ಒಂದು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಏಳು ಮಂದಿಗೆ ಗಾಯಗಳಾಗಿವೆ. ಘಟನೆ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ರಕ್ಷಣಾ ದಳದ ಸಿಬ್ಬಂದಿ ಗಾಯಗೊಮಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು ಸಿಲಿಂಡರ್‌ ಸಿಡಿದ ತೀವ್ರತೆಗೆ ಎರಡಂತಸ್ತಿನ ಕಟ್ಟಡ ನೆಲಸಮಗೊಂಡಿದ್ದು, ನೆರೆಹೊರೆಯವರೆಲ್ಲಾ ಗಾಬರಿಗೀಡಾಗಿ ಓಡಿದ್ದಾರೆ.

ಮಲಗಿದ್ದ ಕುಟುಂಬ

ಈ ಘಟನೆ ತರಬ್‌ಗಂಜ್‌ನ ಟಿಕ್ರಿ ಪ್ರದೇಶದಲ್ಲಿ ನಡೆದಿದೆ. ಮರತರಲ್ಲಿ ನಾಲ್ವರು ಮಕ್ಕಳು, ಇಬ್ಬತರು ಮಹಿಳೆಯರು ಹಾಗೂ ಇಬ್ಬರು ಪುರುಷರಾಗಿದ್ದಾರೆ. ದುರಂತ ಸಂಭವಿಸಿದ ವೇಳೆ ಇವರೆಲ್ಲರೂ ಮಲಗಿದ್ದರೆನ್ನಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಕಟ್ಟಡದ ಅವಶೇಷಗಳಡಿ ಎಂಟು ಮಂಡಿಯ ಶವವಷ್ಟೇ ಸಿಕ್ಕಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನಿಖೆಗೆ ಆದೇಶಿಸಿದ ಸಿಎಂ

ಪ್ರಕರಣದ ಗಂಭೀರತೆ ಅರಿತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡುವಂತೆ ಹಾಗೂ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಮನೆಯಲ್ಲಿ ಪಟಾಕಿಗಳ ತಯಾರಿ

ಇನ್ನು ಪೊಲೀಸರ ಪ್ರಥಮಿಕ ವರದಿಯಲ್ಲಿ ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಪಟಾಕಿಗಳು ತಯಾರಾಗುತ್ತಿದ್ದವೆಂಬ ವಿಚಾಋ ಬಯಲಾಗಿದೆ. ಆದರೆ ಕಟ್ಟಡ ಮಾಲೀಕನ ಬಳಿ ಇದಕ್ಕೆ ಬೇಕಾದ ಪರವಾನಿಗೆ ಇತ್ತು

Follow Us:
Download App:
  • android
  • ios