* ಪ್ರತೀ ಗಂಟೆಗೆ 100 ಕಿ. ಮೀ ವೇಗದಲ್ಲಿ ಅಪ್ಪಳಿಸಿದ ಮಾರುತ* ಎರಡೂ ರಾಜ್ಯಗಳಲ್ಲಿ ರಕ್ಷಣಾ ಕಾರಾರ‍ಯಚರಣೆಗೆ ಭಾರೀ ಸಿದ್ಧತೆ* ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್‌: ಕಟ್ಟೆ​ಚ್ಚ​ರ

ನವದೆಹಲಿ/ಭುವನೇಶ್ವರ(ಸೆ.27): ಆಂಧ್ರಪ್ರದೇಶ(Andhra Pradesh) ಉತ್ತರ ಭಾಗ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಲಾಬ್‌ ಚಂಡಮಾರುತ(Gulab Cyclone) ಅಪ್ಪಳಿಸಿದೆ. ಇದಕ್ಕೆ ಮುಂಚಿತವಾಗಿಯೇ ಉಭಯ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಜೆ 6 ಗಂಟೆಗೆ ಅಪ್ಪ​ಳಿ​ಸುವಿಕೆ ಆರಂಭ​ವಾ​ಗಿದ್ದು, ನಂತ​ರ​ದ 3 ಗಂಟೆಗಳಲ್ಲಿ ಆಂಧ್ರಪ್ರದೇಶದ ಕಾಳಿಂಗಪಟ್ಟಣಂ ಮತ್ತು ಒಡಿಶಾದ ಗೋಪಾಲ್‌ಪುರ ಮಧ್ಯೆ ಚಂಡ​ಮಾ​ರುತ(Cyclone) ಹಾದುಹೋಗಿದೆ. ಈ ವೇಳೆ ಚಂಡಮಾರುತದ ವೇಗ ಪ್ರತೀ ಗಂಟೆಗೆ 100 ಕಿ.ಮೀ.ನಷ್ಟಿತ್ತು.

ಇದರ ಪರಿಣಾಮ ಒಡಿಶಾದ ದಕ್ಷಿಣ ಮತ್ತು ಕರಾವಳಿ ತೀರದ 11 ಜಿಲ್ಲೆಗಳಲ್ಲಿ ಹಾಗೂ ಆಂಧ್ರ​ಪ್ರ​ದೇ​ಶ​ದಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಸಂಭಾವ್ಯ ಅನಾ​ಹುತ ತಡೆಗೆ ಜನರ ರಕ್ಷಣೆಗಾಗಿ ಒಡಿಶಾ ವಿಪತ್ತು ನಿರ್ವಹಣಾ ಪಡೆಯ 42 ತಂಡಗಳು, ಎನ್‌ಡಿಆರ್‌ಎಫ್‌ನ 24 ತುಕಡಿಗಳು, 102 ಅಗ್ನಿಶಾಮಕ ಸಿಬ್ಬಂದಿಯನ್ನು ಅತಿಹೆಚ್ಚು ಹಾನಿಗೊಳಗಾಗಲಿರುವ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಒಡಿ​ಶಾ​ದಲ್ಲಿ ಅಪಾ​ಯ​ದ​ಲ್ಲಿದ್ದ 4 ಸಾವಿರ ಮಂದಿ​ಯನ್ನು ಸುರ​ಕ್ಷಿತ ಸ್ಥಳ​ಗ​ಳಿಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ. ಆಂಧ್ರ​ದಲ್ಲಿ 86 ಸಾವಿರ ಕುಟುಂಬ​ಗಳ ಸ್ಥಳಾಂತ​ರಕ್ಕೆ ಸಿದ್ಧತೆ ಪೂರ್ಣ​ಗೊಂಡಿ​ದೆ.

6 ಮೀನು​ಗಾ​ರರು ಬಲಿ?:

ಗುಲಾಬ್‌ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಶ್ರೀಕಾಕುಳಂ ಜಿಲ್ಲೆಯ 6 ಮಂದಿ ಮೀನುಗಾರರು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೆಲ್ಲರೂ ಗುಲಾಬ್‌ಗೆ ಸಿಲುಕಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಶೂನ್ಯ ಸಾವಿನ ಗುರಿ: ಒಡಿಶಾ ಸಿಎಂ

ಗುಲಾಬ್‌ ಅಪ್ಪಳಿಸುವ ಮುನ್ನ ಮಾತನಾಡಿದ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ‘ನಾವು ಸಾವು-ನೋವಿನ ಗುರಿ ಹೊಂದಿದ್ದೇವೆ. ಗುಲಾಬ್‌ ಪ್ರಭಾವಕ್ಕೆ ಸಿಲುಕಿರುವ 7 ಜಿಲ್ಲೆಗಳಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಸಣ್ಣ-ಪುಟ್ಟಅನಾಹುತವಾಗದಂತೆ ತಡೆಯುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಇರ​ಬೇ​ಕು’ ಎಂದು ತಿಳಿಸಿದ್ದಾರೆ.

ಸಕಲ ಸಹಾ​ಯ: ಮೋದಿ ಘೋಷ​ಣೆ

ಗುಲಾಬ್‌ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶ ಮತ್ತು ಒಡಿಶಾ ಮುಖ್ಯಮಂತ್ರಿಗಳಾದ ಜಗನ್‌ ಮೋಹನ್‌ ರೆಡ್ಡಿ ಮತ್ತು ನವೀನ್‌ ಪಟ್ನಾಯಕ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದರು. ಈ ವೇಳೆ ಚಂಡಮಾರುತ ಎದುರಿಸಲು ಕೈಗೊಂಡ ಕ್ರಮಗಳ ಬಗ್ಗೆ ಎರಡೂ ರಾಜ್ಯಗಳಿಂದಲೂ ಮಾಹಿತಿ ಪಡೆದರು. ಅಲ್ಲದೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ. ಚಂಡಮಾರುತದ ಹೊರತಾಗಿಯೂ, ಎಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದ​ರು.