ಇಡುಕ್ಕಿ (ಮಾ.31): ‘ರಾಹುಲ್‌ ಗಾಂಧಿ ಮದುವೆ ಆಗಿಲ್ಲ. ಆತನೊಬ್ಬ ಪೀಡಕ. ಆತನ ಹತ್ತಿರ ಹೋಗಬೇಡಿ’ ಎಂದು ಹುಡುಗಿಯರಿಗೆ ಕರೆ ನೀಡಿ ಕೇರಳದ ಎಲ್‌ಡಿಎಫ್‌ ಮುಖಂಡ ಜಾಯ್‌್ಸ ಜಾಜ್‌ರ್‍ ವಿವಾದಕ್ಕೀಡಾಗಿದ್ದಾರೆ. ಅವರ ಕೀಳು ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಹೇಳಿಕೆ ಹಿಂಪಡೆದು ವಿಷಾದ ವ್ಯಕ್ತಪಡಿಸಿದ್ದಾರೆ.

ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಜಾಜ್‌ರ್‍, ‘ರಾಹುಲ್‌ ಗಾಂಧಿ ಅವರ ಸಭೆಗಳು ಕೇವಲ ಮಹಿಳಾ ಕಾಲೇಜುಗಳಲ್ಲಿ ನಡೆಯುತ್ತವೆ. ಅವರು ಹುಡುಗಿಯರಿಗೆ ಹೇಗೆ ನಿಲ್ಲಬೇಕು, ಹೇಗೆ ಬಗ್ಗಬೇಕು ಎಂದು ಪಾಠ ಮಾಡುತ್ತಾರೆ. ಹಾಗಾಗಿ ಆತನ ಹತ್ತಿರ ಹೋಗಬೇಡಿ ಹಾಗೂ ಆತ ಹೇಳಿದ ರೀತಿ ಮಾಡಬೇಡಿ. ಏಕೆಂದರೆ ಆತ ಮದುವೆ ಆಗಿಲ್ಲ. ಆತನೊಬ್ಬ ಪೀಡಕ’ ಎಂದು ಹೇಳಿದ್ದರು.

ಇದಕ್ಕೆ ಖುದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಸಮಾಧಾನ ವ್ಯಕ್ತಪಡಿಸಿದ್ದರು.