Asianet Suvarna News Asianet Suvarna News

CPI leader Murder: ಸಿಪಿಐ(ಎಂ) ಮುಖಂಡನ ಹತ್ಯೆ, ಬೈಕ್ ಹಿಂಬಾಲಿಸಿ 11 ಬಾರಿ ಚೂರಿ ಇರಿದ ಹಂತಕರು!

* ಕೇರಳದಲ್ಲಿ ಮತ್ತೆ ರಾಜಕೀಯ ನಾಯಕನ ಕೊಲೆ

* ಸಿಪಿಐ(ಎಂ) ಮುಖಂಡನ ಹತ್ಯೆ, ಬೈಕ್ ಹಿಂಬಾಲಿಸಿ 11 ಬಾರಿ ಚೂರಿ ಇರಿದ ಹಂತಕರು

* ವಿವಾದ ಬಗೆಹರಿಸಲು ಬಂದಿದ್ದ ನಾಯಕ ಕೊಲೆಯಾದ

CPIM Leader PB Sandeep Kumar Stabbed to Death in Kerala Thiruvalla pod
Author
Bangalore, First Published Dec 3, 2021, 8:29 AM IST

ತಿರುವನಂತಪುರಂ(ಡಿ.03): ಪತ್ತನಮಿಟ್ಟಾ ಜಿಲ್ಲೆಯ ಪೆರಿಂಗಾರಾದಲ್ಲಿ ಸಿಪಿಐ(ಎಂ) ಮುಖಂಡ ಸಂದೀಪ್ ಕುಮಾರ್ (CPI M Leader PB Sandeep Kumar) ಅವರನ್ನು ಇರಿದು ಹತ್ಯೆ (Murder) ಮಾಡಲಾಗಿದೆ. 34 ವರ್ಷದ ಸಂದೀಪ್ ಕುಮಾರ್ ಅವರನ್ನು ದುಷ್ಕರ್ಮಿಗಳು 11 ಬಾರಿ ಇರಿದಿದ್ದಾರೆ. ಪೊಲೀಸರ ಅನ್ವಯ ಮೃತರು ಪಕ್ಷದ ಸ್ಥಳೀಯ ಕಾರ್ಯದರ್ಶಿಯಾಗಿದ್ದರು. ಡಿಸೆಂಬರ್ 2ರ ರಾತ್ರಿ 8.30ಕ್ಕೆ ಈ ಘಟನೆ ನಡೆದಿದೆ. ಘಟನೆ ಕುರಿತು ಪಕ್ಷದ ರಾಜ್ಯ ಕಾರ್ಯದರ್ಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಗರಿಗೆದರಿದೆ. ಹತ್ಯಾಕಾಂಡಕ್ಕೆ ಆರ್‌ಎಸ್‌ಎಸ್ (RSS) ಹೊಣೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹೇಳಿಕೆ ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ವಿವಾದ ಬಗೆಹರಿಸಲು ಬಂದಿದ್ದರು

ಪೊಲೀರು ನೀಡಿರುವ ಮಾಹಿತಿ ಅನ್ವಯ, ಹಂತಕರು ಸಂದೀಪ್ ಕುಮಾರ್ ಮೇಲೆ ಎಷ್ಟು ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆಂದರೆ, ಅವರು ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ. ಮೃತರು ಕುಡುಕ ಹಾಗೂ ಅಂಗಡಿಯವರ ನಡುವಿನ ಜಗಳ ಬಗೆಹರಿಸಲು ಬಂದಿದ್ದರು ಎಂಬುವುದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲಿಂದ ಬೈಕ್‌ನಲ್ಲಿ ಹೊರಟ ಸಂದೀಪ್‌ ಕುಮಾರ್‌ರನ್ನು ಹಿಂಬಾಲಿಸಿದ ದುಷ್ಕರ್ಮಿ ನಂತರ ಚಾಕುವಿನಿಂದ ಇರಿದಿದ್ದಾರೆ. ಘಟನೆಯ ಬಗ್ಗೆ ಸಿಪಿಐ(ಎಂ) ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಸಂದೀಪ್ ಕುಮಾರ್ ಅವರ ಚಿತ್ರವನ್ನು ಶೇರ್ ಮಾಡುವ ಮೂಲಕ ಮಾಹಿತಿ ನೀಡಿದೆ. ಅವರ ಹತ್ಯೆಗೆ ಪಕ್ಷ ಸಂತಾಪ ವ್ಯಕ್ತಪಡಿಸಿದೆ.

ಈ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ ಸದ್ದು ಮಾಡಿತ್ತು

ಈ ಹಿಂದೆಯೂ ಕೇರಳದಲ್ಲಿ ರಾಜಕೀಯ ಕೊಲೆ ಆರೋಪದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೂ ಮುನ್ನ ನವೆಂಬರ್ 15 ರಂದು ಕೇರಳದ ಪಾಲಕ್ಕಾಡ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ 27 ವರ್ಷದ ಎಸ್. ಸಂಜಿತ್‌ ಎಂಬಾತನನ್ನು 50 ಕ್ಕೂ ಹೆಚ್ಚು ಬಾರಿ ಇರಿದು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ, PFI ಯ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಯ ಇಬ್ಬರು ಪದಾಧಿಕಾರಿಗಳನ್ನು ಬಂಧಿಸಲಾಗಿತ್ತು.

ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿರುವ ಬಿಜೆಪಿ

ಎ. ಸಂಜೀತ್, ಪತ್ನಿಯನ್ನು ಕಚೇರಿಯಿಂದ ಕರೆದುಕೊಂಡು ಹೋಗುತ್ತಿದ್ದ ವೇಳೆ ಕೊಲೆಯಾಗಿದ್ದರು. ಆರೋಪಿಗಳು ಸಂಜೀತ್ ಮೇಲೆ 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಹತ್ಯಾಕಾಂಡದ ನಂತರ ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಹತ್ಯಾಕಾಂಡದಲ್ಲಿ ಪಿಎಫ್‌ಐ ಪಾತ್ರವೇನು ಎಂದು ಬಿಜೆಪಿ ಈಗಾಗಲೇ ಪ್ರಶ್ನಿಸುತ್ತಿದೆ. ಪಿಎಫ್‌ಐನ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಈ ಕೊಲೆಯಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಕೇರಳದಲ್ಲಿ ಜಿಹಾದಿ ಗುಂಪುಗಳಿಂದ 10 ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಗೃಹ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿ ಬರೆದಿದ್ದಾರೆ. ರಾಜ್ಯದಲ್ಲಿ ಇದುವರೆಗೆ 50 ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ..

Follow Us:
Download App:
  • android
  • ios