* ಮುಂದಿನ ವಾರ ಕೋವಿ​ನ್‌​ನಲ್ಲಿ ಜನ್ಮ ದಿನಾಂಕ ಸೇರ್ಪಡೆ ಸಾಧ್ಯ​ತೆ* ವಿದೇ​ಶಕ್ಕೆ ಹೋಗು​ವ​ವರ ಪ್ರಮಾ​ಣ​ಪ​ತ್ರ​ದಲ್ಲಿ ನಮೂ​ದು

ನವದೆಹಲಿ(ಸೆ.26): ಕೋವಿಡ್‌(Covid 19) ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ(Certificate) ಮಹ​ತ್ವದ ಬದ​ಲಾ​ವಣೆ ತರಲು ಕೇಂದ್ರ ಸರ್ಕಾರ ನಿರ್ಧ​ರಿ​ಸಿದೆ. ಇನ್ನು ವಿದೇ​ಶಕ್ಕೆ ತೆರ​ಳ​ಬ​ಯ​ಸುವ ವ್ಯಕ್ತಿ​ಗ​ಳ ಲಸಿಕಾ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ(Date Of Birth) ಕೂಡ ಇರ​ಲಿ​ದೆ ಎಂದು ಮೂಲ​ಗಳು ಹೇಳಿ​ವೆ.

ವಿಶ್ವಸಂಸ್ಥೆಯ(United Nations) ನಿಯಮಾವಳಿ ಪ್ರಕಾರ ಪ್ರಮಾ​ಣ​ಪ​ತ್ರ​ದ​ಲ್ಲಿ ಫಲಾನುಭವಿಗಳ ಜನ್ಮ ದಿನಾಂಕ ಇರ​ಬೇಕು. ಆದರೆ ಜನ್ಮ​ದಿ​ನಾಂಕವು ಪ್ರಮಾ​ಣ​ಪ​ತ್ರ​ದಲ್ಲಿ ಇಲ್ಲದ ಕಾರಣ ಬ್ರಿಟನ್‌ ಸರ್ಕಾ​ರವು ಲಸಿಕೆ ಪಡೆದ ಭಾರ​ತೀ​ಯ​ರಿಗೂ ಕ್ವಾರಂಟೈನ್‌(Quarantine) ಕಡ್ಡಾ​ಯ​ಗೊ​ಳಿ​ಸಿ​ತ್ತು.

ಈ ಹಿನ್ನೆ​ಲೆ​ಯಲ್ಲಿ ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದು ವಿದೇಶ ಪ್ರಯಾಣಕ್ಕೆ ಬಯಸಿದ್ದರೆ ಅವ​ರ ಲಸಿಕೆ ಪ್ರಮಾ​ಣ​ಪ​ತ್ರ​ದಲ್ಲಿ ಜನ್ಮ​ದಿ​ನಾಂಕ ನಿಗ​ದಿ​ಪ​ಡಿ​ಸ​ಲಾ​ಗು​ತ್ತದೆ. ಮುಂದಿನ ವಾರ ಕೋ-ವಿನ್‌ ವೆಬ್‌​ಸೈ​ಟ್‌​ನ​ಲ್ಲಲಿ ಈ ಬದ​ಲಾ​ವಣೆ ತರ​ಲಾ​ಗು​ತ್ತದೆ ಎಂದು ಮೂಲ​ಗಳು ತಿಳಿ​ಸಿ​ವೆ,

ಪ್ರಸ್ತುತ ಹುಟ್ಟಿದ ವರ್ಷದ ಲೆಕ್ಕಾಚಾರದಲ್ಲಿ ಲಸಿಕೆ ಫಲಾನುಭವಿಗಳಿಗೆ ಅವರ ಕೋವಿನ್‌ ಪ್ರಮಾಣ ಪತ್ರದಲ್ಲಿ ವಯಸ್ಸು ಮಾತ್ರವೇ ನಮೂದಿಸಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ

ಲಸಿಕೆಗಾಗಿ ಇನ್ನು ಲಸಿಕಾ ಕೇಂದ್ರಕ್ಕೆ ಹೋಗಿ ಅಥವಾ ಕೋವಿನ್‌ ವೆಬ್‌ಸೈಟ್‌ನಲ್ಲೇ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಇನ್ನು ಮುಂದೆ ವಾಟ್ಸಾಪ್‌ ಮೂಲಕ ಹತ್ತಿರದ ಕೋವಿಡ್‌ ಲಸಿಕಾ ಕೇಂದ್ರ ಹುಡುಕಬಹುದು ಮತ್ತು ಲಸಿಕೆ ಪಡೆಯಲು ನೋಂದಣಿ ಮಾಡಬಹುದು.

- ಇಂಥ ಜನಸ್ನೇಹಿ ಸೌಲಭ್ಯವನ್ನು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

‘ಮೈ ಗವ್‌ ಕೊರೋನಾ ಹೆಲ್ಪ್‌ಡೆಸ್ಕ್‌’ ವಾಟ್ಸಾಪ್‌ ಸಂಖ್ಯೆಯಾದ +91 9013151515 ನಂಬರನ್ನು ಸೇವ್‌ ಮಾಡಿಕೊಂಡು ವಾಟ್ಸಾಪ್‌ನಲ್ಲಿ ‘ಬುಕ್‌ ಸ್ಲಾಟ್‌’ ಎಂದು ಟೈಪ್‌ ಮಾಡಬೇಕು. ಈ ನಂಬರಿಗೆ ಸಂದೇಶ ಕಳುಹಿಸಿದರೆ ಮೊಬೈಲ್‌ ನಂಬರಿಗೆ 6 ನಂಬರ್‌ಗಳ ಒಟಿಪಿ ಬರುತ್ತದೆ. ನಂತರ ಬಳಕೆದಾರರು ದಿನಾಂಕ, ಸ್ಥಳ, ಲಸಿಕೆ, ಪಿನ್‌ಕೋಡ್‌ ಮುಂತಾದ ಮಾಹಿತಿಗಳನ್ನು ನೀಡಬೇಕು. ಆಗ ಎಲ್ಲಿ ಲಸಿಕೆ ಲಭ್ಯವಿದೆ ಎಂಬ ಮಾಹಿತಿಯು ವಾಟ್ಸಾಪ್‌ನಲ್ಲೇ ಬಳಕೆದಾರರಿಗೆ ಸಿಗಲಿದೆ.

ಇತ್ತೀಚೆಗೆ ಲಸಿಕಾ ಪ್ರಮಾಣಪತ್ರವನ್ನು ವಾಟ್ಸಾಪ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಲು ಮೈಗವ್‌ ಕೊರೋನಾ ಹೆಲ್ಪ್‌ಡೆಸ್ಕ್‌ ವೇದಿಕೆ ಅನುಕೂಲ ಮಾಡಿಕೊಟ್ಟಿತ್ತು. ಅಂದಿನಿಂದ ಈವರೆಗೆ 32 ಲಕ್ಷಕ್ಕೂ ಅಧಿಕ ಕೋವಿಡ್‌ ಲಸಿಕಾ ಪ್ರಮಾಣಪತ್ರಗಳು ಡೌನ್‌ಲೋಡ್‌ ಆಗಿವೆ.