ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್  ಉಗ್ರರ ನೆಲೆ ಮೇಲೆ ದಾಳಿ ಮಾಡಿದ್ದು, 350 ಉಗ್ರರನ್ನು ಧ್ವಂಸ ಮಾಡಿದೆ. ಈ ದಾಳಿಗೆ ಒಟ್ಟು 6300 ಕೋಟಿ ಮೊತ್ತದ ಯುದ್ಧ ವಿಮಾನಗಳ ಬಳಕೆಯಾಗಿದೆ. 

*ಇಲ್ಯೂಶಿನ್ 78 : ರಷ್ಯಾ ಮೂಲ, ಹಾರಾಡುತ್ತಲೇ ಇಂಧನ ಭರ್ತಿ ಮಾಡುವ ವಿಮಾನ , ಬೆಲೆ : 22 ಕೋಟಿ

*ಜಿಬಿಯು 12 ಪೇವ್ ವೇ ಲೇಸರ್ : ಗೈಡೆಡ್ ಬಾಂಬ್ ಅಮೆರಿಕ ನಿರ್ಮಿತ, 6 ಬಾಂಬ್ಗಳ ಬಳಕೆ, ಬೆಲೆ : 1.7 ಕೋಟಿ

*ಸುಖೋಯ್ : ರಷ್ಯಾ ಮೂಲದ್ದು, ದಾಳಿ ನಡೆಸಲು ಪ್ರತಿದಾಳಿ ನಡೆಸಲು ಸನ್ನದ್ಧವಾಗಿದ್ದ ವಿಮಾನ, ಬೆಲೆ : 358 ಕೋಟಿ

*ಹಿರೋನ್ ಡ್ರೋನ್ : ಇಸ್ರೇಲ್ ಮೂಲ, ಪಾಕಿಸ್ತಾನದ ಒಳಗೆ ಗುಪ್ತಚರ ಮಾಹಿತಿ ಸಂಗ್ರಹಿಸುವ ಮಾನವ ರಹಿತ ವೈಮಾನಿಕ ನೌಕೆ, ಬೆಲೆ : 80 ಕೋಟಿ

*ಮಿಗ್ 29 : ರಷ್ಯಾ ನಿರ್ಮಿತ, ಪಾಕಿಸ್ತಾನ ತಿರುಗೇಟು ನೀಡಿದರೆ ಪ್ರತಿದಾಳಿ ನಡೆಸಲು ಸಜ್ಜಾಗಿದ್ದ ವಿಮಾನ, ಬೆಲೆ : 154 ಕೋಟಿ

*ನೇತ್ರಾ : DRDO ನಿರ್ಮಿತ, ಪಾಕಿಸ್ತಾನದ ಮೇಲೆ ಹದ್ದಿನ ಕಣ್ಣಿಟ್ಟು  ಪ್ರತಿದಾಳಿ ಮುನ್ಸೂಚನೆ ನೀಡುವ ಅವಾಕ್ಸ್ ವಿಮಾನ, ಬೆಲೆ : 1750 ಕೋಟಿ

*ಮಿರಾಜ್ : ರಷ್ಯಾ ನಿರ್ಮಿತ, ಬೆಂಗಳೂರಿನ HAL  ಮೇಲ್ದರ್ಜೆಗೆ ಏರಿಸಿರುವ ವಿಮಾನ, ಬೆಲೆ : 214 ಕೋಟಿ