ಕೊರೋನಾ ವೈರಸ್ 2ನೇ ಅಲೆಗೆ ಭಾರತ ತತ್ತರಿಸುತ್ತಿದೆ. ನಿಯಂತ್ರಣಕ್ಕೆ ಸತತ ಸಭೆಗಳು ನಡೆಯುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳ ಜೊತೆ, ಎಲ್ಲಾ ಮುಖ್ಯಮಂತ್ರಿಗಳ ಜೊತೆ, ರಾಜ್ಯಪಾಲರ ಜೊತೆ, ವೈದ್ಯರ ಜೊತೆ, ಲಸಿಕೆ ಉತ್ಪಾದಕರ ಜೊತೆ ಸೇರಿದಂತೆ ಹಲವು ಸಭೆಗಳನ್ನು ಪ್ರಧಾನಿ ಮೋದಿ ನಡೆಸಿದ್ದಾರೆ. ಈ ಸಭೆಗಳ ಬಳಿಕ ಇದೀಗ ಇಂದು ರಾತ್ರಿ ಪ್ರಧಾನಿ ಮೋದಿ ದೇಶನ್ನುದ್ದೇಶಿ ಭಾಷಣ ಮಾಡಲಿದ್ದಾರೆ.

ನವದೆಹಲಿ(ಏ.20): ಕೊರೋನಾ ವೈರಸ್ 2ನೇ ಅಲೆ ದೇಶದ ವ್ಯವಸ್ಥೆಯನ್ನು ಅಲುಗಾಡಿಸಿದೆ. ಇದೀಗ ನಿಯಂತ್ರಣಕ್ಕೆ ಎಲ್ಲಾ ರಾಜ್ಯಗಳು ಹರಸಾಹಸ ಪಡುತ್ತಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು(ಏ.20) ರಾತ್ರಿ 8.45ಕ್ಕೆ ದೇಶವನ್ನುದ್ದೇಶಿ ಭಾಷಣ ಮಾಡಲಿದ್ದಾರೆ.

Scroll to load tweet…

ಮೊದಲ ಬಾರಿಗೆ ಕೊರೋನಾ ವಕ್ಕರಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಭಾಷಣ ಮಾಡಿ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದ್ದರು. ಇದೀಗ ಕೊರೋನಾ 2ನೇ ಅಲೆ ನಿಯಂತ್ರಣಕ್ಕೂ ಮೀರಿ ಹಬ್ಬುತ್ತಿರುವ ಕಾರಣ ಮೋದಿ ಮತ್ತೆ ದೇಶದ ಜನತೆಯನ್ನುದ್ಧೇಶಿ ಮತನಾಡಲಿದ್ದಾರೆ. ಇದೀಗ ಜನರಲ್ಲಿ ಮತ್ತೆ ಲಾಕ್‌ಡೌನ್ ಆತಂಕ ಎದುರಾಗಿದೆ.

ಸೀರಂಗೆ 3000 ಕೋಟಿ, ಭಾರತ್‌ ಬಯೋಟೆಕ್‌ಗೆ 1500 ಕೋಟಿ ರು. ನೆರವು!

ಮುಖ್ಯಮಂತ್ರಿಗಳು, ವೈದ್ಯರು, ಲಸಿಕೆ ಉತ್ಪಾದಕರು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರದ ತಜ್ಞರ ಜೊತೆ ಸಭೆ ನಡೆಸಿರುವ ಪ್ರಧಾನಿ ಮೋದಿ, ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಇಂದು ರಾತ್ರಿ ಮಹತ್ವದ ಸಲಹೆ ನೀಡಲಿದ್ದಾರೆ.