Asianet Suvarna News Asianet Suvarna News

ಕೊರೋನಾ ಭೀತಿ; ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ಬಂದ್‌ಗೆ ಸರ್ಕಾರ ಆದೇಶ!

ಕೊರೋನಾ  ವೈರಸ್ ಹೆಚ್ಚಾಗುತ್ತಿರುವ ಕಾರಣ ಇದೀಗ ಒಂದೊಂದೆ ಸೇವೆಗಳು ಸ್ಥಗಿತಗೊಳ್ಳುತ್ತಿದೆ. ನೈಟ್ ‌ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಮಯಗಳು ಜಾರಿಯಾಗುತ್ತಿದೆ. ಇದೀಗ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಶಾಲಾ-ಕಾಲೇಜು ಬಂದ್ ಮಾಡಲು ಸರ್ಕಾರ ಸೂಚಿಸಿದೆ.

Coronavirus Delhi government announces closure of all schools colleges till further orders ckm
Author
Bengaluru, First Published Apr 9, 2021, 6:00 PM IST

ದೆಹಲಿ(ಏ.09) ದೇಶದಲ್ಲಿ ಕೊರೋನಾ ವೈರಸ್ 2ನೇ ಆರ್ಭಟ ಆರಂಭಿಸಿದೆ. ಕಳೆದ ಬಾರಿಗಿಂತ ಈ ಬಾರಿ ಕೊರೋನಾ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ದೇಶದಲ್ಲಿ ಪ್ರತಿ ದಿನ 1.5 ಲಕ್ಷ ಪ್ರಕರಣಗಳು ದಾಖಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹೆಯಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಕಾರಣ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ವಿದೇಶಕ್ಕೆ ಯಾಕೆ? ದೇಶದ ಎಲ್ಲರಿಗೂ ಲಸಿಕೆ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಪತ್ರ!.

ನಿನ್ನೆ(ಏ.09) ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಕೊರೋನಾ ಸಭೆಯಲ್ಲಿ ಪಾಲ್ಗೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಠಿಣ ಕ್ರಮದ ಭರವಸೆ ನೀಡಿದ್ದರು. ಇದೇ ವೇಳೆ 2ನೇ ಅಲೆ ಹರಡುವಿಕೆ ತಡೆಯಲು ಲಾಕ್‌ಡೌನ್ ಹೊರತು ಪಡಿಸಿ ಉಳಿದ ಕ್ರಮಗಳ ಕುರಿತು ಚಿಂತನೆ ನಡೆಸಬೇಕು. ಕೊರೋನಾ ಮಾರ್ಗಸೂಚಿ ಪಾಲನೆಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಸಲಹೆ ಬಳಿಕ ಇಂದು ಸಭೆ ನಡಸಿದ ಕೇಜ್ರಿವಾಲ್ ಇದೀಗ ಶಾಲಾ-ಕಾಲೇಜ್ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೋನಾ ನಿಯಮ ಉಲ್ಲಂಘಿಸಿದ ಪ್ರಧಾನಿ; ದುಬಾರಿ ದಂಡ ಹಾಕಿದ ನಾರ್ವೆ ಪೊಲೀಸ್!.

ದೆಹಲಿ ಸರ್ಕಾರದ ಆದೇಶ ಎಲ್ಲಾ ತರಗತಿಗಳು ಅನ್ವಯವಾಗಲಿದೆ. ವಿದ್ಯಾರ್ಥಿಗಳ ಓಡಾಟ, ಅವರ ಹಿಂದೆ ಪೋಷಕರ ಅಲೆದಾಟ ತಪ್ಪಿಸಿ ಕೊರೋನಾ 2ನೇ ಅಲೆಗೆ ಬ್ರೇಕ್ ನೀಡಲು ಅರವಿಂದ್ ಕೇಜ್ರಿವಾಲ್ ಸರ್ಕಾರ ಮುಂದಾಗಿದೆ. 

Follow Us:
Download App:
  • android
  • ios