ಪಟನಾ(ಏ.11): ಬಿಹಾರದಲ್ಲಿ ಒಂದೇ ಕುಟುಂಬದ 23 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಿಹಾರದಲ್ಲಿ ಈವರೆಗೆ 60 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ ಸಿವಾನ್‌ ಜಿಲ್ಲೆಯೊಂದರಲ್ಲೇ 29 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 23 ಕೇಸುಗಳು ಒಂದೇ ಕುಟುಂಬಕ್ಕೆ ಸೇರಿದ್ದಾಗಿವೆ.

ಈ ಕುಟುಂಬದ ವ್ಯಕ್ತಿಯೊಬ್ಬ ಒಮಾನ್‌ನಿಂದ ಮರಳಿದ್ದ. ಆತನೇ ಸೋಂಕು ಹಬ್ಬಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಮಾನ್‌ನಿಂದ ಬಂದ ಕೂಡಲೇ ಆತನಿಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿತ್ತು. ಆದರೆ ಆತ ತನ್ನ ಸ್ನೇಹಿತರನ್ನು ಭೇಟಿ ಮಾಡಿ ಕ್ರಿಕೆಟ್‌ ಆಡಿದ್ದ.

ಕೊರೋನಾ ವಿರುದ್ಧ ಸದ್ದಿಲ್ಲದೆ ಯುದ್ಧ ಮಾಡುವ ಯೋಧರಿವರು!

ಕೆಲವು ದಿನಗಳ ಬಳಿಕ ಪರೀಕ್ಷೆಗೆ ಒಳಪಟ್ಟಾಗ ಆತನಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸಿವಾನ್‌ ಜಿಲ್ಲೆಯ ಪಂಜ್ವಾರ್‌ ಗ್ರಾಮ ಆತಂಕಕ್ಕೆ ಒಳಗಾಗಿದೆ.