ಸೋಂಕು ನಿವಾರಣೆಯ ಮೊದಲ ಲಸಿಕೆ ಕೊರೋನಾ ವಾರಿಯರ್ಸ್‌ಗೆ!

ಸೋಂಕು ನಿವಾರಣೆಯ ಮೊದಲ ಲಸಿಕೆ ಕೊರೋನಾ ವಾರಿಯರ್ಸ್‌ಗೆ| ಪ್ರಧಾನಿ ಮೋದಿ ಭಾಗಿಯಾಗಿದ್ದ ಸಭೆಯಲ್ಲಿ ನಿರ್ಧಾರ

Corona Warriors First In Line For Vaccine When Found Government Sources

ನವದೆಹಲಿ(ಜು.01): ಭಾರತಕ್ಕೆ ಕೊರೋನಾ ವಿರುದ್ಧದ ಮೊದಲ ಅರ್ಹ ಲಸಿಕೆ ಸಿಗುತ್ತಲೇ, ಅದನ್ನು ಕೊರೋನಾ ವಾರಿಯ​ರ್‍ಸ್ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೊರೋನಾಗೆ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ಭಾರತದ ಸಿದ್ಧತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಗುಡ್‌ ನ್ಯೂಸ್: ಭಾರತದ ಮೊದಲ ಕೊರೋನಾ ಔಷಧ ಸಿದ್ಧ!

ಸಭೆಯಲ್ಲಿ ಮಾತನಾಡಿದ ಮೋದಿ, ಒಮ್ಮೆ ಕೊರೋನಾ ವೈರಸ್‌ಗೆ ಔಷಧ ಲಭ್ಯವಾದರೆ ಅದು ಕೈಗೆಟುಕುವ ದರದ್ದಾಗಿರಬೇಕು ಮತ್ತು ಸಾರ್ವತ್ರಿಕವಾಗಿರಬೇಕು ಎಂದು ಹೇಳಿದ್ದಾರೆ. ಭಾರತದ ವೈವಿಧ್ಯಮಯ ಮತ್ತು ಅಗಾಧವಾದ ಜನಸಂಖ್ಯೆಗೆ ಬೇಕಾದ ಔಷಧ ತಯಾರಿಯಲ್ಲಿ ಪೂರೈಕೆ ವ್ಯವಸ್ಥೆ, ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ವಿವಿಧ ಸಂಸ್ಥೆಗಳ ಜೊತೆಗಿನ ಸಮನ್ವಯ, ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.

ಮಸೀದಿಯನ್ನು ಕೊರೋನಾ ಆಸ್ಪತ್ರೆ ಮಾಡಿದ ಆಡಳಿತ ಮಂಡಳಿ; ಉಚಿತ ಆಕ್ಸಿಜನ್ ಸೇವೆ ಲಭ್ಯ!

ಅಲ್ಲದೇ ಆರಂಭಿಕವಾಗಿ ಔಷಧ ನೀಡಿಕೆಗೆ ದುರ್ಬಲ ವರ್ಗದವರು ಮತ್ತು ಕರೋನಾ ಸೋಂಕಿನ ಅಪಾಯದಲ್ಲಿ ಇರುವವರಿಗೆ ಮೊದಲ ಆದ್ಯತೆ ನೀಡಬೇಕು. ಉದಾಹರಣೆಗೆ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್‌ಗೆ ಔಷಧ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios