Asianet Suvarna News Asianet Suvarna News

ಯಮಪುರಿಯಾದ ದೆಹಲಿ, ಬೆಂಗಳೂರಿನ ಡಿಜೆ ಹಳ್ಳಿಗೇನು ಸಂಬಂಧ?

ಶವಾಗಾದ ಮುಂದೆ ಸಾಲು ಸಾಲು ಶವಗಳು/ ಕೊರೋನಾ ನೆನಪಿಸಿದ ಆ ಘಟನೆ/ ಕಳ್ಳ ಭಟ್ಟಿ ದುರಂತದ ಕರಾಳ ನೆನಪು/ ಅಂದಿಗೂ ಇಂದಿಗೂ ಏನು ಸಾಮ್ಯತೆ/ ಶವಸಂಸ್ಕಾರಕ್ಕೂ ಜಾಗವಿಲ್ಲದ ಸ್ಥಿತಿ

Corona affect and old Bengaluru illegal liquor tragedy
Author
Bengaluru, First Published Jun 4, 2020, 6:35 PM IST

ಡೆಲ್ಲಿ ಮಂಜು

ಇಂದ್ರಪ್ರಸ್ಥದಲ್ಲಿ ಯಮಪುರಿಯ ಕ್ಯೂ...!

ಬೇಡ, ಬೇಡವೆಂದರೂ ಪದೇ ಪದೇ ಯಮನ ಆಸ್ಥಾನದ ಸಿನಿಮಾ ಸೀನ್ ಗಳು ನೆನಪಿಗೆ ಬರುತ್ತಿವೆ. ಸಿಂಹಾಸನಾಧೀಶ ಯಮ ಮಹಾರಾಜ, ಲೆಕ್ಕದಯ್ಯ ಚಿತ್ರಗುಪ್ತ, ಆ ಲೋಕಕ್ಕೆ ಕರೆದುಕೊಂಡು ಬರುವ ಮತ್ತು ಶಿಕ್ಷೆ ಗೊತ್ತು ಪಡಿಸಿದ ಬಳಿಕ ಪುನಃ ಕರೆದುಕೊಂಡು ಹೋಗುವ ಯಮಕಿಂಕರರು ಅರ್ಥಾತ್‌ ಯಮಭಟರು. ಇನ್ನು ತಮ್ಮಗಳ
ಪಾಪ-ಪುಣ್ಯಗಳ ಬ್ಯಾಲೆನ್ಸ್ ಶೀಟ್ ನೋಡಿಕೊಳ್ಳಲು ನಿಂತಿರುವ ಕ್ಯೂ.

ಇಲ್ಲಿ ಅತಿ ಹೆಚ್ಚು ಕುತೂಹಲ ಹುಟ್ಟಿಸೋದು ಲೆಕ್ಕದಯ್ಯ ಅಲಿಯಾಸ್ ಚಿತ್ರಗುಪ್ತನ ಮುಂದೆ ನಿಂತಿರುವ ಕ್ಯೂ. ಸತ್ತ ಮೇಲೂ ಕ್ಯೂನಲ್ಲಿ ಕಾಯಬೇಕಾ ಅನ್ನೋ ಪ್ರಶ್ನೆ ಹುಟ್ಟದೇ ಇರಲಾರದು. ಸಿನಿಮಾ ಅಲ್ವಾ ಹೀಗೆ ಇರುತ್ತೆ ಅಂದ್ರು  ಆ ಯಮಪುರಿ, ಬ್ಯಾಲೆನ್ಸ್ ಶೀಟ್ ನೋಡುವವರು ಇದ್ದಾರೋ ಇಲ್ವೋ ಅನ್ನೋದು ಯಾರಿಗೂ ಗೊತ್ತಿಲ್ಲ.
 ಪುರಾಣಗಳ ಹೊರತಾಗಿ ವಾಸ್ತವಾಗಿ ಸಾಕ್ಷ್ಯ ಹೇಳಲು ಯಾರೂ ಇಲ್ಲ. ಆದ್ರೆ ಮಾರ್ಡನ್ ಯಮಪುರಿ ಅರ್ಥಾತ್ ಶವಾಗಾರದಲ್ಲಿ  ಆ ಕ್ಯೂ. ಅದಕ್ಕೆ ಕಾರಣ ಇವೆಲ್ಲಕ್ಕೂ ದಾಖಲೆಯ ಸಮೇತ ಸಾಕ್ಷ್ಯಗಳು ಸಿಕ್ಕಿವೆ.

ದಿಲ್ಲಿಯವರಿಗೆ ಮಾತ್ರ ಡೆಲ್ಲಿಯಲ್ಲಿ ಚಿಕಿತ್ಸೆ, ಇದ್ಯಾವ ನ್ಯಾಯ

ಅಂತ್ಯವಸಂಸ್ಕಾರಕ್ಕಾಗಿ ಶವಗಳು ಕ್ಯೂ ಇರೋದು ಸತ್ಯ. ಇದಕ್ಕೆ ಕೊರೊನಾನೇ ಸಾಕ್ಷ್ಯಿ. ದೆಹಲಿ ಆಸ್ಪತ್ರೆಯ ಶವಾಗಾರಗಳೇ ಮತ್ತೊಂದು ಎವಿಡೆನ್ಸ್.

ಬಹಳ ವರ್ಷಗಳ ನಂತರ...
ಶವಗಳ ಕ್ಯೂ ಕುತೂಹಲ ಹೆಚ್ಚಿಸಿದ್ದು ಕೊರೊನಾ. ದೆಹಲಿಯ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯ ಶವಾಗಾರ. ಈ ಸುದ್ದಿ ಅಪ್ಪಳಿಸಿದ ಕೂಡಲೇ
ಹಲವು ವರ್ಷಗಳ ಹಿಂದಿನ ನನೆಪಿಗೆ ಜಾರಿತು ಮನಸ್ಸು. ಅದು ಈಸ್ಟ್ ಬೆಂಗಳೂರು. ಅದರಲ್ಲಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಏರಿಯಾ ಅಂದ್ರೆ ಅಲ್ಲಿ ಏನೇನು ನಡೆಯಲ್ಲ ಅಂಥ ಕೇಳಬೇಕಾದ ಸ್ಥಿತಿ.

ಹತ್ತು, ಹನ್ನೆರಡು ವರ್ಷಗಳ ಘಟನೆ ಮನಸ್ಸನ್ನು ಕಲಕಿತು. ಅಲ್ಲೂ ಕೂಡ ಸೇಮ್ ಸೀನು. ಆ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಕಳ್ಳಭಟ್ಟಿ ಸಾರಾಯಿ ದುರಂತ. ಕ್ರೈಮ್ ವರದಿಗಾರ ಅಂದ ಮೇಲೆ ಶವಾಗಾರಕ್ಕೆ ಹೋಗೋದು, ಪೋಸ್ಟ್ ಮಾರ್ಟಂ ರಿಪೋರ್ಟ್ ತಿಳಿಯೋದು, ಸುದ್ದಿ ಮಾಡೋದು ಕೂಡ ಕಾಮನ್ ಬಿಡಿ ಅನ್ನಬಹುದು. ಆದ್ರೆ ಆ ಕಳ್ಳಭಟ್ಟಿ ದುರಂತದಿಂದ ಹತ್ತಾರು ಮಂದಿ ಸಾವಿಗೆ ಕಾರಣವಾಗಿತ್ತು. ಕೇಸು, ಪೊಲೀಸರ ಸಸ್ಪೆಂಡ್, ಆಯೋಗ ಇವೆಲ್ಲಾ ಈಗ ಇತಿಹಾಸ ಬಿಡಿ.

ಅದು ದೊಡ್ಡ ಅಪರಾಧ ಪ್ರಕರಣವಾದರಿಂದ ಈಸ್ಟ್ ಬೆಂಗಳೂರಿಗೆ ಶವಾಗಾರ ಅಂದ್ರೆ ಬೌರಿಂಗ್ ಆಸ್ಪತ್ರೆ. ಆ ಶವಾಗಾರಕ್ಕೆ ಪರೀಕ್ಷೆಗೆ ಬಂದವು ಶವಗಳು. ಒಳಗಡೆ ಹೋಗಿ ನೋಡಿದ್ರೆ ಜೀವಾ ಝಲ್ ಎನ್ನುವಂತಾ ಸೀನು. ಫ್ರೀಜರ್ ನಲ್ಲಿ ಇರಬೇಕಾದ ಶವಗಳು ಗೋಡೆಯ ಪ್ಯಾಸೇಜ್ ನಲ್ಲಿ.  ಫ್ರೀಜರ್ ಕೊರತೆಯಿಂದ ಗೋಡೆಯ ಪಕ್ಕ ಸಾಲಾಗಿ ಮಲಗಿಸಲಾಗಿತ್ತು. ಕೈಗೂ, ಕಾಲಿಗೂ ಶವ ಸಿಗ್ತಾ ಇದ್ವು ಬಿಡಿ.

ಇಲ್ಲಿಗೆ ಸೀನ್ ಕಟ್ ಮಾಡಿ ಇಂದ್ರಪ್ರಸ್ಥಕ್ಕೆ ಬಂದ್ರೆ ಹತ್ತು, ಹನ್ನೆರಡು ವರ್ಷಗಳ ಬಳಿಕ ಅಂಥದ್ದೇ ಸೀನ್. ಕೊರೊನಾ ದಾಳಿಗೆ ಯಮಪುರಿಯ ಮಾರ್ಗ ಹಿಡಿಯೋರ ಸಂಖ್ಯೆ ನಿತ್ಯ ಹೆಚ್ಚುತ್ತಿದೆ. ಆದ್ರೆ ಸೋಂಕಿತರ ಶವ ಆಗಿರೋ ಕಾರಣಕ್ಕೆ ಅಂತ್ಯಸಂಸ್ಕಾರ ವೈಜ್ಞಾನಿಕ ವಾಗಿಯೇ ನಡೆಯಬೇಕು ಅನ್ನೋದು ವೈದ್ಯರ ಅಡ್ವೈಸ್.

ಯಮಪುರಿ ದಾರಿಹೋಕರ ಸಂಖ್ಯೆ ದಿಢೀರ್ ಏರಿಕೆ ಆದ ಕಾರಣಕ್ಕೆ ದೆಹಲಿ ಸರ್ಕಾರದ ಅಡಿ ಬರುವ  ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯ ಶವಾಗಾರ ಫುಲ್ ಆಗಿದೆ. ಇಲ್ಲಿ  45 ಮೃತದೇಹ ಇಡಲು ಅವಕಾಶವಿದೆ. ಸಿಬ್ಬಂದಿ ಕೊರತೆಯಿಂದಾಗಿ ಈ ಶವಗಳಿಗೆ ಅಂತ್ಯಸಂಸ್ಕಾರ ಕಾಣಿಸದ ಕಾರಣಕ್ಕೆ ಒದ್ದಾಡುವ ಸರದಿ ವೈದ್ಯರದ್ದಾಯ್ತು. 
ಶವಗಳ ಸಂಖ್ಯೆ108 ಆದಾಗ ಯಾರಿಗೇಳೋಣ ನಮ್ಮ ಪ್ರಾಬ್ಲಂ ಅಂದ್ರು ವೈದ್ಯರು.

ಒಂದರ ಪಕ್ಕ ಒಂದರಂತೆ ಶವಗಳನ್ನು ಪೇರಿಸಿದ್ರು. ಫ್ರೀಜರ್ ನಲ್ಲೂ ಕೂಡ ಒಂದರ ಜಾಗದಲ್ಲಿ ಎರಡು ಇಟ್ರು. ಕೊನೆಗೆ ಜಾಗವಿಲ್ಲದೆ 28 ಶವಗಳನ್ನ ಪ್ಯಾಸೇಜ್ ನಲ್ಲಿ ಇರಿಸಿದ್ರು. ಘಾಟ್ ಗಳಲ್ಲಿ ಸಿಬ್ಬಂದಿ ಕೊರತೆಯಿಂದ ಅಂತ್ಯಸಂಸ್ಕಾರ ಸಿಕ್ಕಾಪಟ್ಟೆ ತಡವಾಗುತ್ತಿದೆ ಎಂಬ ಮಾತುಗಳು ಕೇಳಿಬಂತು.

ದೆಹಲಿಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯ್ತು. ವಿಷಯ ಹೈಕೋರ್ಟ್ ಮುಂದೆ ಬಂತು. ವಿವರಣೆ ನೀಡುವ ಜೊತೆಗೆ ಬೇಗ ಬೇಗ ಅಂತ್ಯಸಂಸ್ಕಾರ ನೆರವೇರಿಸಿ ಅಂಥ ಡೆಲ್ಲಿ ಸರ್ಕಾರಕ್ಕೆ ಹೈಕೋಟ್೯ ಖಡಕ್ ಸೂಚನೆಯೂ ಕೊಡ್ತು.

ಇದರ ಬೆನ್ನಲ್ಲೇ ಡೆಲ್ಲಿ ಸರ್ಕಾರ ಕೊರೊನಾ ಚಿಕಿತ್ಸೆ ನೀಡಲು ದೊಡ್ಡ ದೊಡ್ಡ ಹಾಲ್ ಮತ್ತು ಶವಸಂಸ್ಕಾರ ಕ್ಕೆ ಜಾಗ ಹುಡುಕಾಟ ಮಾಡಿ ಅಂಥ ಡಿಎಂಗಳಿಗೆ ಸೂಚನೆ ಕೊಡ್ತು.
ಜಾಗ ಹುಡುಕಿ ಜೊತೆಗೆ ಸಿದ್ದವಾಗಿ ಇಟ್ಟುಕೊಳ್ಳಿ ಎಂದಿತು ಸರ್ಕಾರ. 

ಈ ಆದೇಶಗಳು, ಸುತ್ತೋಲೆಗಳು ಬಂದು ಐದಾರು ದಿನ ಕಳೆದ್ರು ಪರಿಸ್ಥಿತಿ ಆ ಮಟ್ಟಕ್ಕೇನು ಬದಲಾಗಿಲ್ಲ. ಉತ್ತರ ಸಿಂಪಲ್, ಅವು ಕೊರೊನಾ ಸೋಂಕಿತ ಶವಗಳು, ಸಿಬ್ಬಂದಿ ಕೊರತೆಯಿಂದ ವಿಲೇವಾರಿ ತಡವಾಗಿದೆ ಅಷ್ಟೆ.  ಒಂದು ರೀತಿ ಸಾಯೋದು ಮುಖ್ಯ ಅಲ್ಲ, ಸತ್ತಮೇಲೂ ಅಂತ್ಯಸಂಸ್ಕಾರ ಸರಿಯಾಗಿ ನೆರವೇರಬೇಕಾದ್ರೆ ಅದೃಷ್ಟ ಬೇಕು ಅದೃಷ್ಟ ಅಂಥ ಅದರ ಬಲ ಹಿಡಿದುಕೊಂಡು ಯಮಪುರಿ ತಲುಪಬೇಕಾಗಿದೆ...!

Follow Us:
Download App:
  • android
  • ios