* ಮಹಿಳೆ ಮೇಲೆ ಕುಳಿತ ಪೊಲೀಸಪ್ಪ* ವಿಡಿಯೋ ಶೇರ್ ಮಾಡಿ ಘಟನೆ ಖಂಡಿಸಿದ ನೆಟ್ಟಿಗರು* ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ಕಿಡಿ

ಕಾನ್ಪುರ(ಜು.18): ದೇಹಾತ್‌ನಲ್ಲಿ ಪೊಲೀಸಪ್ಪನ ವಿಡಿಯೋ ಒಂದು ಭಾರೀ ವೈರಲ್ ಆಗಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಹಿಳೆಯೊಬ್ಬಳ ಮೇಲೆ ಮಂಡಿಯೂರಿ ಕುಳಿತ ದೃಶ್ಯವಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

Scroll to load tweet…

ಕಾನ್ಪುರದ ಭೋಗನಿಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಪೊಲೀಸರು ಗುರ್ಗಾದಾಸ್‌ಪುರ ಹಳಗ್ಳಿಯಲ್ಲಿ ಓರ್ವ ಮಹಿಳೆಯನ್ನು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಘಿದೆ. ಇನ್ನು ಅಖಿಲೇಶ್ ಯಾದವ್ ಈ ಫೊಟೋ ಟ್ವೀಟ್ ಮಾಡಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೃಪಾಕಟಾಕ್ಷದಡಿ ಕೆಲ ಪೊಲೀಸರ ಕೆಟ್ಟ ನಡೆಯಿಂದ, ಉತ್ತರ ಪ್ರದೇಶದ ಪೊಲಿಸ್ ಇಲಾಖೆಗೆ ಕಪ್ಪು ಮಸಿ ಬಳಿಯುತ್ತಿದೆ. ಬಿಜೆಪಿ ಆಡಳಿತದಲ್ಲಿ ಕೆಟ್ಟ ಘಟನೆಗಳಳಿಗೆ ಬರವಿಲ್ಲ. ಇದು ನಿಂದನೀಯ ಘಟನೆ ಎಂದಿದ್ದಾರೆ.

Scroll to load tweet…

ಇದೇ ವೇಳೆ ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ, ಕಾನ್ಪುರ್ ದೇಹತ್ ನ ಎಸ್ಪಿ "ಚಿತ್ರದಲ್ಲಿ ಕಾಣುತ್ತಿರುವ ಆರೋಪಿಯ ಹಳ್ಳಿಯ ಮಹಿಳೆ ಪೊಲೀಸರ ಕಾಲರ್ ಹಿಡಿದಿದೆಳೆದಿದ್ದಾಳೆ. ಈ ವೇಳೆ ಆಕೆ ಬಹುಶಃ ಬಿದ್ದಿದ್ದಾಳೆ. ಹೀಗಿರುವಾಗ ಪೊಲೀಸಪ್ಪನೂ ಆಕೆ ಮೇಲೆ ಬಿದ್ದಿದ್ದಾನೆ. ಮಹಿಳೆ ಕಾಲರ್ ಬಿಟ್ದಟ ಕೂಡಲೇ ಆತ ಅಲ್ಲಿಂದ ಹೋಗಿದ್ದಾನೆ. ಆದರೆ ಮಹಿಳೆಯ ದೂರಿನ ಮೇರೆಗೆ ಇನ್ಸ್‌ಪೆಕ್ಟರ್‌ನ್ನು ತನಿಖೆಗೊಳಪಡಿಸಲಾಗಿದೆ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Scroll to load tweet…

ಸದ್ಯ ಈ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಅನೇಕ ಮಂದಿ ಸ್ಕ್ರೀನ್‌ಶಾಟ್‌ ಶೇರ್ ಮಾಡಿ ಈ ಘಟನೆಯನ್ನು ಖಂಡಿಸಿದ್ದಾರೆ.