ಅಪ್ರಾಪ್ತರ ನಡುವಣ ಸಮ್ಮತಿಯ ಸೆಕ್ಸ್ ಸಂದಿಗ್ಧ ವಿಷಯ: ಕೋರ್ಟ್| ಅಪ್ರಾಪ್ತರ ಸಮ್ಮತಿ ಕಾನೂನಿನಡಿ ಮಾನ್ಯವೇ ಅಲ್ಲ
ಮುಂಬೈ(ಫೆ.08): ಇಬ್ಬರು ಅಪ್ರಾಪ್ತರ ನಡುವೆ ನಡೆಯುವ ಸಮ್ಮತಿಯ ಲೈಂಗಿಕ ಕ್ರಿಯೆ ಸರಿಯೋ? ತಪ್ಪೋ? ಎಂದು ಕಾನೂನಿನಡಿ ನಿರ್ಧರಿಸಲು ಆಗದ ಸಂದಿಗ್ಧ ವಿಷಯ. ಏಕೆಂದರೆ, ಕಾನೂನಿನಡಿ ಅಪ್ರಾಪ್ತರ ಸಮ್ಮತಿ ಸಿಂಧುವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಇದೇ ವೇಳೆ, ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 19 ವರ್ಷದ ಹುಡುಗನೊಬ್ಬನಿಗೆ ಜಾಮೀನು ಮಂಜೂರು ಮಾಡಿದೆ.
‘15 ವರ್ಷದ ಬಾಲಕಿಯ ಮೇಲೆ ಆಕೆಯ 19 ವರ್ಷದ ಬಂಧುವಿನಿಂದಲೇ ಅತ್ಯಾಚಾರ ನಡೆದಿದೆ, ಈ ಬಗ್ಗೆ ಆಕೆಯ ಸಹಪಾಠಿಯಿಂದ ನನಗೆ ಗೊತ್ತಾಗಿದೆ’ ಎಂದು 2017ರಲ್ಲಿ ಮಹಾರಾಷ್ಟ್ರದ ಶಿಕ್ಷಕಿಯೊಬ್ಬರು ದೂರು ದಾಖಲಿಸಿದ್ದರು. ಅದರ ಆಧಾರದ ಮೇಲೆ 19 ವರ್ಷದ ಬಾಲಕನಿಗೆ ಪೋಸ್ಕೋ ಕಾಯ್ದೆಯಡಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪು ಪ್ರಶ್ನಿಸಿ ಬಾಲಕ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದ. ವಿಶೇಷ ಎಂದರೆ, ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ನೀಡಿದ್ದ ‘ಸಂತ್ರಸ್ತ’ ಬಾಲಕಿ, ನಮ್ಮಿಬ್ಬರದೂ ಸಮ್ಮತಿಯ ಲೈಂಗಿಕ ಕ್ರಿಯೆ ಎಂದು ಹೇಳಿದ್ದಳು. ಅಲ್ಲದೆ, ಶಿಕ್ಷಕಿಯ ಒತ್ತಡಕ್ಕೆ ಮಣಿದು ದೂರು ದಾಖಲಿಸಿದ್ದಾಗಿ ಪೊಲೀಸರ ಮುಂದೆ ಬಾಲಕಿ ತಿಳಿಸಿದ್ದಳು.
ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಬಾಲಕನಿಗೆ ಜಾಮೀನು ಮಂಜೂರು ಮಾಡಿದೆ. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಆಕೆಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಎನ್ನುವ ಮೂಲಕ ಯಾವುದೇ ಬಲವಂತ ನಡೆದಿಲ್ಲ ಎಂಬುದನ್ನು ತಿಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 8, 2021, 8:19 AM IST