ಬೆಂಗಳೂರು ಸೇರಿ ದೇಶದ 35 ನಗರಗಳಲ್ಲಿ ಕಾಂಗ್ರೆಸ್‌ ಪತ್ರಿಕಾಗೋಷ್ಠಿ ನಡೆಸಲಿದ್ದು, ರಾಹುಲ್‌ ಅನರ್ಹತೆ ವಿರುದ್ಧ ಹೋರಾಟ ಮುಂದುವರಿಸಲು ನಿರ್ಧರಿಸಿದೆ. 

ನವದೆಹಲಿ (ಮಾರ್ಚ್‌ 28, 2023): ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿದ ಕ್ರಮವನ್ನು ವಿರೋಧಿಸಿ ಮುಂದಿನ 2 ದಿನಗಳ ಕಾಲ ದೇಶವ್ಯಾಪಿ 35 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಡೆಮಾಕ್ರಸಿ ಡಿಸ್‌‘ಕ್ವಾಲಿಫೈಡ್‌’ ಹೆಸರಲ್ಲಿ ಈ ಪತ್ರಿಕಾಗೋಷ್ಠಿ ನಡೆಸಲಾಗುವುದು.

ಈ ಪತ್ರಿಕಾಗೋಷ್ಠಿಯಲ್ಲಿ (Press Meet) ರಾಹುಲ್‌ ಗಾಂಧಿ ಅನರ್ಹತೆ (Rahul Gandhi Disqualification) ವಿಷಯದ ಜೊತೆಗೆ, ಗೌತಮ್‌ ಅದಾನಿ (Gautam Adani) ವಿಷಯ ಮತ್ತು ದೇಶಬಿಟ್ಟು ಪರಾರಿಯಾದ ವಂಚಕ ಉದ್ಯಮಿಗಳಿಗೆ ಕ್ಲೀನ್‌ಚಿಟ್‌ ನೀಡಿದ ಸರ್ಕಾರದ ನಿರ್ಧಾರಗಳನ್ನೂ ಪ್ರಸ್ತಾಪಿಸಲಾಗುವುದು ಎಂದು ಪಕ್ಷದ ಹಿರಿಯ ನಾಯಕ ಜೈರಾಮ್‌ ರಮೇಶ್‌ (Jairam Ramesh) ತಿಳಿಸಿದರು. ಮಾರ್ಚ್‌ 28ರಂದು 4 ನಗರಗಳಲ್ಲಿ ಮತ್ತು ಮಾರ್ಚ್‌ 29ರಂದು ಬೆಂಗಳೂರು ಸೇರಿದಂತೆ 31 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಪಕ್ಷದ ಹಿರಿಯ ನಾಯಕ ಆನಂದ್‌ ಶರ್ಮಾ (Anand Sharma) ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನು ಓದಿ: ಕುದುರೆ ರೇಸ್‌ ಓಡಲು ಕತ್ತೆ ತಂದಿದ್ದೀರಿ: ರಾಹುಲ್‌ ಬಗ್ಗೆ ಸಚಿವ ಪುರಿ ಟೀಕೆ

ರಾಹುಲ್‌ ಗಾಂಧಿ ಅನರ್ಹತೆ ವಿಷಯದಲ್ಲಿ ಮುಂದಿನ ನಡೆ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ನಿವಾಸದಲ್ಲಿ ನಡೆದ 18 ವಿಪಕ್ಷಗಳ ಸಭೆಯಲ್ಲಿ (Opposition Meet) ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಈ ಕುರಿತು ಟ್ವೀಟ್‌ (Tweet) ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಒಬ್ಬ ವ್ಯಕ್ತಿಯನ್ನು ಉಳಿಸಲು ಪ್ರಧಾನಿ ಮೋದಿ (PM Narendra Modi) ದೇಶದ 140 ಕೋಟಿ ಜನರ ಹಿತಾಸಕ್ತಿ ಬಲಿಕೊಡುತ್ತಿದ್ದಾರೆ. ಪ್ರಧಾನಿ ಪರಮ ಮಿತ್ರನಿಗಾಗಿ ಬಿಜೆಪಿ ಸಂಸತ್ತಿನಲ್ಲಿ ಕಲಾಪ ನಡೆಸಲು ಬಿಡುತ್ತಿಲ್ಲ. ಏನೂ ತಪ್ಪೇ ಆಗಿಲ್ಲವೆಂದಾದಲ್ಲಿ ಅದಾನಿ ವಿಷಯದಲ್ಲಿ ಜಂಟಿ ಸಂಸದೀಯ ಸಮಿತಿ (Joint Parliamentary Committee) ತನಿಖೆ ನಡೆಸಲು ಕೇಂದ್ರ ಸರ್ಕಾರ (Central Government) ಏಕೆ ಹಿಂಜರಿಯುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್‌ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್‌ ಸಂಸದರು