ನವದೆಹಲಿ (ನ. 09): 2019 ರ ಲೋಕಸಭಾ ಚುನಾವಣೆ ವೇಳೆ ಭಾರೀ ಹಣದ ಸಮಸ್ಯೆ ಇದೆ ಎಂದು ಹೇಳಿದ್ದ ಕಾಂಗ್ರೆಸ್, ಚುನಾವಣಾ ಪ್ರಚಾರಕ್ಕೆ ಬರೋಬ್ಬರಿ 820 ಕೋಟಿಗೂ ಅಧಿಕ ಖರ್ಚು ಮಾಡಿದೆ. ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸಲ್ಲಿಸಿರುವ ಮಾಹಿತಿಯಲ್ಲಿ ಇದು ಬಹಿರಂಗವಾಗಿದ್ದು, ಇದರಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತೆಲಂಗಾಣ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭಾ ಚುನಾವಣಾ ಪ್ರಚಾರ ವೆಚ್ಚವೂ ಸೇರಿದೆ.

ಅಯೋಧ್ಯೆ ತೀರ್ಪು ಪ್ರಕಟಿಸಿರುವ ಐವರು ನ್ಯಾಯಾಧೀಶರಿವರು..

2014 ರ ಚುನಾವಣಾ ವೆಚ್ಚಕ್ಕೆ ಹೋಲಿಸಿದರೆ, ಈ ಬಾರಿಯ ಕಾಂಗ್ರೆಸ್ ಚುನಾವಣಾ ವೆಚ್ಚದಲ್ಲಿ ಶೇ.59 ರಷ್ಟು ಹೆಚ್ಚಳವಾಗಿದೆ. 2014 ರಲ್ಲಿ 516 ಕೋಟಿ ರು. ಖರ್ಚು ಮಾಡಿತ್ತು. ಕಾಂಗ್ರೆಸ್ ಸಲ್ಲಿಸಿದ ಲೆಕ್ಕಗಳ ಪ್ರಕಾರ ಪ್ರಚಾರಕ್ಕೆ 626.3 ಕೋಟಿ ರು. ಹಾಗೂ ಅಭ್ಯರ್ಥಿಗಳಿಗೆ 193.9 ಕೋಟಿ ರು. ವ್ಯಯಿಸಿದೆ. ಇದೇ ವೇಳೆ ಚುನಾವಣೆ ಘೋಷಣೆಯಾದ ದಿನದಿಂದ ಮಗಿ ಯುವ ವರೆಗೆ 856 ಕೋಟಿ ಆದಾಯ ಗಳಿಸಿದೆ ಎಂದು ಕಾಂಗ್ರೆಸ್ ಘೋಷಿಸಿಕೊಂಡಿದೆ.

ಇದೇ ವೇಳೆ ಟಿಎಂಸಿ 83.6 ಕೋಟಿ, ಬಿಎಸ್‌ಪಿ 55.4 ಕೋಟಿ, ಎನ್‌ಸಿಪಿ 72.3 ಕೋಟಿ ಹಾಗೂ ಸಿಪಿಎಂ ಕೇವಲ 73.1 ಲಕ್ಷ ಮಾತ್ರ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದೆ. ಇನ್ನು ಜಾತ್ಯತೀಯ ಜನತಾ ದಳ ಕರ್ನಾಟಕ ಲೋಕಸಭಾ ಚುನಾವಣೆ ವೇಳೆ ತಾನು ಸ್ಪರ್ಧಿಸಿದ್ದ 5 ಲೋಕಸಭಾ ಕ್ಷೇತ್ರಗಳಲ್ಲಿ 2.11 ಕೋಟಿ ರು. ವೆಚ್ಚ ಮಾಡಿದ್ದಾಗಿ ಹೇಳಿದೆ. ಬಿಜೆಪಿ ತನ್ನ ಖರ್ಚು ವೆಚ್ಚಗಳ ಘೋಷಣೆ ಇನ್ನಷ್ಟೇ ಮಾಡಬೇಕಿದ್ದು, 2014 ರಲ್ಲಿ ಬಿಜೆಪಿ 714 ಕೋಟಿ ರು. ವೆಚ್ಚ ಮಾಡಿತ್ತು.