2024 ರ ಜನವರಿ ಎರಡನೇ ವಾರದಲ್ಲಿ ಕಾಂಗ್ರೆಸ್ ಪಕ್ಷದ ದೆಹಲಿಯ ತನ್ನ ಪ್ರಧಾನ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಿದೆ. ಹೊಸ ಪ್ರಧಾನ ಕಚೇರಿಯನ್ನು ಇಂದಿರಾ ಭವನ ಎಂದು ಕರೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

ನವದೆಹಲಿ (ಡಿ.21): ಕಾಂಗ್ರೆಸ್‌ ಪಕ್ಷ ದೆಹಲಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಿದೆ. 2024ರ ಜನವರಿ 2ನೇ ವಾರದಲ್ಲಿ ಪಕ್ಷ ತನ್ನ ಕೇಂದ್ರ ಕಚೇರಿಯನ್ನು ಶಿಫ್ಟ್‌ ಮಾಡಲಿದೆ. ಇದಕ್ಕೂ ಮುನ್ನ ನವೆಂಬರ್‌ 19 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದಂದು ಹೊಸ ಕಚೇರಿಗೆ ಶಿಫ್ಟ್‌ ಆಗುವುದಾಗಿ ಘೋಷಣೆ ಮಾಡಿತ್ತು. ಆದರೆ, ಕಾಮಗಾರಿ ಬಾಕಿ ಇದ್ದ ಕಾರಣ ಇದು ಮುಂದೂಡಿಕೆಯಾಗಿತ್ತು. ಈಗ ಕೇಂದ್ರ ದೆಹಲಿಯಲ್ಲಿರುವ ರಾಷ್ಟ್ರ ರಾಜಧಾನಿಯ ರೂಸ್ ಅವೆನ್ಯೂ ಪ್ರದೇಶದಲ್ಲಿ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಜನವರಿ 2ನೇ ವಾರದಲ್ಲಿ ಪಕ್ಷ ಹೊಸ ಕಚೇರಿಗೆ ಶಿಫ್ಟ್‌ ಆಗಲಿದ್ದು, ಇದಕ್ಕೆ ಇಂದಿರಾ ಭವನ ಎಂದು ಹೆಸರಿಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಲ್ಲಾ ಸಿವಿಲ್ ಕೆಲಸಗಳು ಮುಗಿದಿದ್ದು, ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರವನ್ನೂ ಪಕ್ಷದ ಮುಖಂಡರು ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಹೊಸ ಪಕ್ಷದ ಕಚೇರಿಯನ್ನು 'ಇಂದಿರಾ ಭವನ' ಎಂದು ಕರೆಯಲಾಗುತ್ತದೆ.ಜನವರಿ 2ನೇ ವಾರದಂದು ಪಕ್ಷವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಎಲೆಕ್ಟ್ರಿಕಲ್, ಸಿವಿಲ್, ಪೈಂಟ್‌ಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 21 ಕ್ಕೆ ಸಿಡಬ್ಲ್ಯುಸಿ ಸಭೆ: ಲೋಕಸಭಾ ಚುನಾವಣೆ ಸನ್ನದ್ಧತೆ ಕುರಿತು ‘ಕೈ’ ಚರ್ಚೆ; ಭಾರತ್‌ ಜೋಡೋ 2.0ಗೆ ರೆಡಿ!

9, ಕೋಟ್ಲಾ ರಸ್ತೆಯಲ್ಲಿ ಕಾಂಗ್ರೆಸ್‌ನ ಆರು ಅಂತಸ್ತಿನ ಹೊಸ ಕಛೇರಿ ಇದೆ. ಪ್ರಸ್ತುತ 24 ಅಕ್ಬರ್ ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿ ಇದೆ, ಇದು ಕಳೆದ 45 ವರ್ಷಗಳಿಂದ ಕಾಂಗ್ರೆಸ್‌ನ ಸಾಕಷ್ಟು ಏರಿಳಿತಗಳಿಗೆ ಸಾಕ್ಷಿಯಾಗಿದೆ. ಜನವರಿ 1978 ರಲ್ಲಿ 24 ಅಕ್ಬರ್ ರಸ್ತೆಯಲ್ಲಿ ಕಾಂಗ್ರೆಸ್ ತನ್ನ ಕಚೇರಿಯನ್ನು ಪಡೆದುಕೊಂಡಿತು. 10 ಜನಪಥ್‌ನೊಂದಿಗೆ ಸಂಪರ್ಕ ಹೊಂದಿದ 24 ಅಕ್ಬರ್ ರಸ್ತೆಯು ಲುಟ್ಯೆನ್ಸ್ ದೆಹಲಿಯಲ್ಲಿರುವ VII ಬಂಗಲೆಯಾಗಿದೆ.

'ಕಾಂಗ್ರೆಸ್‌ಗಾಗಿ ಕಾಸು ಕೊಡಿ..' ಲೋಕಸಭೆ ಚುನಾವಣೆಗೆ ಜನರಿಂದ ಹಣವೆತ್ತಲು ಮುಂದಾದ ಕಾಂಗ್ರೆಸ್‌!