ನವದೆಹಲಿ (ಜೂ. 26): ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ ನಡುವೆ ಕೊರೋನಾ ಕಾರಣದಿಂದ ಬಿರುಕು ಮೂಡುತ್ತಿದೆ. ಉದ್ಧವ್‌ ಠಾಕ್ರೆ ಕಾರ್ಯವೈಖರಿಗೆ ಕಾಂಗ್ರೆಸ್‌ ಶಾಸಕರು ಬೇಸತ್ತಿದ್ದು, ಎಲ್ಲ ಫೈಲ್‌ಗಳನ್ನು ತಡೆಹಿಡಿದಿದ್ದಾರೆ ಎನ್ನುವುದು ಸಿಟ್ಟಿಗೆ ಮುಖ್ಯ ಕಾರಣ.

ಜೊತೆಗೆ ಉದ್ಧವ್‌ ಭೇಟಿಗೂ ಸಿಗುತ್ತಿಲ್ಲ, ಫೋನ್‌ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕರು ಸೋನಿಯಾ ಗಾಂಧಿ ಮತ್ತು ಶರದ್‌ ಪವಾರ್‌ಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ನಿಸರ್ಗ ಚಂಡಮಾರುತದ ನಂತರ ಉದ್ಧವ್‌ ಕೇವಲ ರಾಯ್‌ಗಢ ಜಿಲ್ಲೆಗೆ ವಿಮಾನದ ಮೂಲಕ ಭೇಟಿ ನೀಡಿ ಬಂದರೆ, ಇಳಿ ವಯಸ್ಸಿನಲ್ಲೂ ಶರದ್‌ ಪವಾರ್‌ ಎಲ್ಲ ಜಿಲ್ಲೆಗೆ ಹೋಗಿ ಬಂದಿದ್ದಾರೆ.

ನೇಪಾಳದ ಕಿರಿಕ್; ರಾಂ ಮಾಧವ್‌ ಮತ್ತೆ ಮೋದಿಗೆ ಹತ್ತಿರ

ಇನ್ನು ದೆಹಲಿಯಲ್ಲಿ ಮೊದಲಿಗೆ ಕೋವಿಡ್‌ ನಿಯಂತ್ರಣ ಚೆನ್ನಾಗಿ ನಿರ್ವಹಿಸಿದ್ದ ಅರವಿಂದ ಕೇಜ್ರಿವಾಲ್‌ ಕೈಯಿಂದ ಈಗ ಕಂಟ್ರೋಲ್‌ ತಪ್ಪುತ್ತಿದೆ. ಕಳೆದ ಒಂದು ವಾರದಿಂದ ಅಮಿತ್‌ ಶಾ ಪೂರ್ತಿ ದೆಹಲಿ ವಿಷಯದಲ್ಲಿ ಸಕ್ರಿಯರಾಗಿದ್ದು, ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯಪಾಲರು ಪೂರ್ತಿ ನಿಯಂತ್ರಣ ಸಾಧಿಸುವ ಪ್ರಯತ್ನದಲ್ಲಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ