ನವದೆಹಲಿ(ಡಿ. 21): ಕೊರೋನಾ ಲಸಿಕೆ ಅಭಿಯಾನದ ವೇಳೆ ಲಸಿಕೆ ತಯಾರಿಕಾ ಸಂಸ್ಥೆಗಳ ವಿರುದ್ಧ ದಾಖಲಾಗುವ ಕೇಸ್‌ಗಳ ವಿರುದ್ಧ ಸರ್ಕಾರ ರಕ್ಷಣೆ ಒದಗಿಸಬೇಕು. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದರ್‌ ಪೂನಾವಾಲ ಹೇಳಿದ್ದಾರೆ.

ಇಂಡಿಯಾಸ್‌ ಗ್ಲೋಬಲ್‌ ಟೆಕ್ನಾಲಜಿ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಔಷಧ ತಯಾರಿಕಾ ಸಂಸ್ಥೆಗಳು, ಅದರಲ್ಲೂ ಲಸಿಕೆ ತಯಾರಿಕಾ ಕಂಪನಿಗಳಿಗೆ ಕಾನೂನಿನ ರಕ್ಷಣೆಯ ಅಗತ್ಯವಿದೆ. ಲಸಿಕೆ ವಿತರಣೆ ಆರಂಭವಾದ ಬಳಿಕ ವಿವಿಧ ರೀತಿಯ ಸಮಸ್ಯೆಗಳು ಗೋಚರಿಸಬಹುದು. ಅಂತಹ ಸಂದರ್ಭದಲ್ಲಿ ಸರ್ಕಾರ ಔಷಧ ಕಂಪನಿಗಳ ನೆರವಿಗೆ ಧಾವಿಸಬೇಕಿದೆ.

ಹಲವು ದೇಶಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಉದಾಹರಣೆ ಅಮೆರಿಕದಲ್ಲಿ ಲಸಿಕೆಯ ವಿರುದ್ಧ ದಾಖಲಾಗುವ ಪ್ರಕರಣಗಳಿಂದ ರಕ್ಷಣೆ ನೀಡಲಾಗುತ್ತದೆ ಎಂದು ಪೂನವಾಲ ಹೇಳಿದ್ದಾರೆ.