Asianet Suvarna News Asianet Suvarna News

ಸಿನಿಮಾ ಮಂದಿರಗಳೇ ಶುದ್ಧ ಕುಡಿಯುವ ನೀರು ಒದಗಿಸಬೇಕು; ಕೋರ್ಟ್ ಆದೇಶ

* ಸಿನಿಮಾ ಮಂದಿರಕ್ಕೆ ಹೊರಗಿನಿಂದ ನೀರು ತರುವಂತಿಲ್ಲ
* ಜನರಿಗೆ ಕುಡಿಯುವ ನೀರು ಒದಗಿಸುವುದು ಮಂದಿರದ ಮಾಲೀಕರ ಜವಾಬ್ದಾರಿ
* ಹಳೆಯ ಅರ್ಜಿ ವಿಚಾರಣೆ ವೇಳೆ ಮಹತ್ವದ ಆದೇಶ

Cinema hall should provide free drinking water if it prohibits water from outside Madras HC mah
Author
Bengaluru, First Published Oct 4, 2021, 10:13 PM IST

ಚೆನ್ನೈ(ಅ. 04)  ಮದ್ರಾಸ್ ಹೈ ಕೋರ್ಟ್(Madras High Court)  ಮಹತ್ವದ ಆದೇಶವೊಂದನ್ನು ನೀಡಿದ್ದು ಸಿನಿಮಾ ಮಂದಿರಗಳೆ ವೀಕ್ಷಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ತಿಳಿಸಿದೆ. ಹೊರಗಿನಿಂದ ಬರುವ ನೀರನ್ನು ನೀಡಬಾರದು ಎಂದು ತಿಳಿಸಿದೆ.

ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣಿಯನ್ ಪೀಠ ಮಹತ್ವದ ಆದೇಶ ನೀಡಿದೆ.   ಹೊರಗಿನಿಂದ ನೀರು ತರುವ ಪರಿಪಾಠ ಬಿಡಬೇಕು. ಸಿನಿಮಾ ಮಂದಿರದಲ್ಲಿಯೇ ನೀರು ಪೂರೈಕೆ ಘಟಕ ಸ್ಥಾಪನೆ ಮಾಡಬೇಕು ಎಂದು ತಿಳಿಸಿದೆ.

2016 ರಲ್ಲಿ ಜಿ ದೇವರಾಜನ್ ಎಂಬುವರು ಸಲ್ಲಿಸಿದ್ದ  ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಮಾತು ಹೇಳಿದೆ. ಸಿನಿಮಾ ಮಂದಿರದಲ್ಲಿ ಎಂಆರ್‌ ಪಿಗಿಂತ( Maximum Retail Price (MRP)) ಅತಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ತಡೆ ಹಾಕಬೇಕು ಎಂದು ಅರ್ಜಿ ಸಕ್ಕಿಸಿದ್ದರು.

ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುವುದರಿಂದ ಏನು ಲಾಭ?

ಭದ್ರತೆ ಕಾರಣದಿಂದಲೂ ಹೊರಗಿನಿಂದ ನೀರು ತರುವುದು ಸರಿ ಅಲ್ಲ. ವಾಟರ್(Water) ಕೂಲರ್ ಗಳನ್ನು ಸನಿಮಾ ಮಂದಿರಗಳೆ ಸ್ಥಾಪನೆ ಮಾಡಬೇಕು. ಇಲ್ಲವಾದರೆ ಅಂಥ  ಥಿಯೇಟರ್ ಗಳ ಲೈಸನ್ಸ್ ರದ್ದು ಮಾಡಲಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.

ವಾಟರ್ ಪ್ಯೂರಿಫೈರ್ ಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನಿರ್ವಹಿಸಬೇಕು. ಸಿನಿಮಾ ಶುರುವಾಗುವುದಕ್ಕೆ ಮುನ್ನವೇ ಕುಡಿಯುವ ನೀರು ಲಭ್ಯ ಇರಬೇಕು.  ಒಂದು ವೇಳೆ ನೀರು ಲಭ್ಯ ಇಲ್ಲ ಎಂದಾದರೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಸಿನಿಮಾ ಮಂದಿರದ ಮಾಲೀಕ  ಈ ನಿಯಮಕ್ಕೆ ತಪ್ಪಿದರೆ ದಂಡ ತೆತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

Follow Us:
Download App:
  • android
  • ios