Asianet Suvarna News Asianet Suvarna News

ಗಡಿಯಲ್ಲಿ ಕಾಪ್ಟರ್‌ ಹಾರಿಸಿ ಚೀನಾ ಉದ್ಧಟತನ: ಭಾರತದಿಂದ ಪ್ರತ್ಯುತ್ತರ!

ಗಡಿಯಲ್ಲಿ ಚೀನಾ ಮತ್ತೆ ಉದ್ಧಟತನ| ಸೈನಿಕರ ಹೊಡೆದಾಟದ ಬಳಿಕ ಗಡಿ ಪ್ರದೇಶದಲ್ಲಿ ಕಾಪ್ಟರ್‌ ಹಾರಾಟ| ಪ್ರತಿಯಾಗಿ ಯುದ್ಧ ವಿಮಾನಗಳನ್ನೇ ಹಾರಿಸಿ ಎಚ್ಚರಿಸಿದ ಭಾರತ

Chinese Choppers Seen Near LAC In Ladakh Air Force Deploys Jets
Author
Bangalore, First Published May 13, 2020, 8:26 AM IST

ನವದೆಹಲಿ(ಮೃ.13); ಭಾರತ- ಚೀನಾ ಗಡಿಯಲ್ಲಿ ಕಳೆದ ವಾರ ಉಭಯ ದೇಶಗಳ ಸೈನಿಕರ ನಡುವೆ ಹೊಡೆದಾಟ ಸಂಭವಿಸಿದ ನಂತರ ಚೀನಾ ಆ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್‌ಗಳನ್ನು ಹಾರಿಸಿ ಉದ್ಧಟತನ ತೋರಿರುವ ಸಂಗತಿ ಬೆಳಕಿಗೆ ಬಂದಿದೆ.

ಭಾರತ- ಚೀನಾ ಸೈನಿಕರ ನಡುವೆ ಗಡಿಯಲ್ಲಿ ಘರ್ಷಣೆ!

ಉಭಯ ದೇಶಗಳ ಸುಮಾರು ಸೈನಿಕರ ನಡುವೆ ಲಡಾಖ್‌ನ ಪ್ಯಾಂಗ್ಯಾಂಗ್‌ ಸರೋವರ ಹಾಗೂ ಸಿಕ್ಕಿಂ ಗಡಿ ಪ್ರದೇಶದಲ್ಲಿ ಕಳೆದ ವಾರ ಮುಖಾಮುಖಿ ಘರ್ಷಣೆ ಸಂಭವಿಸಿತ್ತು. ನಂತರ ಲಡಾಖ್‌ನ ಗಡಿಯ ಬಳಿ ಹಲವಾರು ಬಾರಿ ಚೀನಾದ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ. ಆದರೆ, ಭಾರತದ ಗಡಿಯೊಳಗೆ ಪ್ರವೇಶಿಸಿಲ್ಲ. ಇದಕ್ಕೆ ಪ್ರತಿಯಾಗಿ ಭಾರತ ತನ್ನ ಸುಖೋಯ್‌-30 ಯುದ್ಧ ವಿಮಾನಗಳನ್ನು ಹಾರಾಡಿಸಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಈ ಘಟನೆಯ ನಂತರ ಗಡಿಯಲ್ಲಿ ಎರಡೂ ದೇಶಗಳು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿವೆ ಎಂದು ತಿಳಿದುಬಂದಿದೆ.

ಭಾರತ-ಚೀನಾ ನಡುವೆ 3,488 ಕಿ.ಮೀ. ಉದ್ದದ ವಾಸ್ತವ ಗಡಿ ನಿಯಂತ್ರಣ ರೇಖೆಯಿದೆ. ಇಲ್ಲಿನ ಬಹಳಷ್ಟುಪ್ರದೇಶಗಳಲ್ಲಿ ಗಡಿಯನ್ನು ಗುರುತಿಸಲಾಗಿಲ್ಲ. ಇದೇ ಗಡಿಯಲ್ಲಿ ಬರುವ ಅರುಣಾಚಲ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳು ತನ್ನವು ಎಂದು ಚೀನಾ ಹೇಳುತ್ತಿದೆ. ಈ ಪ್ರದೇಶಗಳಲ್ಲಿ ತಮ್ಮ ತಮ್ಮ ಗಡಿಯೊಳಗೆ ಭಾರತ-ಚೀನಾ ಎರಡೂ ದೇಶಗಳು ಆಗಾಗ ಹೆಲಿಕಾಪ್ಟರ್‌ಗಳನ್ನು ಹಾರಿಸುತ್ತಿರುತ್ತವೆ. ಆದರೆ, ಕಳೆದ ವಾರ ಚೀನಾದ ಹೆಲಿಕಾಪ್ಟರ್‌ಗಳು ಇನ್ನಷ್ಟುಹತ್ತಿರಕ್ಕೆ ಬಂದಿದ್ದವು ಎಂದು ಹೇಳಲಾಗಿದೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಕೊರೋನಾ ವೈರಸ್‌ ಬಿಕ್ಕಟ್ಟಿನ ನಂತರ ಚೀನಾದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರುತ್ತಿದೆ. ನೂರಾರು ಕಂಪನಿಗಳು ಚೀನಾವನ್ನು ತೊರೆಯುತ್ತಿವೆ. ಅವುಗಳಲ್ಲಿ ಬಹಳಷ್ಟುಕಂಪನಿಗಳು ಭಾರತಕ್ಕೆ ಬರಲು ಆಸಕ್ತಿ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಚೀನಾ ಸೇನೆ ಗಡಿಯಲ್ಲಿ ಉಪಟಳ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios