ರಾಯ್‌ಪುರ್(ಡಿ.21): ಎನ್‌ಆರ್‌ಸಿ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ಛತ್ತೀಸ್‌ಗಡ್ ಸಿಎಂ ಭೂಪೇಶ್ ಬಾಗೆಲ್, ಎನ್‌ಆರ್‌ಸಿ ಜಾರಿಯಾದರೆ ರಾಜ್ಯದ ಅರ್ಧ ಜನಸಂಖ್ಯೆಗೆ ತನ್ನ ಪೌರತ್ವ ಸಾಬೀತುಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?

ರಾಜ್ಯದ ಅರ್ಧ ಜನಸಂಖ್ಯೆ ಬಳಿ ಪೌರತ್ವ ಸಾಬೀತುಪಡಿಲು ಭೂಮಿಯಾಗಲಿ, ಆಸ್ತಿಯಾಗಲಿ ಅಥವಾ ಯಾವುದೇ ದಾಖಲೆಗಳಾಗಲಿ ಇಲ್ಲ ಎಂದು ಬಾಗೆಲ್ ಮಾರ್ಮಿಕವಾಗಿ ಹೇಳಿದ್ದಾರೆ.

ಅಶಿಕ್ಷಿತ ಸಮುದಾಯದ ಜನರ ಪೂರ್ವಜರು ರಾಜ್ಯದ ವಿವಿಧ ಹಳ್ಳಿಗಳಿಂದ ಬೇರೆ ಬೇರೆ ಕಡೆ ವಲಸೆ ಬಂದಿದ್ದು, ಅವರ ಬಳಿ ಪೌರತ್ವ ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂದು ಬಾಗೆಲ್ ಹೇಳಿದರು.

1906ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ದ.ಆಫ್ರಿಕಾದಲ್ಲಿ ಗುರುತು ಯೋಜನೆ ಜಾರಿಗೆ ತರಲು ಮುಂದಾದಾಗ ಮಹಾತ್ಮಾ ಗಾಂಧಿ ಅದನ್ನು ವಿರೋಧಿಸಿದ್ದರು ಎಂದು ಬಾಗೆಲ್ ನೆನಪಿಸಿದರು.

2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ

ಅದರಂತೆ ಛತ್ತೀಸ್‌ಗಡ್‌ದಲ್ಲಿ ಎನ್‌ಆರ್‌ಸಿ ಜಾರಿಗೆ ತಮ್ಮ ವಿರೋಧವಿದೆ ಎಂದು ಸಿಎಂ ಭೂಪೇಶ್ ಬಾಗೆಲ್ ಸ್ಪಷ್ಟಪಡಿಸಿದರು.