Asianet Suvarna News Asianet Suvarna News

ಮನೆಯಲ್ಲೂ ಮಾಸ್ಕ್‌ ಧರಿಸಿ, ಅತಿಥಿಗಳ ದೂರವಿಡಿ!

ಕೇಂದ್ರದಿಂದ ಲಾಕ್ಡೌನ್‌ ಮಾರ್ಗಸೂಚಿ| ಸೋಂಕು ಹೆಚ್ಚಿರುವೆಡೆ 14 ದಿನ ಸೀಮಿತ ಲಾಕ್‌ಡೌನ್‌ಗೆ ಸಲಹೆ| ಮನೆಯಲ್ಲೂ ಮಾಸ್ಕ್‌ ಧರಿಸಿ, ಅತಿಥಿಗಳ ದೂರವಿಡಿ!

Centre issues guidelines for states ahead of Phase III vaccination pod
Author
Bangalore, First Published Apr 27, 2021, 9:48 AM IST

ನವದೆಹಲಿ(ಏ.27):  ಕೊರೋನಾ 2ನೇ ಅಲೆ ದೇಶವನ್ನು ಮಾರಕವಾಗಿ ಆವರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಇದು ಮನೆಯೊಳಗೂ ಮಾಸ್ಕ್‌ ಧರಿಸುವ ಮತ್ತು ಅತಿಥಿಗಳನ್ನು ದೂರವಿಡುವ ಸಮಯ ಎಂದು ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಲಹೆ ನೀಡಿದೆ.

ಸೋಂಕು ನಿಯಂತ್ರಣದಲ್ಲಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬ ಸಾಬೀತಾದ ಅಂಶಗಳ ಜೊತೆಜೊತೆಗೇ, ಗಾಳಿಯಲ್ಲೂ ಸೋಂಕು ಹರಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ನೀತಿಯ ಆಯೋಗ ಸದಸ್ಯರಾಗಿರುವ ಹಿರಿಯ ವೈದ್ಯ ಡಾ. ವಿ.ಕೆ.ಪೌಲ್‌ ಮೇಲಿನಂತೆ ಸಲಹೆ ನೀಡಿದ್ದಾರೆ.

"

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಂಕು ಹರಡುತ್ತಿರುವ ರೀತಿಯನ್ನು ನೋಡಿದರೆ ಜನರು ಹೊರಗಡೆ ಅಷ್ಟೇ ಅಲ್ಲ ಮನೆಯಲ್ಲೂ ಮಾಸ್ಕ್‌ ಧರಿಸುವ ಸಮಯ ಬಂದಿದೆ. ಒಂದು ವೇಳೆ ಮನೆಯಲ್ಲಿ ಕೊರೋನಾ ರೋಗಿ ಇದ್ದರೆ ಎಲ್ಲರೂ ಕಡ್ಡಾಯ ಮಾಸ್ಕ್‌ ಧರಿಸಬೇಕು. ಇಲ್ಲದೇ ಇದ್ದರೂ, ಮನೆಯಲ್ಲಿ ಬೇರೆಯವರೊಂದಿಗೆ ಮಾತನಾಡುವಾಗಲೂ ಅಕ್ಕ ಪಕ್ಕದ ಮನೆಯವರ ಜೊತೆ ವ್ಯವಹಿಸುವಾಗ ಮಾಸ್ಕ್‌ ಧರಿಸಬೇಕು’ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಜನರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಹೋಗುವನ್ನು ನಿಲ್ಲಿಸಬೇಕು. ಮನೆಗೆ ಅತಿಥಿಗಳನ್ನು ಆಹ್ವಾನಿಸಬಾರದು. ಮನೆಯಲ್ಲಿ ಸೂಕ್ತ ಸೌಲಭ್ಯಗಳು ಇಲ್ಲದೇ ಇದ್ದರೆ ಸೋಂಕಿತರು ಕೋವಿಡ್‌ ಸೆಂಟರ್‌ಗೆ ದಾಖಲಾಗಬೇಕು ಎಂದು ಹೇಳಿದ್ದಾರೆ.

ಅಧ್ಯಯನ ವರದಿಗಳ ಅನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇದ್ದ ಸಮಯದಲ್ಲಿ ಸೋಂಕಿತನೊಬ್ಬ 30 ದಿನಗಳ ಅವಧಿಯಲ್ಲಿ 406 ಜನರಿಗೆ ಸೋಂಕು ಹಬ್ಬಿಸಬಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಪ್ರಮಾಣವನ್ನು ಶೇ.50ರಷ್ಟುಇಳಿಸಿದರೂ, ಸೋಂಕಿತನಿಂದ ಇತರರಿಗೆ ಹಬ್ಬುವ ಪ್ರಮಾಣ ಕೇವಲ 15ಕ್ಕೆ ಇಳಿಯುತ್ತದೆ. ಶೇ.75ರಷ್ಟುಕಡಿಮೆ ಮಾಡಿದರೆ ಸೋಂಕಿತ ವ್ಯಕ್ತಿಯೊಬ್ಬ 30 ದಿನಗಳಲ್ಲಿ ಕೇವಲ 2.5 ಜನರಿಗೆ ಮಾತ್ರವೇ ಸೋಂಕು ಹಬ್ಬಿಸಬಲ್ಲ. ಹೀಗಾಗಿ ಎಲ್ಲೆಡೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೇಂದ್ರದಿಂದ ಲಾಕ್ಡೌನ್‌ ಮಾರ್ಗಸೂಚಿ

ಕೊರೋನಾ ನಿಯಂತ್ರಣಕ್ಕೆ ಹಲವು ರಾಜ್ಯಗಳು ಲಾಕ್‌ಡೌನ್‌ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಬೆನ್ನಲ್ಲೇ, ಲಾಕ್‌ಡೌನ್‌ ನಿಯಮ ಹೇಗಿರಬೇಕು. ಯಾವ ಪ್ರದೇಶಗಳನ್ನು ಲಾಕ್‌ಡೌನ್‌ ಮಾಡಬೇಕು ಎಂಬುದರ ಕುರಿತಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಯೊಂದನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ.

ಇದೇ ವೇಳೆ ಪಾಸಿಟಿವಿಟಿ ದರ ಹೆಚ್ಚಿರುವ ಕಂಟೇನ್ಮೆಂಟ್‌ ವಲಯಗಳಲ್ಲಿ 14 ದಿನಗಳ ಕಾಲ ನಿರ್ಬಂಧ ವಿಧಿಸುವ ಅಧಿಕಾರವನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಡಲಾಗಿದ್ದು, ಸ್ಥಳೀಯ ಪರಿಸ್ಥಿತಿಯನ್ನು ವಿಶ್ಲೇಷಿಸಿ, ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

"

ಮಾರ್ಗಸೂಚಿಯಲ್ಲಿ ಏನಿದೆ?

- 1 ವಾರ ಕಾಲ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ, ಶೇ.60ರಷ್ಟುಹಾಸಿಗೆ ಭರ್ತಿ ಆಗಿದ್ದರೆ ಲಾಕ್ಡೌನ್‌ ರೀತಿ ನಿರ್ಬಂಧ.

- ಕಂಟೇನ್ಮೆಂಟ್‌ ವಲಯಗಳಲ್ಲಿ ನಿರ್ಬಂಧಕ್ಕೆ ಹೆಚ್ಚಿನ ಒತ್ತು ನೀಡಬೇಕು.

- ಅಗತ್ಯ ಚಟುವಟಿಕೆ ಹೊರತುಪಡಿಸಿ ಉಳಿದವಕ್ಕೆ ನಿರ್ಬಂಧ ಹೇರಲು ಸ್ಥಳೀಯ ಆಡಳಿತಗಳು ರಾತ್ರಿ ಕಫä್ರ್ಯ ಜಾರಿ ಮಾಡಬೇಕು.

- ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳ ನಿಷೇಧ.

- ಮದುವೆ ಕಾರ್ಯಕ್ರಮಕ್ಕೆ 50 ಮಂದಿ, ಅಂತ್ಯಕ್ರಿಯೆಗೆ 20 ಜನರ ಮಿತಿ.

- ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

- ವಾಣಿಜ್ಯ ಮಳಿಗೆ, ಚಿತ್ರಮಂದಿರ, ರೆಸ್ಟಾರೆಂಟ್‌ಗಳು, ಕ್ರೀಡಾ ಸಂಕೀರ್ಣ, ಸ್ಪಾ, ಈಜುಕೊಳ ಮತ್ತು ಧಾರ್ಮಿಕ ಸ್ಥಳ ಸ್ಥಗಿತಗೊಳಿಸಬೇಕು

- ಸಾರ್ವಜನಿಕ ಸಾರಿಗೆಗಳಾದ ರೈಲ್ವೆ, ಮೆಟ್ರೋ, ಬಸ್‌ಗಳು ಮತ್ತು ಕ್ಯಾಬ್‌ಗಳು ಅರ್ಧದಷ್ಟುಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು

- ಅಗತ್ಯ ವಸ್ತುಗಳ ಸಾಗಣೆ ಸೇರಿದಂತೆ ಅಂತರ್‌ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು

- ಅರ್ಧದಷ್ಟುಸಾಮರ್ಥ್ಯದೊಂದಿಗೆ ಕಚೇರಿಗಳು ಕಾರ್ಯನಿರ್ವಹಿಸಬಹುದು.

- ಕೈಗಾರಿಕೆ, ವೈಜ್ಞಾನಿಕ ಸಂಸ್ಥೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕು.

- ಕೋವಿಡ್‌ ಆಸ್ಪತ್ರೆಗಳ ಮೇಲ್ವಿಚಾರಣೆಗೆ ಜಿಲ್ಲಾ ಹಿರಿಯ ಅಧಿಕಾರಿಗಳನ್ನು ನೇಮಿಸಬೇಕು

 

Follow Us:
Download App:
  • android
  • ios