ಬೆಂಗಳೂರು(ಮಾ. 22)  ರಾಜೇಂದ್ರ ಬದಾಮಿಕರ್ , ಸುಶ್ರೀ ಖಾಜಿ ಜಯಬುನ್ನೀಷಾ ಮೊಹಿಯುದ್ದೀನ್  ಅವರು ಕರ್ನಾಟಕ ಹೈ ಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.  ಭಾರತದ ರಾಷ್ಟ್ರಪತಿ ಇವರನ್ನು ನೇಮಕ ಮಾಡಿದ್ದಾರೆ. ಎರಡು ವರ್ಷಗಳ  ಕಾಲ ಹೆಚ್ಚುವರಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲಿದ್ದಾರೆ.  

ನ್ಯಾಯಾಧೀಶರ ನೇಮಕವನ್ನು ರಾಷ್ಟ್ರಪತಿಗಳೇ ಮಾಡಬೇಕು ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಸಂವಿಧಾನದ ಆರ್ಟಿಕಲ್  224  ರ ಅನ್ವಯ ನ್ಯಾಯಾಧೀಶರ ನೇಮಕವಾಗಿದೆ. ಕೇಂದ್ರ ಸರ್ಕಾರ ಇದನ್ನು ನೋಟಿಫೈ ಮಾಡುತ್ತದೆ. 

ಸರ್ಕಾರಕ್ಕೆ ಬಂತು ನ್ಯಾಯಾಂಗ ನಿಂದನೆ ನೋಟಿಸ್

ಕರ್ನಾಟಕ ಹೈಕೋರ್ಟ್ ನ ತೀರ್ಮಾನಗಳು ರಾಜಕಾರಣ ಮತ್ತು ಸಾರ್ವಜನಿಕ ಹಿತಾಸಕ್ತಿ ವಲಯದ ಮೇಲೆ ಪರಿಣಾಮ ಬೀರುವುದನ್ನು ನೋಡಿಕೊಂಡೇ ಬಂದಿದ್ದೇವೆ. ಕೊರೋನಾ ನ್ಯಾಯಾಲಯಗಳ ದಿನಚರಿ ಮೇಲೆಯೂ ಪರಿಣಾಮ ಬೀರಿತ್ತು.  ರಾಜೇಂದ್ರ ಬದಾಮಿಕರ್ ರಿಜಿಸ್ಟರ್ ಜನರಲ್(ಕರ್ನಾಟಕ ಹೈಕೋರ್ಟ್) ಆಗಿದ್ದರೆ , ಖಾಜಿ ಜಾಗರೂಕತೆ ವಿಭಾಗದ ರಿಜಿಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು .