Asianet Suvarna News Asianet Suvarna News

ಜಾತ್ಯತೀತತೆ, ರಾಷ್ಟ್ರೀಯತೆ ಪಾಠಗಳಿಗೆ ಸಿಬಿಎಸ್‌ಇ ಕೊಕ್‌

ರಾಷ್ಟ್ರೀಯತೆ, ಜಾತ್ಯತೀತತೆ, ಪೌರತ್ವ, ನೋಟು ರದ್ದತಿ ಹಾಗೂ ಸಾಂವಿಧಾನಿಕ ಹಕ್ಕುಗಳು ಎಂಬ ಅಧ್ಯಾಯಗಳನ್ನು ಸಿಬಿಎಸ್‌ಇ ಕೈಬಿಟ್ಟಿದೆ. ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

CBSE syllabus cut Chapters On Secularism Nationalism and Citizenship
Author
New Delhi, First Published Jul 9, 2020, 8:53 AM IST

ನವದೆಹಲಿ(ಜು.09): ಕೊರೋನಾ ವೈರಸ್‌ ಕಾರಣ ಸಿಬಿಎಸ್‌ಇ ಪಠ್ಯಕ್ರಮದಿಂದ ಶೇ.30ರಷ್ಟು ಪಠ್ಯ ಕಡಿತಗೊಳಿಸುವ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಹಲವು ಮಹತ್ವದ ಪಾಠಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. 

ರಾಷ್ಟ್ರೀಯತೆ, ಜಾತ್ಯತೀತತೆ, ಪೌರತ್ವ, ನೋಟು ರದ್ದತಿ ಹಾಗೂ ಸಾಂವಿಧಾನಿಕ ಹಕ್ಕುಗಳು ಎಂಬ ಅಧ್ಯಾಯಗಳನ್ನು ಸಿಬಿಎಸ್‌ಇ ಕೈಬಿಟ್ಟಿದೆ. ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶೇ.30ರಷ್ಟು ಪಠ್ಯ ಕಡಿತಗೊಳಿಸುವ ತೀರ್ಮಾನದ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದೆ. 10ನೇ ತರಗತಿ ಪಠ್ಯದಿಂದ ಪ್ರಜಾಸತ್ತೆ, ವೈವಿಧ್ಯತೆ, ಲಿಂಗ, ಧರ್ಮ, ಪ್ರಜಾಸತ್ತೆಯ ಸವಾಲುಗಳು ಎಂಬ ಪಾಠಗಳನ್ನು ತೆಗೆದುಹಾಕಲಾಗಿದೆ. 11ನೇ ತರಗತಿ ಪಠ್ಯದಲ್ಲಿ ಒಕ್ಕೂಟ ವ್ಯವಸ್ಥೆ (ಫೆಡರಲಿಸಂ), ಪೌರತ್ವ, ರಾಷ್ಟ್ರೀಯತೆ, ಜಾತ್ಯತೀತತೆ ಹಾಗೂ ಭಾರತದಲ್ಲಿನ ಸ್ಥಳೀಯ ಆಂದೋಲನ ಎಂಬ ಅಧ್ಯಾಯಗಳನ್ನು ಕೈಬಿಡಲಾಗಿದೆ.

ಸೋನಿಯಾ ಕುಟುಂಬದ ಟ್ರಸ್ಟ್‌ನಲ್ಲಿ ವಿದೇಶಿ ಹಣ..? ತನಿಖೆಗೆ ಸಚಿವರ ತಂಡ ರೆಡಿ

12ನೇ ತರಗತಿ ಪಠ್ಯದಲ್ಲಿ ಪಾಕಿಸ್ತಾನ, ಮ್ಯಾನ್ಮಾರ್‌, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳ ಜತೆಗಿನ ಭಾರತದ ಸಂಬಂಧ, ಭಾರತದ ಆರ್ಥಿಕ ಅಭಿವೃದ್ಧಿಯ ಬದಲಾಗುವ ಗತಿ, ಭಾರತದಲ್ಲಿನ ಸಾಮಾಜಿಕ ಆಂದೋಲನಗಳು ಹಾಗೂ ನೋಟು ರದ್ದತಿ ಎಂಬ ಪಾಠಗಳನ್ನು ಅಳಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಭಾರವಾಗಬಾರದು ಎಂಬ ಕಾರಣಕ್ಕೆ ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಆದರೆ ಪಠ್ಯಗಳಲ್ಲಿನ ಮೂಲ ಮೌಲ್ಯಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios