ನವದೆಹಲಿ(ಫೆ.13): 2021ರ ಕೇಂದ್ರ ಬಜೆಟ್‌ ಶೀಮಂತರ ಪರವಾಗಿದೆ ಎಂದು ವಿಪಕ್ಷಗಳು ಸುಳ್ಳು ಕತೆಕಟ್ಟುತ್ತಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ವಾಗ್ದಾಳಿ ನಡೆಸಿದರು.

ರಾಜ್ಯಸಭೆಯಲ್ಲಿ ಬಜೆಟ್‌ ಅಧಿವೇಶನದ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌,‘ರಸ್ತೆಯಿಂದ ಕೃಷಿವರೆಗೆ, ವಸತಿ, ವಿದ್ಯಾರ್ಥಿ ವೇತನದಿಂದ ವಿದ್ಯುತ್‌ವರೆಗೆ ಜನರಿಗೆ ಉಪಯೋಗವಾಗುವಂತಹ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದರೂ ಸರ್ಕಾರ ಕೋಟ್ಯಧಿಪತಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ’ ಎಂದು ಹೇಳಿದರು.

ಇದೇ ವೇಳೆ ಕೊರೋನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತಿನ ಆರ್ಥಿಕತೆ ಕುಸಿಯುತ್ತಿರುವಾಗ ಭಾರತದ ಬಜೆಟ್‌ ಆತ್ಮನಿರ್ಭರ ಭಾರತದ ಮಹತ್ತರ ಉದ್ದೇಶವನ್ನು ಹೊಂದಿದೆ. ಸಮಸ್ಯೆಗಳಿಗೆ ತುರ್ತು ಅಲ್ಪಕಾಲಿಕ ಪರಿಹಾರಕ್ಕೆ ಬದಲಾಗಿ ದೀರ್ಘ ಕಾಲಿಕ, ಸುಸ್ಥಿರ ಬೆಳವಣಿಗೆಗೆ ಉತ್ತೇಜನ ನೀಡುವ ಅಂಶಗಳು ಬಜೆಟ್‌ನಲ್ಲಿವೆ. ಈ ನಡುವೆ ಅಗತ್ಯವಿರುವ ಜನರಿಗೆ ತುರ್ತು ಪರಿಹಾರವನ್ನೂ ಒದಗಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ರೈತ ಕಾಯ್ದೆಗಳಲ್ಲಿ ತಿದ್ದುಪಡಿಗೂ ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.