ನವದೆಹಲಿ[ಫೆ.13]: ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ 67,000 ರು. ವಿದ್ಯುತ್‌ ಬಿಲ್‌ ಅನ್ನು ಬಾಕಿ ಉಳಿಸಿಕೊಂಡಿರುವ ಕಾರಣ ಗ್ರೇಟರ್‌ ನೋಯ್ಡಾದಲ್ಲಿರುವ ಬಾದಲ್ಪುರದಲ್ಲಿ ಇರುವ ಅವರ ಮನೆಯ ವಿದ್ಯುತ್‌ ಸಂಪರ್ಕವನ್ನು ಬುಧವಾರ ಕಡಿತಗೊಳಿಸಲಾಗಿತ್ತು. ಇದರಿಂದ ಮಾಯಾವತಿ ಅವರು ಕೆಲ ಹೊತ್ತು ಕಿರಿಕಿರಿ ಅನುಭವಿಸುವಂತಾಯಿತು.

ಬಳಿಕ ಮಾಯಾವತಿ ಕುಟುಂಬ ಸದಸ್ಯರು 50,000 ರು. ಡಿಪಾಸಿಟ್‌ ಮಾಡಿದ ಬಳಿಕ ವಿದ್ಯುತ್‌ ಸಂಪರ್ಕವನ್ನು ಪುನಃ ನೀಡಲಾಗಿದೆ.

Electricity department disconnected the electricity connection of former UP CM Mayawati's brother, AnandKumar, due to non payment of ₹67000 bill. In UttamPradesh, you could be anybody, but rules are rules!! @myogiadityanath
https://t.co/sTefvcSINd

— PritiGandhi (@MrsGandhi) February 12, 2020

ಇದೇ ವೇಳೆ ಮಾಯಾವತಿ ನಿವಾಸಕ್ಕೆ ವಿದ್ಯುತ್‌ ಕಡಿತ ಮಾಡಿದ್ದರಲ್ಲಿ ಯಾವುದೇ ರಾಜಕಾರಣ ಇಲ್ಲ. ಹಣ ಪಾವತಿ ಆಗದೇ ಇದ್ದ ಕಾರಣಕ್ಕೆ ವಿದ್ಯುತ್‌ ಕಡಿತ ಮಾಡಲಾಗಿತ್ತು ಎಂದು ಲಖನೌ ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.