ಪಂಜಾಬ್‌ ಗಡಿಯಲ್ಲಿ ಮತ್ತೆ ಪಾಕ್‌ ಡ್ರೋನ್‌ ಪ್ರತ್ಯಕ್ಷ | ಕಾರ‍್ಯಪ್ರವೃತ್ತರಾಗಿ 3 ಡ್ರೋನ್‌ ಹೊಡೆದುರುಳಿಸಿದ ಸೇನೆ | ಡ್ರೋನ್‌ಗಳಲ್ಲಿ ಜಿಪಿಎಸ್‌, ಅತ್ಯಾಧುನಿಕ ಕ್ಯಾಮೆರಾ, ದಿಕ್ಸೂಚಿ ಉಪಕರಣ ಪತ್ತೆ

ಫಿರೋಜ್‌ಪುರ (ಅ. 23): ಪಂಜಾಬ್‌ ಗಡಿಯಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನದ ಹಲವು ಡ್ರೋನ್‌ಗಳು ಹಾರಾಟ ನಡೆಸಿರುವುದು ಪತ್ತೆಯಾಗಿವೆ. ಹೀಗಾಗಿ, ಈ ಬಗ್ಗೆ ಕಾರ್ಯಪ್ರವೃತ್ತಗೊಂಡ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯ ಸಿಬ್ಬಂದಿ, ಪಂಜಾಬ್‌ನ ಫಿರೋಜ್‌ಪುರ ಹುಸೇನ್‌ವಾಲಾ ಸೆಕ್ಟರ್‌ನಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳ ಪೈಕಿ 3 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾರೆ ಎಂದು ಬಿಎಸ್‌ಎಫ್‌ ಮೂಲಗಳು ತಿಳಿಸಿವೆ.

ಭಾರತದಲ್ಲಿ ಉಗ್ರ ದಾಳಿಯ ಪಿತೂರಿ ರೂಪಿಸುತ್ತಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರು, ಡ್ರೋನ್‌ಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದಾರೆ. ಡ್ರೋನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಕ್ಯಾಮೆರಾ, ಜಿಪಿಎಸ್‌ ಮತ್ತು ದಿಕ್ಸೂಚಿ ಉಪಕರಣಗಳನ್ನು ಉಗ್ರರು ಡ್ರೋನ್‌ಗಳಲ್ಲಿ ಅಡಗಿಸಿಟ್ಟಿದ್ದಾರೆ. ಈ ಮೂಲಕ ಭಾರತದ ಗಡಿ ನುಸುಳುವಿಕೆಗೆ ಮಾರ್ಗೋಪಾಯಗಳನ್ನು ಶೋಧಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಭೇಷ್ ಬಾಲಕ, ಅಮೆಜಾನ್, ಫ್ಲಿಪ್ ಕಾರ್ಟ್ ಗೆ ಎಂಥಾ ಏಟು ಕೊಟ್ಯಪ್ಪಾ!

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಭಯೋತ್ಪಾದಕರ ಈ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆಂತರಿಕ ಭದ್ರತಾ ಸಂಸ್ಥೆಗಳ ಸಹಕಾರವನ್ನು ವೃದ್ಧಿಸಿ ಪಂಜಾಬ್‌ ಪೊಲೀಸರು ಸೇರಿದಂತೆ ಜಂಟಿ ಕಾರಾರ‍ಯಚರಣೆ ಕೇಂದ್ರದ ಸ್ಥಾಪಿನೆಗೆ ಭಾರತ ಮುಂದಾಗಿದೆ. ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್‌ಗಳ ಕಾರಾರ‍ಯಚರಣೆಯನ್ನು ಗಂಬೀರವಾಗಿ ಪರಿಗಣಿಸಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಂಟಿ ಕಾರಾರ‍ಯಚರಣೆ ಕೇಂದ್ರದ ಸ್ವರೂಪ:

ಭಾರತದ ಮೇಲಿನ ಉಗ್ರರು ಮತ್ತು ಪಾಕಿಸ್ತಾನದ ದಾಳಿಯನ್ನು ಮೆಟ್ಟಿನಿಲ್ಲಲು ರೂಪಿಸಲಾಗಿರುವ ಜಂಟಿ ಕಾರಾರ‍ಯಚರಣೆ ಕೇಂದ್ರದಲ್ಲಿ ರಾಷ್ಟ್ರೀಯ ತನಿಖಾ ತಂಡ, ರಾ(ಸಂಶೋಧನಾ ಮತ್ತು ವಿಶ್ಲೇಷಣೆ ವಿಭಾಗ), ಗುಪ್ತಚರ ಸಂಸ್ಥೆ, ಪಂಜಾಬ್‌ ಪೊಲೀಸರು ಹಾಗೂ ಗೃಹ ಸಚಿವಾಲಯದ ಪ್ರತಿನಿಧಿಗಳಿರಲಿದ್ದಾರೆ. ಅಲ್ಲದೆ, ಸಂದರ್ಭಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತಾದ ಪ್ರತಿಯೊಂದು ಬೆಳವಣಿಗೆಗಳ ಮಾಹಿತಿಯನ್ನು ನಿರಂತರವಾಗಿ ನೀಡುತ್ತಲೇ ಇರಬೇಕು ಎಂದು ತಮಗೆ ನೀಡುತ್ತಲೇ ಇರಬೇಕು ಎಂದು ಪಂಜಾಬ್‌ ಡಿಜಿಪಿ, ಎನ್‌ಐಎ, ರಾ, ಐಬಿ ಮತ್ತು ಎಂಎಚ್‌ಎ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಗ್ರರ ರವಾನೆಗೆ ಹೊಸ ಮಾರ್ಗ ಹುಡುಕಿ:

ಏತನ್ಮಧ್ಯೆ, ಭಾರತಕ್ಕೆ ಉಗ್ರರನ್ನು ನುಸುಳಿಸಲು ಹೊಸ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಕಾಶ್ಮೀರದಲ್ಲಿರುವ ಭಯೋತ್ಪಾದಕರಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಸೂಚನೆ ನೀಡಿದೆ. ಕಾಶ್ಮೀರದಲ್ಲಿನ ಗಡಿ ಮುಂಚೂಣಿ ಪ್ರದೇಶದಲ್ಲಿರುವ ಭಾರತೀಯ ಸೇನಾ ನೆಲೆಗಳ ಮಾಹಿತಿ ಮತ್ತು ನಕ್ಷೆಗಳ ತಯಾರಿಸುವ ಹೊಣೆಯನ್ನು ಜೈಷ್‌-ಎ-ಮೊಹಮ್ಮದ್‌ ಹಾಗೂ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ಉಗ್ರರ ಮಾರ್ಗದರ್ಶಕರಿಗೆ ನೀಡಲಾಗಿದೆ.

ಈ ಪ್ರಕಾರ ಗುರೆಜ್‌ ಸೆಕ್ಟರ್‌ನಲ್ಲಿರುವ ನದಿಗಳು, ಚರಂಡಿಗಳು ಹಾಗೂ ಭಾರತೀಯ ಸೇನಾ ನೆಲೆಗಳ ಜಿಪಿಎಸ್‌ ಆಧಾರಿತ ನಕ್ಷೆಗಳನ್ನು ಉಗ್ರರು ತಯಾರಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದಿಂದ ಭಾರತದ ಗಡಿಯೊಳಕ್ಕೆ ಬರುವ ಉಗ್ರರನ್ನು ಬರ ಮಾಡಿಕೊಂಡು, ಅವರಿಗೆ ಅಗತ್ಯವಿರುವ ವಸತಿ ಮತ್ತು ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಹೊಣೆಯನ್ನು ಕಾಶ್ಮೀರದಲ್ಲಿರುವ ಉಗ್ರರ ಮಾರ್ಗದರ್ಶಕರು ವಹಿಸಿಕೊಂಡಿದ್ದಾರೆ ಎಂದು ಉಗ್ರರಿಗೆ ಐಎಸ್‌ಐ ಮಾಹಿತಿ ನೀಡಿದೆ.

- ಸಾಂದರ್ಭಿಕ ಚಿತ್ರ