Asianet Suvarna News Asianet Suvarna News

ಸೆಲ್ಫಿ ತೆಗೆಯಲು ಹೋಗಿ ಕ್ವಾರಿ ಕೆರೆಗೆ ಬಿದ್ದ ವಧು, ಮದುವೆ ಮುಂದೂಡಿಕೆ!

ಸೆಲ್ಫಿ ಕ್ರೇಜ್ ಹೆಚ್ಚಾದಂತೆ ಅಪಾಯವೂ ಹೆಚ್ಚು. ಇದು ಪ್ರತಿ ಬಾರಿ ಸಾಬೀತಾಗುತ್ತಿದೆ. ಸೆಲ್ಫಿ ಕ್ರೇಜ್‌ಗೆ ಅತೀ ಹೆಚ್ಚಿನ ದುರಂತಗಳು ಸಂಭವಿಸುತ್ತಿದೆ. ಇದೀಗ ಮದುವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋದ ವಧು ಹಾಗೂ ವರ ಕಲ್ಲು ಕ್ವಾರಿಯ ನೀರಿನ ಕೆರೆ ಬಿದ್ದ ಘಟನೆ ನಡೆದಿದೆ. ಇದರ ಪರಿಣಾಮ ಮದುವೆ ಮುಂದೂಡಲಾಗಿದೆ.

Bride falls 150 meter down quarry pond while clicking selfie police and locals saves couples marriage postponed Kerala ckm
Author
First Published Dec 9, 2022, 4:51 PM IST

ಕೊಲ್ಲಂ(ಡಿ.09):  ಸೆಲ್ಫಿ ಕ್ಲಿಕ್..ಯುವ ಸಮೂಹದಲ್ಲಿ ಈ ಕ್ರೇಜ್ ಹೆಚ್ಚಾಗುತ್ತಿದೆ. ಇದರಿಂದ ಅಪಾಯವೂ ಹೆಚ್ಚಾಗುತ್ತಿದೆ. ಹೀಗೆ ಸೆಲ್ಫಿ ಕ್ರೇಜ್‌ನಿಂದ ಮದುವೆ ಹಿಂದಿನ ದಿನವೆ ಅವಘಡ ಸಂಭವಿಸಿದೆ. ಮದುವೆ ಹಿಂದಿನ ದಿನ ಬೆಳಗ್ಗೆ ವಧು ಹಾಗೂ ವರ ಸೆಲ್ಫಿ ತೆಗೆಯಲು ಹೊರಟಿದ್ದಾರೆ. ಮದುವೆ ಜಾಗದಿಂದ ಕೆಲ ದೂರಗಳಲ್ಲಿರುವ ಪ್ರಕೃತಿಯ ಸುಂದರ ತಾಣಕ್ಕೆ ತೆರಳಿ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಕಲ್ಲು ಕ್ವಾರಿಯಿಂದ ನಿರ್ಮಿತವಾದ ಕೆರೆಯ ಅಂಚಿನಲ್ಲಿ ನಿಂತು ಇಬ್ಬರು ಆಕಾಶದೆತ್ತರಕ್ಕೆ ಫೋನ್ ಹಿಡಿದು ಸೆಲ್ಫಿ ತೆಗೆದಿದ್ದಾರೆ. ಆದರೆ ವಧುವಿನ ಕಾಲು ಜಾರಿಗೆ ಪರಿಣಾಮ 150 ಮೀಟರ್ ಅಳದಲ್ಲಿದ್ದ ನೀರಿಗೆ ಬಿದ್ದಿದ್ದಾಳೆ. ಇತ್ತ ವಧುವನ್ನು ರಕ್ಷಿಸಲು ವರ ನೀರಿಗೆ ಹಾರಿದ್ದಾನೆ. ಆದರೆ ವಧುವಿನ ವೇಲ್ ಹಿಡಿದು ಆಕೆಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾನೆ. ಇತ್ತ  ವರ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದೇ ವೇಳೆ ಸ್ಥಳೀಯರು ಗಮನಿಸಿ ತಕ್ಷಣ ನೆರವಿಗೆ ಬಂದಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳೀಯರ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ವಧು ಹಾಗೂ ವರ ಇಬ್ಬರನ್ನೂ ರಕ್ಷಿಸಲಾಗಿದೆ. ಇತ್ತ ಸಣ್ಣ ಪುಟ್ಟ ಗಾಯ ಹಾಗೂ ತೀವ್ರ ಅಸ್ವಸ್ಥಗೊಂಡ ಕಾರಣ ಮದುವೆ ಮುಂದೂಡಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

25 ವರ್ಷದ ವಿನು ಕೃಷ್ಣನ್ ಹಾಗೂ 19 ವರ್ಷದ ಸಾಂದ್ರಾ ಎಸ್ ಕುಮಾರಿ ವಿವಾಹ ಇಂದು(ಡಿ.09) ನಿಗದಿಯಾಗಿತ್ತು. ಆದರೆ ನಿನ್ನೆ(ಡಿ.08) ಈ ಜೋಡಿ ಸೆಲ್ಫಿ(selfie craze) ತೆಗೆಯಲು ಕುಲ್ಲುವಥಕ್ಕಲ್ ಸಮೀಪದ ಕಲ್ಲು ಕ್ವಾರಿ ಬಳಿ ತೆರಳಿದ್ದಾರೆ. ಮದುವೆಗೂ ಮೊದಲು ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಮೂಲಕ ಮದುವೆ(Marriage) ಸಂಭ್ರಮ ಡಬಲ್ ಮಾಡಲು ಇಬ್ಬರು ನಿರ್ಧರಿಸಿದ್ದಾರೆ.  

 

ಬಿಜೆಪಿ ನಾಯಕನಿಗೆ ಸಂಕಷ್ಟ ತಂದ ಸೆಲ್ಫಿ, 6 ನಿಮಿಷದಲ್ಲಿನ ಪೋಸ್ಟ್‌‌ಗೆ 6 ವರ್ಷ ಪಕ್ಷದಿಂದ ಅಮಾನತು!

ಬೆಳಗ್ಗೆ 10 ಗಂಟೆ ಹೊತ್ತಿಗೆ ವಿನು ಕೃಷ್ಣನ್ ಹಾಗೂ ಸಾಂದ್ರಾ ಕಲ್ಲು ಕ್ವಾರಿ ಬಳಿ ತೆರಳಿ ಒಂದೆರೆಡು ಸೆಲ್ಫಿ ತೆಗೆದಿದ್ದಾರೆ. ಆದರೆ ಈ ಸೆಲ್ಫಿಗಳಲ್ಲಿ ಆಳದಲ್ಲಿರುವ ನೀರು, ತಾವು ನಿಂತಿರುವ ಸುಂದರ ತಾಣಗಳು ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ. ಈ ವೇಳೆ ಕ್ವಾರಿಯ ಅಂಚಿನಲ್ಲಿ ನಿಂತು ಮೊಬೈಲ್  ಮೇಲಕ್ಕೆ ಹಿಡಿದು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸಾಂದ್ರಾ ನಿಯಂತ್ರಣ ತಪ್ಪಿದೆ. ಇತ್ತ ಕಾಲು ಜಾರಿದೆ. ಇದರ ಪರಿಣಾಮ 150 ಮೀಟರ್ ಆಳಕ್ಕೆ(Bride Falls to quarry pond) ಬಿದ್ದಿದ್ದಾಳೆ. 

ನೀರು ತುಂಬಿದ ಕ್ವಾರಿಗೆ ಬಿದ್ದ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಸಾಂದ್ರ ರಕ್ಷಿಸಲು ವಿಷ್ಣು ಕ್ವಾರಿ ಕೆರೆಗೆ ಹಾರಿದ್ದಾನೆ. ವಿಷ್ಣು ವಧುವಿನ ವೇಲ್ ಹಾಗೂ ಉಡುಪು ಹಿಡಿದು ಮುಳುಗುವುದನ್ನು ತಪ್ಪಿಸಿದ್ದಾನೆ. ಇಷ್ಟೇ ಅಲ್ಲ ಈಜಿಕೊಂಡು ಬದಿಯಲ್ಲಿರುವ  ಕಲ್ಲನ್ನು ಹಿಡಿದು ನಿಂತಿದ್ದಾನೆ. ಬಳಿಕ ಸಹಾಯಕ್ಕಾಗಿ ಕೂಗಿದ್ದಾನೆ. ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ(Kerala Police) ಫೋನ್ ಮಾಡಿದ್ದಾರೆ. ಇತ್ತ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ರಕ್ಷಿಸಿದ್ದಾರೆ.

 

ಓಹ್ ನೋ... ಸೆಲ್ಪಿ ತೆಗೆದು ಮೈಮರೆತವನ ಸ್ಥಿತಿ ಏನಾಯ್ತು ನೋಡಿ... ವೈರಲ್ ವಿಡಿಯೋ

ಇಬ್ಬರನ್ನು ಕೊಲ್ಲಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿದೆ. ಇಂದು ನಡೆಯಬೇಕಿದ್ದ ಮದುವೆಯನ್ನು ಮುಂದೂಡಲಾಗಿದೆ. ವಿಷ್ಣು ದುಬೈನಲ್ಲಿ ಕೆಲಸ ಮಾಡುತ್ತಿದ್ದು. ಮದುವೆಗಾಗಿ ಒಂದು ವಾರ ರಜೆ ಹಾಕಿದ್ದ. ಇದೀಗ ರಜೆ ಮುಂದೂಡುವಂತೆ ಕಚೇರಿಗೆ ಮನವಿ ಮಾಡಿದ್ದಾನೆ. ಇವರ ಸೆಲ್ಫಿ ಹುಚ್ಚಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ಕೆರೆಗೆ ಹಾರಿ ವಧುವನ್ನು ರಕ್ಷಿಸಿದ ವಿಷ್ಣುಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

Follow Us:
Download App:
  • android
  • ios