ಚೆನ್ನೈ ಹೊರವಲಯದಲ್ಲಿ ನಿಷ್ಕ್ರಿಯ ಕ್ಷೀಪಣಿ ಪತ್ತೆ | ಯುವಕರು ಕ್ರಿಕೆಟ್ ಆಡುವಾಗ ಪತ್ತೆಯಾದ ಕ್ಷೀಪಣಿ | ಬಾಂಬ್ ನಿಷ್ಕ್ರಿಯ ದಳಕ್ಕೆ ಹಸ್ತಾಂತರ |

ಚೆನ್ನೈ(ಏ.10) : ತಮಿಳುನಾಡಿನ ಚೆನ್ನೈನ ಹೊರವಲಯದಲ್ಲಿ ಯುವಕರಿಗೆ ಮೈದಾನಲ್ಲಿ ಕ್ರಿಕೆಟ್ ಆಡುವಾಗ ನಿಷ್ಕ್ರಿಯ ಕ್ಷಿಪಣಿಯೊಂದು ಸಿಕ್ಕಿದ್ದೂ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಏಪ್ರಿಲ್ 7ರಂದು ಈ ಘಟನೆ ನಡೆದಿದ್ದು ಕ್ರಿಕೆಡ್ ಆಡುವಾಗ ಯುವಕರು ಸ್ಟಂಪ್ ಹಾಕಲು ಗುಂಡಿ ತೋಡುವಾಗ ಈ ಕ್ಷಿಪಣಿ ಸಿಕ್ಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಷಿಪಣಿ ಸಿಗುತ್ತಿದ್ದಂತೆಯೇ ಯುವಕರು ಅದನ್ನು ಒಡೆಯಲು ಪ್ರಯತ್ನಿಸಿದ್ದು ಸ್ಥಳಿಯರು ಅವರನ್ನು ತಡೆದಿದ್ದಾರೆ. ನಂತರ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ. ಕ್ಷಿಪಣಿ ಸ್ಫೋಟಗೊಳ್ಳುವ ಸಾಧ್ಯತೆ ಇದ್ದಿದ್ದರಿಂದ ಪೋಲಿಸರು ಬಾಂಬ್ ನಿಷ್ಕ್ರಿಯ ದಳದವರಿಗೆ ಮಾಹಿತಿ ನೀಡಿದ್ದಾರೆ. ತನಿಖೆಯ ನಂತರ ಈ ಕ್ಷಿಪಣಿಯೂ ಸುಮಾರು 8 ಕೆಜಿ ತೂಕವಿದ್ದು ಒಂದು ಅಡಿ ಅಗಲವಿದೆ.

ಕ್ಷಿಪಣಿಯನ್ನು ಹಾರಿಸಿದಾಗ ಅದು ಸ್ಫೋಟಗೊಳ್ಳದೇ ಹಾಗೆಯೇ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಹಾಗಾಗಿ ಈ ಕ್ಷಿಪಣಿಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈ ಕ್ಷಿಪಣಿಯನ್ನು ತಜ್ಞರ ತಂಡಕ್ಕೆ ಹಸ್ತಾಂತರಿಸಲಾಗಿದ್ದು ನಂತರ ಧ್ವಂಸ ಮಾಡಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.