Asianet Suvarna News Asianet Suvarna News

ಬಾಡಿ ಮಸಾಜರ್‌ ಸೆಕ್ಸ್‌ ಟಾಯ್‌ ಅಲ್ಲ, ಆಮದಿಗೆ ನಿಷೇಧ ವಿಧಿಸೋದಿಲ್ಲ: ಬಾಂಬೆ ಹೈಕೋರ್ಟ್‌!


ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಕಿಶೋರ ಸಂತ್‌ ಅವರ ವಿಭಾಗೀಯ ಪೀಠವು ಬಾಡಿ ಮಸಾಜರ್‌ಗಳನ್ನು ಹೊಂದಿರುವ ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಸ್ಟಮ್ಸ್ ಇಲಾಖೆ ಹೊರಡಿಸಿದ್ದ ಆದೇಶವನ್ನು ಬುಧವಾರ ರದ್ದುಗೊಳಿಸಿದೆ.
 

Body massager Not adult sex toy and no prohibited for import say Bombay High Court san
Author
First Published Mar 21, 2024, 5:54 PM IST

ಮುಂಬೈ (ಮಾ.21): ಬಾಡಿ ಮಸಾಜರ್‌ಗಳನ್ನು  ಅಡಲ್ಟ್‌ ಸೆಕ್ಸ್‌ ಟಾಯ್‌ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಇದನ್ನು ಆಮದು ಮಾಡಲು ನಿಷೇಧಿಸಲಾದ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಕಿಶೋರ ಸಂತ ಅವರ ವಿಭಾಗೀಯ ಪೀಠವು ಬಾಡಿ ಮಸಾಜರ್‌ಗಳನ್ನು ಹೊಂದಿರುವ ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಸ್ಟಮ್ಸ್ ಇಲಾಖೆ ಹೊರಡಿಸಿದ್ದ ಆದೇಶವನ್ನು ಬುಧವಾರ ರದ್ದುಗೊಳಿಸಿದೆ. ಬಾಡಿ ಮಸಾಜರ್‌ಗಳನ್ನು ಅಡಲ್ಟ್‌ ಸೆಕ್ಸ್‌ ಟಾಯ್‌ ಆಗಿ ಬಳಸಬಹುದು. ಇಂಥ ವಸ್ತುಗಳನ್ನು ಆಮದು ಮಾಡಿಕೊಳ್ಳಲು ನಿಷೇಧವಿದೆ ಎಂದು ಕಸ್ಟಮ್ಸ್‌ ಆಯುಕ್ತರು ವಿದೇಶದಿಂದ ಬಂದ ಬಾಡಿ ಮಸಾಜರ್‌ಗಳ ಸರಕನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಬಾಡಿ ಮಸಾಜರ್‌ಗಳನ್ನು ವಯಸ್ಕರ ಸೆಕ್ಸ್‌ ಟಾಯ್‌ ಆಗು ಬಳಸಬಹುದು ಎನ್ನುವುದು ಕಸ್ಟಮ್ಸ್‌ ಕಮೀಷನರ್‌ ಅವರ ಕಲ್ಪನೆ ಮಾತ್ರ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅದರೊಂದಿಗೆ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯು ಮೇ 2023 ರಲ್ಲಿ ಅಂಗೀಕರಿಸಿದ ಆದೇಶವನ್ನು ಪ್ರಶ್ನಿಸಿ ಕಸ್ಟಮ್ಸ್ ಆಯುಕ್ತರು ಸಲ್ಲಿಸಿದ ಅರ್ಜಿಯನ್ನು ಅದು ವಜಾಗೊಳಿಸಿತು, ಈ ಮೂಲಕ ಬಾಡಿ ಮಸಾಜರ್‌ಗಳನ್ನು ಹೊಂದಿರುವ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಸ್ಟಮ್ ಇಲಾಖೆಯ ಆದೇಶವನ್ನು ರದ್ದುಗೊಳಿಸಿದೆ.

ಬಾಡಿ ಮಸಾಜರ್‌ಗಳು ಅಡಲ್ಟ್‌ ಸೆಕ್ಸ್‌ ಟಾಯ್‌ ವಿಭಾಗದಲ್ಲಿ ಬರುತ್ತದೆ. ಇದನ್ನು ಜನವರಿ 1964 ರಲ್ಲಿ ಹೊರಡಿಸಿದ ಕಸ್ಟಮ್ಸ್ ಅಧಿಸೂಚನೆಯ ಪ್ರಕಾರ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಹಾಗಾಉ ಬಾಡಿ ಮಸಾಜರ್‌ಗಳ ಸರಕಿನ ಮೇಲಿರುವ ನಿಷೇಧವನ್ನು ತೆರವು ಮಾಡಲು ಸಾಧ್ಯವಿಲ್ಲ ಎಂದು ಕಸ್ಟಮ್ಸ್‌ ಕಮೀಷನರ್‌ 2022ರ ಏಪ್ರಿಲ್‌ನಲ್ಲಿ ಹೇಳಿದ್ದರು.

ಕಸ್ಟಮ್ಸ್‌ ಕಮೀಷನರ್‌ ಹೇಳಿರುವ ಮಾತುಗಳು ವಿಚಿತ್ರವಾಗಿದೆ ಎಂದಿದ್ದಲ್ಲದೆ, ಅವರು ತುಂಬಾ ದೂರ ದೃಷ್ಟಿಯಲ್ಲಿ ಯೋಚನೆ ಮಾಡಿದ್ದಾರೆ. ಬಾಡಿ ಮಸಾಜರ್‌ಗಳನ್ನು ಮಸಾಜ್‌ ಮಾಡೋದಕ್ಕಿಂತ ಬೇರೆಯದಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ಅವರ ಗ್ರಹಿಕೆ ಮಾತ್ರ ಎಂದು ಕೋರ್ಟ್‌ ಹೇಳಿದೆ. "ಇದು ಸ್ಪಷ್ಟವಾಗಿ ಆಯುಕ್ತರ ಕಲ್ಪನೆಯ ಕಲ್ಪನೆ ಮತ್ತು/ಅಥವಾ ಸರಕುಗಳು ನಿಷೇಧಿತ ವಸ್ತುಗಳು ಎಂಬುದು ಅವರ ವೈಯಕ್ತಿಕ ಗ್ರಹಿಕೆಯಾಗಿದೆ" ಎಂದು ಹೈಕೋರ್ಟ್ ಹೇಳಿದೆ.

ಸೆಕ್ಸ್ ಟಾಯ್ಸ್ ಬಳಸೋದು ತಪ್ಪಲ್ಲ.. ತಪ್ಪಾಗಿ ಬಳಸಿದರೆ ಏನೇನೋ ಆಗೋದು ಗ್ಯಾರಂಟಿ!

ಬಾಡಿ ಮಸಾಜರ್‌ಗಳು ದೇಶೀಯ ಮಾರುಕಟ್ಟೆಯಲ್ಲೂ ವ್ಯಾಪಾರ ಮಾಡುತ್ತಾರೆ. ಅವುಗಳನ್ನು ನಿಷೇಧಿತ ವಸ್ತುಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಕಮಿಷನರ್ ವಿವೇಕಯುತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ. ಕಸ್ಟಮ್ಸ್‌ ಕಮೀಷನರ್‌ ನಿರ್ಧಾರದಿಂದ ಹಿನ್ನಡೆ ಕಂಡಿದ್ದ ಬಾಡಿ ಮಸಾಜರ್‌ ಸರಕಿನ ಮಾಲೀಕರು ಕೋರ್ಟ್‌ ಮೊರೆ ಹೋಗಿದ್ದರು.

ಪತಿ ಸಾವಿನ ನಂತ್ರ ಆನ್ಲೈನ್‌ನಲ್ಲಿ ಸೆಕ್ಸ್ ಟಾಯ್ಸ್ ಖರೀದಿಸಿದ ಮಹಿಳೆ, ಏನಿದೆ ತಪ್ಪು?

ಕಮಿಷನರ್ ಆದೇಶವನ್ನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಪೀಠವು ಅದನ್ನು ತೀವ್ರವಾಗಿ ಟೀಕಿಸಿತು ಮತ್ತು ಬಾಡಿ ಮಸಾಜರ್‌ಅನ್ನು ಅನ್ನು ವಯಸ್ಕರ ಲೈಂಗಿಕ ಆಟಿಕೆ ಎಂದು ವರ್ಗೀಕರಿಸಲು ಆಯುಕ್ತರು ತೆಗೆದುಕೊಂಡ ದೃಷ್ಟಿಕೋನವು ಸಂಪೂರ್ಣವಾಗಿ ಅಧಿಕಾರಿಯ ಕಲ್ಪನೆಯಾಗಿದೆ ಎಂದು ತಿಳಿಸಿದೆ. ಯಾವುದೇ ಸರಕುಗಳನ್ನು ಪರ್ಯಾಯ ಬಳಕೆಗೆ ಒಳಪಡಿಸಬಹುದು ಎಂಬ ಕಾರಣಕ್ಕಾಗಿ ಅವುಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದೆ.

Follow Us:
Download App:
  • android
  • ios