ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಅಲೆ, ನಗ್ರೋಟಾ ಉಪಚುನಾವಣೆಯಲ್ಲಿ ಬಿಜೆಪಿ ದೇವಯಾನಿಗೆ ಗೆಲುವು , ಬಿಹಾರದಲ್ಲಿ ಮಾತ್ರವಲ್ಲ ಕಣಿವೆ ರಾಜ್ಯದಲ್ಲೂ ಬಿಜೆಪಿ ಮೋಡಿ ಮಾಡಿದೆ. ನಗ್ರೋಟಾ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಸಂಭ್ರಮಾಚರಿಸುತ್ತಿದೆ.

ಶ್ರೀನಗರ (ನ.14) ಬಿಹಾರ ವಿಧಾನಸಭೆ ಚುನಾವಣೆ ಜೊತೆ ಹಲವು ಕ್ಷೇತ್ರಗಳಲ್ಲಿ ಉಪ ಚುನಾವಣೆ ಕೂಡ ನಡೆದಿತ್ತು. ಇದೀಗ ಬಿಹಾರದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನತ್ತ ದಾಪುಗಾಲಿಡುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 199 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ವಿಶೇಷ ಅಂದರೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಬಿಜೆಪಿ ಅಲೆ ಎದ್ದಿದೆ. ನಾಗ್ರೋಟ ಉಪ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಬಿಜೆಪಿ ಸಂಭ್ರಾಚರಣೆಯಲ್ಲಿ ತೊಡಗಿದೆ. ಬಿಜೆಪಿ ಅಭ್ಯರ್ಥಿ ದೇವಯಾನಿ ರಾಣಾ 24,647 ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದಾಗಿ ಘೋಷಿಸಿದ್ದಾರೆ. ಚುನವಣಾ ಆಯೋಗದ ವರದಿ ಪ್ರಕಾರ ದೇವಯಾನಿ ರಾಣಾ ಭಾರಿ ಮುನ್ನಡೆ ಸಾಧಿಸಿದ್ದಾರೆ.

ಭಾವುಕರಾದ ದೇವಯಾನಿ ರಾಣಾ

ನಗ್ರೋಟ ವಿಧಾನಸಭ ಕ್ಷೇತ್ರದಲ್ಲಿ ದೇವಯಾನಿ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸ್ವತಃ ದೇವಯಾನಿ ತಮ್ಮ ಗೆಲುವು ಸಂಭ್ರಮಿಸಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ. ಆದರೆ ಗೆಲುವಿನ ದಡ ಸೇರುತ್ತಿದ್ದಂತೆ ದೇವಯಾನಿ ರಾಣಾ ಬಾವುಕರಾಗಿದ್ದಾರೆ. ಕಾರಣ ನಾಗ್ರೋಟ ವಿಧಾನಸಭಾ ಕ್ಷೇತ್ರದಲ್ಲಿ ದೇವಯಾನಿ ತಂದೆ ದೇವೇಂದ್ರ ಸಿಂಗ್ ರಾಣಾ ಶಾಸಕರಾಗಿದ್ದರು. ಕಳೆದ ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ನಗ್ರೋಟ ಕ್ಷೇತ್ರದಲ್ಲಿ ದೇವೇಂದ್ರ ಸಿಂಗ್ ರಾಣಾ ಗೆಲುವು ಸಾಧಿಸಿ ಶಾಸಕರಾಗಿದ್ದರು. ಆದರೆ ಅಕಾಲಿಕ ಮರಣದಿಂದ ಶಾಸಕ ಸ್ಥಾನ ತೆರವಾಗಿತ್ತು. ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾದಾಗ ಬಿಪಿಪಿ ಪುತ್ರಿ ದೇವಯಾನಿ ರಾಣಾಗೆ ಟಿಕೆಟ್ ನೀಡಿದ್ದರು.

ಒಂದು ವರ್ಷದ ಹಿಂದೆ ಬಿಜೆಪಿ ಸೇರಿರುವ ದೇವಯಾನಿ

ಕೇವಲ ಒಂದು ವರ್ಷದ ಹಿಂದೆ ಸಕ್ರೀಯ ರಾಜಕಾರಣಕ್ಕೆ ದೇವಯಾನಿ ರಾಣ ಎಂಟ್ರಿಕೊಟ್ಟಿದ್ದರು. ಭಾರತೀಯ ಜನತಾ ಪಾರ್ಟಿಯ ಯು ಮೊರ್ಚಾ ಉಪಾಧ್ಯಕ್ಷ ಜವಾಬ್ದಾರಿಯನ್ನು ನೀಡಲಾಗಿತ್ತು. ಇದೀಗ ಜಮ್ಮು ಕಾಶ್ಮೀರದಲ್ಲಿ ನಾಗ್ರೋಟ ಕ್ಷೇತ್ರ ಉಳಿಸಿಕೊಳ್ಳವು ಬಿಜೆಪಿ ಬಹುತೇಕ ಯಶಸ್ವಿಯಾಗಿದೆ.

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ

ಬಿಹಾರದ ವಿಧಾನಸಭೆ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ಎನ್‌ಡಿಎ ಸಂಭ್ರಮ ಡಬಲ್ ಮಾಡುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈಗಾಗಲೇ 199 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂದನ್ 38 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಇತರರು 6 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಪ್ರಶಾಂತ್ ಕಿಶೋರ್ ಅವರ ಜನ ಸೂರಾಜ್ ಪಾರ್ಟಿ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿಲ್ಲ.