ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೀಗ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ಇದೀಗ ಕಾಂಗ್ರೆಸ್ ಭರ್ಜರಿ ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇದೇ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ವಿದೇಶಿ ಪ್ರೀತಿಯನ್ನು ಪ್ರಶ್ನಿಸಿದೆ. ಪರಿಸರ ವಿಭಾಗದಲ್ಲಿ ಕಾಂಗ್ರೆಸ್ ನ್ಯೂಯಾರ್ಕ್ ಹಾಗೂ ಥಾಯ್ಲೆಂಡ್ ಫೋಟೋ ಬಳಸಿ ಜನರನ್ನು ಯಾಮಾರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ(ಏ.05) ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇತ್ತ ನಾಯಕರು ರೋಡ್ ಶೋ, ರ್ಯಾಲಿ, ಸಮಾವೇಶಗಳ ಮೂಲಕ ಮತಭೇಟೆ ಆರಂಭಿಸಿದ್ದಾರೆ. ಮತ್ತೊಂದೆಡೆ ಪಕ್ಷಗಳು ಭರ್ಜರಿ ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದೆ. ಇಂದು ಕಾಂಗ್ರೆಸ್ 25 ಗ್ಯಾರೆಂಟಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬೆಳೆಗಳಿಗೆ ಬೆಂಬಲ ಬೆಲೆ, ಸಾಲ ಮನ್ನ, ಉದ್ಯೋಗ ಖಾತ್ರಿ, ಜಾತಿ ಗಣತಿ, ಮೀಸಲಾತಿ ಹೆಚ್ಚಳ ಸೇರಿದಂತೆ ಹಲವು ಭರವಸೆಯನ್ನು ನೀಡಿದೆ. ಮಹಿಳಾ ಸಬಲೀಕರಣ, ಪರಿಸರ, ವಿಜ್ಞಾನ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪೈಕಿ ಪರಿಸರ ವಿಭಾಗದಲ್ಲಿ ಕಾಂಗ್ರೆಸ್ ನ್ಯೂಯಾರ್ಕ್ ಹಾಗೂ ಥಾಯ್ಲೆಂಡ್ ಫೋಟೋ ಬಳಸಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿಯ ನೆಚ್ಚಿನ ವಿದೇಶಿ ತಾಣಗಳಾದ ಥಾಯ್ಲೆಂಡ್ ಹಾಗೂ ನ್ಯೂಯಾರ್ಕ‌ನ ಫೋಟೋವನ್ನು ಬಳಸಿರುವ ಕಾಂಗ್ರೆಸ್ ಜನರನ್ನು ಯಾಮಾರಿಸುತ್ತಿದೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಹೇಳಿದ್ದಾರೆ. ನೀರಿನ ಸದ್ಬಳಕೆ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಇಲ್ಲಿ ಬಳಸಿರುವ ಒಂದು ಫೋಟೋ ನ್ಯೂಯಾರ್ಕ್‌ನ ಬಫಾಲೋ ನದಿಯ ಚಿತ್ರವಾಗಿದೆ ಎಂದು ತ್ರವೇದಿ ಹೇಳಿದ್ದಾರೆ

ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಪಕ್ಷದ ವಿದೇಶಿ ಪ್ರೀತಿಯನ್ನು ಬಿಜೆಪಿ ಪ್ರಶ್ನಿಸಿದೆ. ಇದೇ ವೇಳೆ ಕಾಂಗ್ರೆಸ್‌ನಿಂದಲೇ ಈ ದೇಶದಲ್ಲಿ ಎಲ್ಲವು ಸಾಧ್ಯವಾಗಿದೆ ಅನ್ನೋ ನಾಯಕರ ಮಾತನ್ನು ಬಿಜೆಪಿ ಖಂಡಿಸಿದೆ.

ಸಾಲಮನ್ನಾ, ಹೆಣ್ಮಕ್ಕಳಿಗೆ ದುಡ್ಡು, ಜಾತಿ ಗಣತಿ, 25 ಲಕ್ಷ ಆರೋಗ್ಯ ವಿಮೆ..ಕಾಂಗ್ರೆಸ್‌ ಪ್ರಣಾಳಿಕೆಯ 10 ಪ್ರಮುಖ ಅಂಶಗಳು!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನ್ನು ಉಲ್ಲೇಖಿಸಿದ ಸುಧಾಂಶು ತ್ರಿವೇದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಒಂದು ಸೂಜಿಯನ್ನು ಭಾರತ ಉತ್ಪಾದನೆ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಅಧಿಕಾರಿಕ್ಕೆ ಬಂದು ಬಳಿಕ ಹಂತ ಹಂತವಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದೆ ಎಂದು ಖರ್ಗೆ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಸುಧಾಂಶು ತ್ರಿವೇದಿ, ಕಾಂಗ್ರೆಸ್ ಜನರಿಗೆ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲೇ ಈ ದೇಶದಲ್ಲಿ ಉತ್ಪಾದನೆ, ಸಾಧನೆ ಜಗತ್ತಿಗೆ ಪಸರಿಸಿತ್ತು. ಸಿವಿ ರಾಮನ್‌ಗೆ ನೊಬೆಲ್ ಪ್ರಶಸ್ತಿ ಲಭಿಸಿದ್ದು 1930ರಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಗೊಂಡಿದ್ದು 1909ರಲ್ಲಿ. ಆದರೆ ಕಾಂಗ್ರೆಸ್ ಈಗಲೂ ಈ ದೇಶದಲ್ಲಿನ ಎಲ್ಲಾ ಮಹತ್ತರ ಮೈಲಿಗಲ್ಲು, ಸಾಧನೆ, ಅಭಿವೃದ್ಧಿ ಕಾಂಗ್ರೆಸ್‌ನಿಂದಲೇ ಆಗಿದೆ ಎಂಬ ಭ್ರಮೆಯಲ್ಲಿದೆ ಎಂದು ತಿರುಗೇಟು ನೀಡಿದ್ದಾರೆ.

Scroll to load tweet…

ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಘೋಷಣೆ ಮಾಡಿದೆ. ಕನಿಷ್ಛ ಕೂಲಿ ಏರಿಕೆ, ಬಡ ಮಹಿಳೆಯರಿಗೆ 1 ಲಕ್ಷ ರೂಪಾಯಿ ನೆರವಿನ ಹಸ್ತ, ದೇಶದಲ್ಲಿ 25 ಲಕ್ಷ ರೂಪಾಯಿ ವರೆಗಿನ ಉಚಿತ ಚಿಕಿತ್ಸೆ, ಕುಟುಂಬ ಹಿರಿಯ ಮಹಿಳೆರಿಗೆ 1 ಲಕ್ಷ ರೂಪಾಯಿ ವರೆಗೆ ಆರ್ಥಿಕ ನೆರವು ಸೇರಿದಂತೆ 25ಕ್ಕೂ ಹೆಚ್ಚು ಗ್ಯಾರೆಂಟಿಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ನಷ್ಟದಲ್ಲಿರೋ ಕಂಪನಿಗಳಿಂದ ಬಿಜೆಪಿಗೆ ಕೋಟ್ಯಂತರ ಹಣ: ಸಚಿವ ಗುಂಡೂರಾವ್‌