* ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜೀವ್‌ ಪ್ರತಾಪ್‌ ರೂಡಿ ಈಗ ಪೈಲಟ್* ರೂಡಿ ಅವರು ಚಾಲನೆ ಮಾಡಿದ ವಿಮಾನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಪ್ರಯಾಣಿಕ* ರೂಡಿ ವೃತ್ತಿಯಲ್ಲಿ ಪೈಲಟ್‌ ಆಗಿದ್ದು, ಸಂಸದ ಹುದ್ದೆ ಜತೆಗೆ ಇಂಡಿಗೋದಲ್ಲಿ ಪೈಲಟ್‌ ಆಗಿಯೂ ಕೆಲಸ

ನವದೆಹಲಿ(ಜು.15): ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜೀವ್‌ ಪ್ರತಾಪ್‌ ರೂಡಿ ಅವರು ಚಾಲನೆ ಮಾಡಿದ ವಿಮಾನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು ದೆಹಲಿಯಿಂದ ಚೆನ್ನೈ ತಲುಪಿದ ವಿಶೇಷ ಪ್ರಸಂಗ ನಡೆಯಿತು.

‘ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ನಾನು ಹಾಗೂ ರೂಡಿ ಒಟ್ಟಿಗೇ ಭಾಗಿ ಆಗಿದ್ದೆವು. ಸಭೆ ಮುಗಿಸಿಕೊಂಡು ದೆಹಲಿಯಿಂದ ಚೆನ್ನೈಗೆ ಹೋಗಲು ನಾನು ಇಂಡಿಗೋ ವಿಮಾನವನ್ನು ಹತ್ತಿದೆ. ಈ ವೇಳೆ ಈ ವಿಮಾನದ ಮೊದಲ ಸೀಟಲ್ಲಿ ಕ್ಯಾಪ್ಟನ್‌ ಧಿರಿಸಿನಲ್ಲಿ ಕುಳಿತ್ತಿದ್ದ ಮಾಸ್ಕ್‌ಧಾರಿ ವ್ಯಕ್ತಿ, ನನ್ನನ್ನು ಉದ್ದೇಶಿಸಿ ‘ನೀವು ಸಹ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಾ?’ ಎಂದು ಕೇಳಿದರು. ಈ ವೇಳೆ ಹೀಗೇಕೆ ಕೇಳುತ್ತಿದ್ದಾರೆ ನನಗೆ ಆಶ್ಚರ್ಯವಾಯಿತು. ಕೊನೆಗೆ ಅವರು ರೂಡಿ ಎಂದು ಗೊತ್ತಾಯಿತು’ ಎಂದು ಆ ಕ್ಷಣವನ್ನು ಮೆಲುಕು ಹಾಕಿದರು.

Scroll to load tweet…

ರೂಡಿ ವೃತ್ತಿಯಲ್ಲಿ ಪೈಲಟ್‌ ಆಗಿದ್ದು, ಸಂಸದ ಹುದ್ದೆ ಜತೆಗೆ ಇಂಡಿಗೋದಲ್ಲಿ ಪೈಲಟ್‌ ಆಗಿಯೂ ಕೆಲಸ ಮಾಡುತ್ತಾರೆ.