ನವದೆಹಲಿ( ಮಾ.  06)  'ಬೆಲೆ ಏರಿಕೆ  ವಿರುದ್ಧ ಮಾತನಾಡಿ' ಹೆಸರಿನಲ್ಲಿ  ಕಾಂಗ್ರೆಸ್ ಅಭಿಯಾನ ಆರಂಭ ಮಾಡಿದೆ.  ಕಾಂಗ್ರೆಸ್ ನಾಯಕ ರಾಹುಲ್  ಗಾಂಧಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.

ತನ್ನ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಈ ಬಗ್ಗೆ ಹೇಳಿರುವ ಕಾಂಗ್ರೆಸ್  ಎಲ್ಲರೂ ಭಾಗವಹಿಸಿ ಸರ್ಕಾರಕ್ಕೆ ಆಗ್ರಹ ಮಾಡಬೇಕು ಎಂದು  ಕಾಂಗ್ರೆಸ್ ಕೇಳಿಕೊಂಡಿದೆ.

ಬಿಜೆಪಿ ಅಂದರೆ ಬರ್ಡನ್ ಜನತಾ ಪಾರ್ಟಿ ಎಂದಿರುವ ಕಾಂಗ್ರೆಸ್ ಇವರ ಲೂಟಿ ತಡೆಯದಿದ್ದರೆ ದೇಶ ದಿವಾಳಿಯಾಗುತ್ತದೆ ಎಂದು ಆತಂಕ ಹೊರಹಾಕಿದೆ. #SpeakUpAgainstPriceRise ಹ್ಯಾಷ್ ಟ್ಯಾಗ್  ಮೂಲಕ ಆಕ್ರೋಶ ಹೊರ ಹಾಕಿ ಎಂದು  ಕೇಳಿದೆ.

ಪಶ್ಚಿಮ ಬಂಗಾಳ ಚುನಾವಣಾ ರಣಕಣ ಹೇಗಿದೆ? 

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, ಕೇಂದ್ರ ಸರ್ಕಾರ  ಜನರನ್ನು ಬೆಲೆ ಏರಿಕೆ ಕೂಪಕ್ಕೆ ತಳ್ಳುತ್ತಿದೆ ಎಂದು  ಆರೋಪಿಸಿದ್ದಾರೆ.  ಕೇಂದ್ರ ಸರ್ಕಾರದ ಕುಟಿಲ ನೀತಿಗಳ ವಿರುದ್ಧ ದನಿ ಎತ್ತಬೇಕು ಎಂದು ಕೇಳಿಕೊಂಡಿದ್ದಾರೆ.

ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಸಂಬಂಧ ವಿಡಿಯೋ ಒಂದನ್ನು ಸಹ ರಾಹುಲ್ ಹಂಚಿಕೊಂಡಿದ್ದಾರೆ.  ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸಹ ಈ ವಿಡಿಯೋ ಹಂಚಿಕೊಂಡಿದ್ದಾರೆ.  ಗ್ಯಾಸ್ ಮತ್ತು ಪೆಟ್ರೋಲಿಯಂ ದರದ ಬಗ್ಗೆ ದನಿ ಎತ್ತಿ  ಎಂದು ಮನವಿ ಮಾಡಿಕೊಂಡಿದ್ದಾರೆ .