* ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ* 2018ರಲ್ಲಿ ಕೇಳಿಬಂದಿದ್ದ ಮೀಟೂ ಆರೋಪ ಇದೀಗ ಮತ್ತೊಮ್ಮೆ ಸದ್ದು * ಮೀಟೂ ಆರೋಪಕ್ಕೆ ತುತ್ತಾದ ನಾಯಕ ಈಗ ಪಂಜಾಬ್‌ ಸಿಎಂ: ಬಿಜೆಪಿ ಕಿಡಿ

ಚಂಡೀಗಢ(ಸೆ.20): ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಹೊರಹೊಮ್ಮಿದ ಬೆನ್ನಲ್ಲೇ, ಅವರ ವಿರುದ್ಧ 2018ರಲ್ಲಿ ಕೇಳಿಬಂದಿದ್ದ ಮೀಟೂ ಆರೋಪ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ.

ಚಮ್‌ಕೌರ್‌ ಸಾಹಿಬ್‌ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಚನ್ನಿ ಅವರು 2018ರಲ್ಲಿ ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರಿಗೆ ಅನುಚಿತ ಸಂದೇಶಗಳನ್ನು ರವಾನಿಸಿದ್ದರು ಎಂದು ಆರೋ​ಪಿ​ಸ​ಲಾ​ಗಿ​ತ್ತು. ಈ ವಿಚಾರವನ್ನು ಮಹಿಳಾ ಅಧಿಕಾರಿಯ ಸಮ್ಮುಖದಲ್ಲೇ ಇತ್ಯರ್ಥಗೊಳಿಸಲಾಗಿತ್ತು. ಅಲ್ಲದೆ ತಮ್ಮ ಈ ಕೃತ್ಯಕ್ಕಾಗಿ ಚನ್ನಿ ಅವರು ಮಹಿಳಾ ಅಧಿಕಾರಿಗೆ ಕ್ಷಮಾಪಣೆಯನ್ನೂ ಕೋರಿದ್ದರು.

ಆದರೆ ಇದೇ ವಿಚಾರವನ್ನು ಈಗ ಮುಂದಿಟ್ಟುಕೊಂಡಿರುವ ಬಿಜೆಪಿ, ಪಂಜಾಬ್‌ ಮುಖ್ಯಮಂತ್ರಿ ಆಗಿ ಕಾಂಗ್ರೆಸ್‌ ನೇಮಕ ಮಾಡಿರುವ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಪ್ರಶ್ನಾತೀತ ಮತ್ತು ವಿವಾದಕ್ಕೀಡಾಗದ ನಾಯಕರೇನಲ್ಲ. ಅವರ ವಿರುದ್ಧ ಮೀಟೂ ಆರೋಪವಿದೆ ಎಂದು ಕಿಡಿ​ಕಾ​ರಿ​ದೆ.