Asianet Suvarna News Asianet Suvarna News

ಪ್ರೀತಿ ನಿರಾಕರಿಸಿದ ಕಾಲೇಜು ಹುಡುಗಿ ತಲೆಗೆ ಗುಂಡಿಕ್ಕಿ ಹತ್ಯೆ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತನ್ನ Love ತಿರಸ್ಕರಿಸಿದ 17 ವರ್ಷದ College Girlನ್ನು ದುಷ್ಕರ್ಮಿಯೋರ್ವ ಹಾಡಹಗಲೇ  ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ Bihar ರಾಜಧಾನಿ Patnaದಲ್ಲಿ ನಡೆದಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ. 

Bihar A college girl who rejected love proposal of Jilted lover was shot dead broad daylight in patna The horrific scene was caught on CCTV akb
Author
First Published Dec 13, 2023, 11:46 AM IST

ಪಾಟ್ನಾ: ತನ್ನ ಪ್ರೀತಿ ತಿರಸ್ಕರಿಸಿದ 17 ವರ್ಷದ ಕಾಲೇಜು ಯುವತಿಯನ್ನು ದುಷ್ಕರ್ಮಿಯೋರ್ವ ಹಾಡಹಗಲೇ  ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ.  17 ವರ್ಷದ ಅನಾಮಿಕ ಸಾವಿಗೀಡಾದ ವಿದ್ಯಾರ್ಥಿನಿ, ಕಾಲೇಜು ಮಗಿಸಿ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದ ವೇಳೆ ಆಕೆಯನ್ನು ಬೆನ್ನಟ್ಟಿದ ದುಷ್ಕರ್ಮಿ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತನ್ನ ಬಳಿ ಇದ್ದ  ಪಾಯಿಂಟ್ ಬ್ಲಾಂಕ್ ಪಿಸ್ತೂಲ್‌ನಿಂದ ತಲೆಗೆ ಗುಂಡಿಕ್ಕಿದ್ದಾನೆ. ಪರಿಣಾಮ ಯುವತಿ ಕುಸಿದು ಬಿದ್ದು ಅಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ನಡೆದ ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರಾದರೂ ಅಲ್ಲಿ ವೈದ್ಯರು ಆಕೆ ಕರೆತರುತ್ತಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಈ ಹತ್ಯೆ ಪ್ರಕರಣದ ಈ ಸಂಪೂರ್ಣ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

ಈ ಆಘಾತಕಾರಿ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ಘಟನೆ ಬಗ್ಗೆ ಆ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಟ್ನಾದ ಮಸೌರ್ಹಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು,  ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು  ದುಷ್ಕರ್ಮಿ ಹಿಂಬಾಲಿಸುತ್ತ ಬಂದಿದ್ದಾನೆ. ಇದನ್ನು ಗಮನಿಸಿದ ಯುವತಿ ಕೂಡಲೇ ಹಿಂದಿರುಗಿ ಓಡಲು ಯತ್ನಿಸಿದ್ದಾಳೆ. ಅಷ್ಟರಲ್ಲೇ ಯುವಕ ಆಕೆಯನ್ನು ಬೆನ್ನಟ್ಟಿದ್ದಾನೆ. ಗಾಬರಿಯಿಂದ ಓಡುವ ರಭಸದಲ್ಲಿ ಹುಡುಗಿ ಕೆಳಗೆ ಬಿದ್ದಿದ್ದು,  ಇದೇ ವೇಳೆ ಆರೋಪಿ ಆಕೆಯ ತಲೆಗೆ ಗುಂಡಿಕ್ಕಿದ್ದಾನೆ.  ನಂತರ ಅಲ್ಲಿಂದ ಆತ ಪರಾರಿಯಾಗಿದ್ದಾನೆ. 

Davanagere: ಕಾಲೇಜು ಹುಡ್ಗೀರನ್ನ ಪೀಡಿಸುತ್ತಿದ್ದ ರೋಡ್‌ ರೋಮಿಯೋಗೆ ಚಪ್ಪಲಿ ಏಟು

ಈ ಆರೋಪಿ ಯುವಕ ಹಾಗೂ 12ನೇ ತರಗತಿಯಲ್ಲಿ ಓದುತ್ತಿದ್ದ ಈ ಹುಡುಗಿ ಇಬ್ಬರೂ ಕೋಚಿಂಗ್ ಕ್ಲಾಸ್‌ನಲ್ಲಿ ಸಹಪಾಠಿಗಳಾಗಿದ್ದು, ಯುವತಿಯೊಂದಿಗೆ ಪ್ರೀತಿ ಸಂಬಂಧ ಬೆಳೆಸಿಕೊಳ್ಳಲು ಯುವಕ ಬಯಸಿದ್ದ. ಆದರೆ ಆತನ ಈ ಆಫರ್‌ನ್ನು ಯುವತಿ ಖಡಾಖಂಡಿತವಾಗಿ ನಿರಾಕರಿಸಿದ್ದಳು. ಇದಾದ ನಂತರ ಆತ ನಿರಂತರವಾಗಿ ಆಕೆಯನ್ನು ಹಿಂಬಾಲಿಸಲು ಶುರು ಮಾಡಿದ್ದ. 

ಮೃತ ಯುವತಿ ಅನಾಮಿಕ ದ್ವಿತೀಯ ಪಿಯುಸಿ ಓದುತ್ತಿದ್ದು, ತಾನು ವಾಸವಿದ್ದ ಹಳ್ಳಿಯಿಂದ ದಿನವೂ ಕೋಚಿಂಗ್ ಕ್ಲಾಸ್ ಇದ್ದ ಮಸೌರ್ಬಿ ಪ್ರದೇಶಕ್ಕೆ ಆಗಮಿಸುತ್ತಿದ್ದರು.  ಆದರೆ ತನ್ನ ಪ್ರೀತಿ ತಿರಸ್ಕರಿಸಿದ್ದಕ್ಕೆ ಸಿಟ್ಟುಗೊಂಡಿದ್ದ ಯುವಕ ಆಕೆಯ ಹತ್ಯೆಗೆ ಮೊದಲೇ ಪ್ಲಾನ್ ಮಾಡಿ ಪಿಸ್ತೂಲ್ ತೆಗೆದುಕೊಂಡು ಬಂದಿದ್ದು, ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಮೃತ ಅನಾಮಿಕಾ ನದ್ವಾನ್‌ ಛಪುರ್‌ ಕಜಿಚಕ್‌ ಪ್ರದೇಶದ ನಿವಾಸಿ ಕಮಲೇಶ್ ಕುಮಾರ್ ಅವರ ಪುತ್ರಿಯಾಗಿದ್ದಾರೆ. 

ಟಾಯ್ಲೆಟ್‌ನಲ್ಲಿ ಹಿಂದೂ ಹುಡ್ಗೀರ ವೀಡಿಯೋ ಸರೆಹಿಡಿದ ಆರೋಪಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಜಾಮೀನು ಮಂಜೂರು

ಘಟನಾ ಸ್ಥಳದಿಂದ ಪೊಲೀಸರು ಬುಲೆಟ್ ಸೆಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 
 

 

 

Follow Us:
Download App:
  • android
  • ios