* ವರದಕ್ಷಿಣೆಯ ವಿಚಿತ್ರ ಪ್ರಕರಣ* ವರದಕ್ಷಿಣೆ ಬೆಡ ಎಂದಿದ್ದಕ್ಕೆ ಕೋಪಗೊಮಡ ಪತ್ನಿ* ಮದುವೆಯಾದರೂ ಗಂಡನ ಮನೆಗೆ ಹೋಗಲು ತಯಾರಿಲ್ಲ

ಭೋಪಾಲ್(ಡಿ.05) ರಾಜಧಾನಿ ಭೋಪಾಲ್‌ನಲ್ಲಿ (Bhopal) ಪತಿ-ಪತ್ನಿಯರ ನಡುವಿನ ಜಗಳದ ವಿಭಿನ್ನ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಮನೆಯಿಂದ ಸಿಕ್ಕ ಕಾರು ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪತಿ ನಿರಾಕರಿಸಿ ಕಾರಣಕ್ಕೆ ಕೋಪಗೊಂಡ ಪತ್ನಿ ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವಿಚಾರವಾಗಿ ಜಗಳ ಹೆಚ್ಚಾಗಿದ್ದು, ಪತ್ನಿ ಅತ್ತೆಯ ಮನೆಗೆ ಹೋಗಲು ಮುಂದಾಗುತ್ತಿಲ್ಲ. ಪತ್ನಿಯ ವರದಕ್ಷಿಣೆ (Dowry) ಪಡೆಯಬೇಕೆಂಬ ಒತ್ತಾಯ ಇದೀಗ ಇಡೀ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿಸಿದೆ. ಪತ್ನಿಯನ್ನು ಮನೆಗೆ ಕಳುಹಿಸುವಂತೆ ಪತಿ ಹಿಂದೂ ವಿವಾಹ ಕಾಯ್ದೆಯ (Hindu Marriage Act) ಸೆಕ್ಷನ್ 9 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಈ ಪ್ರಕರಣ ರಾಜಧಾನಿ ಭೋಪಾಲ್‌ನ (Bhopal) ಐಷಾರಾಮಿ ಪ್ರದೇಶವಾದ ಅರೆರಾ ಕಾಲೋನಿಯದ್ದು. ಪುರುಷರಿಗಾಗಿ ಕೆಲಸ ಮಾಡುತ್ತಿರುವ ಭಾಯಿ ವೆಲ್ಫೇರ್ ಸೊಸೈಟಿಗೆ ಪತಿ ಸಂಪೂರ್ಣ ವಿಷಯದ ಬಗ್ಗೆ ಮಾಹಿತಿ ನೀಡಿದ್ದಾನೆ. ಅವರ ಮನೆ ಅರೆರಾ ಕಾಲೋನಿ ಇ -6 ನಲ್ಲಿದೆ ಎಂದು ಪತಿ ಸಂಸ್ಥೆಗೆ ತಿಳಿಸಿದ್ದಾರೆ. ಈ ವರ್ಷ ಫೆಬ್ರವರಿ 14 ರಂದು ಅವರ ಮದುವೆ ನಡೆದಿದೆ. ಮದುವೆಯ ಪ್ರತಿಯೊಂದು ವಿಧಿವಿಧಾನವನ್ನು ಮಾಡಲು, ಅವನು ತನ್ನ ಅತ್ತೆಯ ಮನೆಯಿಂದ ಕೇವಲ ಒಂದು ರೂಪಾಯಿ ಮೊತ್ತವನ್ನು ತೆಗೆದುಕೊಂಡಿದ್ದ. ಹೀಗಿದ್ದರೂ ಹೆಂಡತಿ ಕುಟುಂಬಸ್ಥರು ಕಾರು ಮತ್ತು ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ನಿಡಿದ್ದಾರೆ. ಆದರೆ ಪತಿ ಮಾತ್ರ ಇದೆಲ್ಲವನ್ನೂ ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಈ ವಿಚಾರದಲ್ಲಿ ಕೋಪಗೊಂಡ ಪತ್ನಿ ತನ್ನ ಮನೆಗೆ ಮರಳಿದ್ದಾಳೆ. ಕಳೆದ 3 ತಿಂಗಳಿಂದ ಪತ್ನಿ ಮನೆಗೆ ಬಂದಿರಲಿಲ್ಲ. ತಂದೆ-ತಾಯಿ ಕೊಟ್ಟ ವಸ್ತುಗಳನ್ನು ತೆಗೆದುಕೊಳ್ಳುವವರೆಗೆ ಗಂಡನ ಜೊತೆ ಬಾಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಪತಿ-ಪತ್ನಿಯರ ಹಠದಿಂದ ವಿವಾದ ಬಗೆಹರಿಯುತ್ತಿಲ್ಲ

ಈ ಪ್ರಕರಣ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದು ಇಬ್ಬರಿಗೂ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮಹಿಳೆಯ ತಾಯಿಯ ಮನೆಯಿಂದ ಪಡೆದ ವಸ್ತುಗಳನ್ನು ವರದಕ್ಷಿಣೆ ಎಂದು ಪರಿಗಣಿಸಬಾರದು ಎಂದು ಸಲಹೆಗಾರರು ಪತಿಗೆ ವಿವರಿಸಿದ್ದಾರೆ. ನೀವು ಯಾವುದೇ ಬೇಡಿಕೆ ಇಟ್ಟಿಲ್ಲ. ಅತ್ತೆ ತಮ್ಮ ಮಗಳಿಗೆ ಸರಕುಗಳನ್ನು ಕೊಡುತ್ತಿದ್ದಾರೆ. ಇದು ನಿಮ್ಮ ಹೆಂಡತಿಗಷ್ಟೆ, ಹೀಗಾಗಿ ಆಕೆಯಿಂದ ಅದನ್ನು ಕಸಿದುಕೊಳ್ಳಬೇಡಿ ಎಂದು ಅರ್ಥೈಸಿದೆ. ಸದ್ಯ ಮೊದಲ ಕೌನ್ಸೆಲಿಂಗ್ ನಲ್ಲಿ ಮಾತುಕತೆ ನಡೆದಿದ್ದು, ಇನ್ನು ಮುಂದೆ ಸಂಬಂಧ ಮುರಿದು ಬೀಳಬಾರದು ಎಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಯುತ್ತಿದೆ.

ವರದಕ್ಷಿಣೆ ತರಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಗಂಡ

ತವರು ಮನೆಯಿಂದ ವರದಕ್ಷಿಣೆ(Dowry) ತರಲಿಲ್ಲವೆಂದು ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ನೇತ್ರಮ್ಮ(23) ಕೊಲೆಯಾದ ದುರ್ದೈವಿ. ಆರೋಪಿ(Accused) ವಿಜಯಕುಮಾರ ಮತ್ತು ಆತನ ಕುಟುಂಬದ ನಾಲ್ವರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೃತ ನೇತ್ರಮ್ಮನ ಮನೆಯವರು ಅರೋಪಿಸಿದ್ದಾರೆ. ನೇತ್ರಮ್ಮಳು ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಾಬಿಗೆರೆ ಗ್ರಾಮದವಳಾಗಿದ್ದು, ಕಳೆದ 2 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಕೊರಚರಹಟ್ಟಿ ಗ್ರಾಮದ ವಿಜಯಕುಮಾರನಿಗೆ ಮದುವೆ(Marriage) ಮಾಡಿಕೊಡಲಾಗಿತ್ತು. ಮದುವೆ ನಂತರ ದಿನಗಳಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು.

ಗುರುವಾರ ನೇತ್ರಮ್ಮಳೊಂದಿಗೆ ಜಗಳವಾಡಿ ನಂತರ ಮನೆಯವರು ಸೇರಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಶೇಖರಪ್ಪ ನೀಡಿದ ದೂರಿನಂತೆ ತಾಲೂಕಿನ ಹೊಸಹಳ್ಳಿ ಠಾಣೆಯಲ್ಲಿ ಗುರುವಾರ ರಾತ್ರಿ ನಾಲ್ವರ ವಿರುದ್ಧ ಪ್ರಕರಣ(Case) ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ ರೆಡ್ಡಿ, ಕೊಟ್ಟೂರು ಸಿಪಿಐ ಮುರುಗೇಶ, ಹೊಸಹಳ್ಳಿ ಪಿಎಸ್‌ಐ ತಿಮ್ಮಣ್ಣ ಚಾಮನೂರು ಭೇಟಿ ನೀಡಿ ಪರಿಶೀಲಿಸಿದ್ದಾರೆ.