ಬೀಟಿಂಗ್ ರಿಟ್ರೀಟ್‌ನಲ್ಲಿ ಡ್ರೋನ್, ಲೇಸರ್ ಶೋಬ್ರಿಟಿಷರ ಹಾಡು ಕೈಬಿಟ್ಟು ಭಾರತದ ದೇಶಭಕ್ತಿಗೀತೆ1 ಸಾವಿರ ಡ್ರೋನ್ ಬಳಸಿ ಆಕರ್ಷಕ ಕಾರ್ಯಕ್ರಮ
ನವದೆಹಲಿ (ಜ. 29): ನೇತಾಜಿ ಸುಭಾಷ್‌ಚಂದ್ರ ಬೋಸ್ (Netaji Subhash Chandra Bose) ಅವರ ಜನ್ಮದಿನ ಜ.23ರಿಂದ ಆರಂಭವಾದ 73ನೇ ಗಣರಾಜ್ಯೋತ್ಸವ (Republic Day celebrations)ಸಂಭ್ರಮ ಶನಿವಾರ ನವದೆಹಲಿಯ ಐತಿಹಾಸಿಕ ಲಾಲ್‌ಚೌಕ್‌ನಲ್ಲಿ ನಡೆದ ಬೀಟಿಂಗ್ ರಿಟ್ರೀಟ್ (ಸಮಾರೋಪ ಸಮಾರಂಭ) ಕಾರ‍್ಯಕ್ರಮದೊಂದಿಗೆ ಅದ್ಧೂರಿಯಾಗಿ ತೆರೆ ಕಂಡಿತು.
ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿರುವ ಸ್ಮರಣಾರ್ಥ ಈ ಬಾರಿ ಗಣರಾಜ್ಯೋತ್ಸವವು ವಿಭಿನ್ನವಾಗಿ ಹಲವು ವಿಶೇಷತೆಗಳೊಂದಿಗೆ ನೆರವೇರಿತು. ಸಾಮಾನ್ಯವಾಗಿ ಜ.24ರಿಂದ ಆರಂಭವಾಗುತ್ತಿದ್ದ ಗಣರಾಜ್ಯ ಸಂಭ್ರಮ ಈ ಬಾರಿ ನೇತಾಜಿ ಜನ್ಮದಿನ ಜ.23ರಿಂದಲೇ ಆರಂಭವಾಗಿತ್ತು. ಶನಿವಾರ ನಡೆದ ಬೀಟಿಂಗ್ ರಿಟ್ರೀಟ್ (Beating Retreat)ಕಾರ‍್ಯಕ್ರಮ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯಡಿಯಲ್ಲಿ ನಡೆಯಿತು.
ಕಾರ‍್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind) , ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್ (Minister of Defence Rajnath Singh), ಸೇನಾ ಮುಖ್ಯಸ್ಥ ಮುಕುಂದ್ ನರವಣೆ (Chairman of the Chiefs of Staff Committee Manoj Mukund Naravane), ನೌಕಾದಳ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ವಾಯುಸೇನಾ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್.ಚೌದರಿ ಮತ್ತಿತರ ಗಣ್ಯರು ಭಾಗಿಯಾಗಿದ್ದರು. ಪರಿಸರ ಸ್ನೇಹಿ ಕ್ರಮದ ಭಾಗವಾಗಿ ಭಾಗಿಯಾದ ಅಥಿತಿಗಳಿಗೆ ಆಶ್ವಗಂಧ, ಲೋಳೆಸರ, ನೆಲ್ಲಿಕಾಯಿ ಮುಂತಾದ ಔಷಧೀಯ ಸಸ್ಯಗಳ ಬೀಜವನ್ನು ಹುದುಗಿಸಲಾಗಿದ್ದ ಕಾರ್ಡ್ ನೀಡಲಾಯಿತು.
1000 ಡ್ರೋನ್‌ಗಳ ಬಣ್ಣದಾಟ: ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಡ್ರೋನ್‌ಗಳನ್ನು ಬಳಸಿ ಆಕರ್ಷಕ ಕ್ರಮ ನೀಡಲಾಯಿತು. ದೇಶೀಯವಾಗಿ ನಿರ್ಮಿತ 1000 ಡ್ರೋನ್‌ಗಳು ಏಕಕಾಲದಲ್ಲಿ ಹಾರಾಟ ನಡೆಸಿ ಭಾರತ ನಕ್ಷೆ, ಮೇಕ್ ಇನ್ ಇಂಡಿಯಾ ಲೋಗೋ, 75 ಆಜಾದಿ ಕಾ ಅಮೃತ ಮಹೋತ್ಸವ (azadi ka amrit mahotsav)ಮತ್ತಿತರ ರಚನೆಗಳನ್ನು ಸೃಷ್ಟಿಸಿದ್ದು ಮನಮೋಹಕವಾಗಿತ್ತು. ದೆಹಲಿ ಐಐಟಿ (IIT Delhi) ಸಹಯೋಗದಲ್ಲಿ ಬಾಟ್‌ಲ್ಯಾಬ್ ಡೈನಾಮಿಕ್ಸ್ ಸ್ಟಾರ್ಟಪ್ ಡ್ರೋನ್ ಶೋ ಆಯೋಗಿಸಿತ್ತು. ಅಲ್ಲದೆ ಗಣರಾಜ್ಯೋತ್ಸವ ಇತಿಹಾಸದಲ್ಲೇ ಮೊದಲ ಬಾರಿಗೆ ಲೇಸರ್ ಶೋ ಏರ್ಪಡಿಸಲಾಗಿತ್ತು.
Republic Day 2022: ಗಣರಾಜ್ಯೋತ್ಸವದಲ್ಲಿ ರಾರಾಜಿಸಲಿದೆ ಕರ್ನಾಟಕದ ಸ್ಥಬ್ಧಚಿತ್ರ: ಸತತ 13ನೇ ಬಾರಿಗೆ ಭಾಗಿ!
“ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಮೊದಲ ಬಾರಿಗೆ 1,000 ಡ್ರೋನ್‌ಗಳು ಆಕಾಶವನ್ನು ಬೆಳಗಿಸುತ್ತವೆ ಎಂಬುದು ಹೆಮ್ಮೆಯ ವಿಷಯ. ಯುಕೆ, ರಷ್ಯಾ ಮತ್ತು ಚೀನಾ ನಂತರ ಈ ಸಾಧನೆ ಮಾಡಿದ ವಿಶ್ವದ 4 ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ಕೇಮದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದರು.
Republic Day ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಬ್ರಿಟಿಷ್ ಅಬೈಡ್ ಮಿತ್ ಗೀತೆ ಬದಲಿಗೆ ಏ ಮೇರೆ ವತನ್ ಹಾಡು: ಗಣರಾಜ್ಯೋತ್ಸವ ಕಾರ್ಯಕ್ರಮದ ಮುಕ್ತಾಯದ ಭಾಗವಾಗಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ಈ ಬಾರಿ ವಸಾಹತುಶಾಹಿ (ಬ್ರಿಟಿಷರ) ಕಾಲದ ಹಾಗೂ ವಿಶ್ವಯುದ್ಧದ ಕಾಲದ ಗೀತೆಯಾಗಿದ್ದ ‘ಅಬೈಡ್ ವಿತ್ ಮಿ’ ಗೀತೆಯನ್ನು ಕೈಬಿಟ್ಟು, ಭಾರತೀಯ ದೇಶಭಕ್ತಿಗೀತೆ ‘ಏ ಮೇರೆ ವತನ್’ ಹಾಡನ್ನು ನುಡಿಸಲಾಯಿತು. ‘ಸಾರೇ ಜಹಾನ್ ಸೇ ಅಚ್ಚಾ’ ಹಾಡಿನ ಮೂಲಕ ಕಾರ‍್ಯಕ್ರಮವನ್ನು ಸಮಾರೋಪಗೊಳಿಸಲಾಯಿತು. ಈ ವರ್ಷದ ಸಮಾರಂಭದಲ್ಲಿ ನುಡಿಸಲಾದ 26 ರಾಗಗಳಲ್ಲಿ 'ಹೇ ಕಾಂಚಾ', 'ಚನ್ನ ಬಿಲೌರಿ', 'ಜೈ ಜನಂ ಭೂಮಿ', 'ನೃತ್ಯ ಸರಿತಾ', 'ವಿಜಯ್ ಜೋಶ್', 'ಕೇಸರಿಯಾ ಬನ್ನಾ', 'ವೀರ್ ಸಿಯಾಚಿನ್', 'ಹತ್ರೋಯ್' ಸೇರಿವೆ. , 'ವಿಜಯ್ ಘೋಷ್', 'ಲಡಾಕೂ', 'ಸ್ವದೇಶಿ', 'ಅಮರ್ ಚಟ್ಟನ್', 'ಗೋಲ್ಡನ್ ಆರೋಸ್' ಮತ್ತು 'ಸ್ವರ್ಣ ಜಯಂತಿ', ಸೇರಿದ್ದವು. ಸಮಾರಂಭದಲ್ಲಿ 44 ಬಗ್ಲರ್‌ಗಳು, 16 ಟ್ರಂಪೆಟರ್‌ಗಳು ಮತ್ತು 75 ಡ್ರಮ್ಮರ್‌ಗಳು ಭಾಗವಹಿಸಿದ್ದರು. ಶನಿವಾರ ಮಧ್ಯಾಹ್ನ 2 ರಿಂದ ರಾತ್ರಿ 9.30 ರವರೆಗೆ ಸಂಚಾರ ನಿರ್ಬಂಧಗಳನ್ನು ದೆಹಲಿಯಲ್ಲಿ ಜಾರಿಗೊಳಿಸಲಾಗಿತ್ತು.
