ನದಿ ತೀರದಲ್ಲಿ ಕುಳಿತು ಜಿಟಿಜಿಟಿ ಮಳೆಯಲ್ಲಿ ಬಿಸಿ ಚಹಾ ಸವಿದ ಮೋದಿ
ದೂರದಲ್ಲಿ ಕಾಣುವ ದಟ್ಟ ಕಾಡು, ಪಕ್ಕದಲ್ಲೇ ಹರಿಯುವ ನದಿ, ಜಿಟಿಜಿಟಿ ಮಳೆ, ದಂಡೆಯ ಮೇಲೆ ಮೊಣಕಾಲೂರಿ ಕೂತ ಪ್ರಧಾನಿ..! ಮೋದಿಗೆ ಬಿಸಿ ಚಹಾ ಕೊಟ್ರು ಅಮೆರಿಕನ್ ಸಾಹಸಿ
ಬ್ರಿಟಿಷ್ ಸಾಹಸಿ ಬೇರ್ ಗ್ರಿಲ್ಸ್ ಶುಕ್ರವಾರ ಚಂದದ್ದೊಂದು ಫೋಟೋ ಶೇರ್ ಮಾಡಿದ್ದಾರೆ. ಎಡ್ವೆಂಚರರ್ ಆಗಿರೋ ಅವರು ಚಂದದ ಫೋಟೋ ಶೇರ್ ಶೇರ್ ಮಾಡಿದ್ದು ಇದೇ ಮೊದಲಲ್ಲ ಬಿಡಿ, ಆದ್ರೆ ಈ ಬಾರಿ ಪೋಸ್ಟ್ ಮಾಡಿದ ಪೋಟೋದಲ್ಲಿ ವಿಶೇಷತೆ ಇದೆ.
ತಮ್ಮ ಪ್ರಸಿದ್ಧ ಶೋ ಮ್ಯಾನ್ v/s ವೈಲ್ಡ್‌ನ ಒಂದು ಫೋಟೋ ಶೇರ್ ಮಾಡಿದ್ದಾರೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೇರ್ ಗ್ರಿಲ್ಸ್ ಅತಿಥಿಯಾಗಿ ಅವರ ಜೊತೆ ಭಾಗಿಯಾದಾಗಿನ ಫೋಟೋ ಇದು. ಇದು ತಮ್ಮ ಫೇವರೇಟ್ ಫೋಟೋ ಎಂದಿದ್ದಾರೆ ಬೇರ್ ಗ್ರಿಲ್ಸ್. ಅರಣ್ಯ ಅಲ್ಟಿಮೇಟ್ ಲೆವೆಲರ್ ಎಂದು ಕ್ಯಾಪ್ಶನ್ ಬರೆದಿದ್ದಾರೆ ಗ್ರಿಲ್ಸ್.
ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO
ಖ್ಯಾತಿ, ಬಿರುದು, ಪರಿಚಯಗಳ ಹಿಂದೆ ನಾವೆಲ್ಲರೂ ಸಮಾನರು. ಇಬ್ಬರು ವ್ಯಕ್ತಿಗಳು ಚಹಾ ಹಂಚಿಕೊಂಡು ತಮ್ಮನ್ನು ತಾವು ಬೆಚ್ಚಗಿರಿಸಿಕೊಳ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ತಮ್ಮ 1.5 ಫಾಲೋವರ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಕಾಲಿಗೆ ನೀರು ಟಚ್ ಕುಡಾ ಆಗಲು ಬಿಡುವುದಿಲ್ಲ ಎಂದು ಗ್ರಿಲ್ಸ್ ಅವರು ಪ್ರಧಾನಿ ಭದ್ರತಾ ಸಿಬ್ಬಂದಿ ನ್ಯಷನಲ್ ಸೆಕ್ಯುರಿಟಿ ಸಿಬ್ಬಂದಿಗೆ ಮಾತುಕೊಟ್ಟಿದ್ದೆ. ಆದ್ರೆ ಆ ಪ್ರಾಮಿಸ್ ವರ್ಕೌಟ್ ಆಗಲಿಲ್ಲ ಎಂದು ಹಾಸ್ಯವಾಗಿ ನುಡಿದಿದ್ದಾರೆ.